ಮನೆಗೆ ಬೆಂಕಿ-ಅಪಾರ ಹಾನಿ

ಮುಂಡಗೋಡ.ಜ4: ಪಟ್ಟಣದ ಆನಂದ ನಗರದಲ್ಲಿ ಬುಧವಾರ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.
ಶೇಖಯ್ಯಾ ಹಿರೇಮಠ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯವರು ನೀರು ಕಾಯಿಸಲು ಬೆಂಕಿ ಹಚ್ಚಿ ಹೊರಗೆ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ನೋಡ ನೋಡುತ್ತಲೆ ಬೆಂಕಿಯು ವ್ಯಾಪಿಸಿದೆ ಈ ಬೆಂಕಿ ಇತರ ಮನೆಗಳಿಗೂ ವ್ಯಾಪಿಸುವ ಸಾಧ್ಯತೆ ಕೂಡ ಇತ್ತು. ಅಷ್ಟರಲ್ಲಿ ಅಗ್ನಿಶಾಮಕ ದಳದವರ  ಕಾರ್ಯಾಚರಣೆಯಿಂದಾಗಿ ಬೆಂಕಿ ವ್ಯಾಪಿಸುವುದನ್ನು ತಡೆಯಲು ಸಾಧ್ಯವಾಗಿದೆ. ಈ ಅವಘಡದಿಂದ ಕಟ್ಟಿಗೆ, ಹಂಚು, ಪಾತ್ರೆಗಳು, ಟಿ.ವಿ. ಮುಂತಾದ ಗೃಹ ಬಳಕೆ ವಸ್ತುಗಳು, ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಈ ಅವಘಡದಿಂದ ಸುಮಾರ 20 ಸಾವಿರ ಹಾನಿಯಾಗಿದೆ ಎನ್ನಲಾಗಿದೆ.
ಅಗ್ನಿ ಶಾಮಕದಳದ ಸಿಬ್ಬಂದಿಗಳಾದ ಯು.ಎಲ್.ಬಾಳೆಕಟ್ಟಿ, ಬಸವರಾಜ ಇಂಚಲ, ಗುರುಪ್ರಸಾದ ಕಮಲಾಕರ, ದುರ್ಗಪ್ಪ ಹರಿಜನ, ಶಿವಾಜಿ ರಾಣಿಗೇರ, ಲಕ್ಷ್ಮಣ ವರಕ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿದ್ದರು.

Leave a Comment