ಮನು ಭಕೆರ್‌ಗೆ ಶೂಟಿಂಗ್ ಚಿನ್ನ

ನವದೆಹಲಿ, ಮಾ. ೫- ಮೆಕ್ಸಿಕೋದ ಗೌಡ್ಲಾಜರಾ‌ದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ ವಿಶ್ವ ಶೂಟಿಂಗ್ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಮನು ಭಕೆರ್‌ಗೆ ಚಿನ್ನದ ಪದಕ ಗಳಿಸಿದ್ದಾರೆ.

10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಆತಿಥೇಯ ಅಲೆಜಿಂದ್ರಾ ಜವಾಲಾ ಅವರನ್ನು ಮಣಿಸಿದರು. ಮನು ಅವರು 237.5 ಅಂಕಗಳನ್ನು ಗಳಿಸಿದರೆ, ಜವಾಲಾ 237.1 ಹಾಗೂ ಫ್ರಾನ್ಸ್ ನ ಸೆಲಿನ್ ಗೋಬರ್ ವಿಲೆ 217 ಅಂಕಗಳಿಸಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಭಾರತ ಮತ್ತೊಬ್ಬ ಮಹಿಳಾ ಶೂಟರ್ ಯಶ್ವಸಿ ಸಿಂಗ್ ದೇಸ್ವಾಲ್ 196.1 ಅಂಕದೊಂದಿಗೆ ನಾಲ್ಕನೇ ಸ್ಥಾನಗಳಿಸಿ ಪದಕ ವಂಚಿತರಾದರು.

ಇದರೊಂದಿಗೆ ಭಾರತ ಸ್ಪರ್ಧೆಯಲ್ಲಿ ಎರಡು ಚಿನ್ನ, ಮೂರು ಕಂಚಿನ ಪದಕಗಳನ್ನು ಗಳಿಸಿದೆ. ಭಾರತದ ಶೂಟರ್‌ಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ.

ರಾಷ್ಟ್ರೀಯ ರೈಫಲ್ ಸಂಘದ ಅಧ್ಯಕ್ಷ ರವೀಂದರ್ ಸಿಂಗ್ ಪ್ರತಿಕ್ರಿಯಿಸಿ, ಯುವ ಆಟಗಾರರು ದೇಶದ ಕನಸನ್ನು ನನಸು ಮಾಡುತ್ತಿದ್ದಾರೆಂದು ಬಣ್ಣಿಸಿದರು.

Leave a Comment