’ಮನುಷ್ಯರಲ್ಲಿ ದೇವರನ್ನು ಕಂಡವರು ಅರಸು’ – ಡಾ|| ಜ್ಯೋತಿ ಚೇಳಾರು

ಮಂಗಳೂರು, ಆ.೨೩- ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಿಂದುಳಿದ ಜಾತಿಗಳ ಒಕ್ಕೂಟ ಮಂಗಳೂರು (ರಿ) ಇದರ ವತಿಯಿಂದ ಮಂಗಳೂರಿನ ನಾರಾಯಣ ಗುರು ಮಹಾವಿದ್ಯಾಲಯದಲ್ಲಿ ಜರಗಿದ ಹಿಂದುಳಿದವರ ಮಹಾನ್ ನಾಯಕ ಶ್ರೀ ಡಿ ದೇವರಾಜ ಅರಸುರವರ ೧೦೫ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ, ಮುಖ್ಯ ಅತಿಥಿ ಭಾಷಣ ಮಾಡಿದ ಎರ್ಮಾಳು ಬಡಾ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ|| ಜ್ಯೋತಿ ಚೇಳಾರುರವರು ಹೇಳಿದರು. ದೀನ ದಲಿತರ ಶೋಷಿತ ವರ್ಗದವರ ನೇತಾರ ಅರಸು. ಹಿಂದುಳಿದವರನ್ನು ಮುಂದಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದವರು ಅರಸು. ಸಣ್ಣ ಪ್ರಾಯದಲ್ಲೇ ಶಾಸಕರಾಗಿ, ಕುಟುಂಬದ ಚಿಂತನೆಗಿಂತ ಸಮಾಜದ ಚಿಂತನೆ ಮಾಡಿದವರು ಅರಸು. ಎರಡು ಬಾರಿ ಮುಖ್ಯಮಂತ್ರಿಯಾದವರು, ಶ್ರೀ ದೇವರಾಜ ಅರಸುರವರು ಸಾಮಾಜಿಕ ಕಳಕಳಿಯಿಂದ ಭೂಮಸೂದೆ ಜ್ಯಾರಿಗೆ ತಂದರು. ಪಾಳೆಗಾರಿಕೆ ವ್ಯವಸ್ಥೆಯ ಅರಸುರವರು ಉಳುವವನೇ ಹೊಲದೊಡೆಯ ಎಂದು ಉಳುವವನಿಗೆ ಭೂಮಿ ನೀಡಿದರು. ಕೇರಳದಲ್ಲಿ ಅರ್ಧ ಭೂಮಿ ಉಳುವವನಿಗೆ ಅರ್ಧ ಧನಿಗೆ, ಅದರಲ್ಲೂ ಮೊದಲ ಆಯ್ಕೆ ಧನಿಯದ್ದು, ಅರಸು ಎಲ್ಲಾ ಭೂಮಿಯನ್ನು ಉಳುವವನಿಗೆ ಭೂಮಿ ನೀಡಿದರು. ಒಕ್ಕಲೆಬ್ಬಿಸುವಲ್ಲಿ ಜಮೀನಿನ ಒಡೆಯ ಪ್ರಬಲನಾಗಿದ್ದು ಕೊಡಬಾರದ ಕಷ್ಟಗಳಿಗೊಳಪಡಿಸುತ್ತಿದ್ದ. ಆದರೆ ಭೂಮಸೂದೆಯಲ್ಲಿ ದ.ಕ.ಜಿಲ್ಲೆಯಲ್ಲಿ ಭೂಮಂಜೂರಾತಿಯಲ್ಲಿ ಕಾನೂನು ಪ್ರಬಲವಾಗಿತ್ತು. ಭೂಮಸೂದೆಯ ವಿಚಾರ ಇಂದಿರಾ ಗಾಂಧಿಯವರ ೨೦ ಅಂಶದಲ್ಲಿತ್ತು. ಆದರೆ ಜ್ಯಾರಿಯಾದದ್ದು ಕರ್ನಾಟಕದಲ್ಲಿ ಅರಸುರವರಿಂದ. ಭೂಮಸೂದೆಯಲ್ಲಿ ಒಂದನೆ ತಲೆಮಾರಿಗೆ ಜಮೀನು ಮಂಜೂರಾಯಿತು. ಎರಡನೇ ತಲೆಮಾರಿನಲ್ಲಿ ಮಾತೃ ಕುಟುಂಬದಲ್ಲಿ ಭಿನ್ನತೆ ಉಂಟಾಗಿ ಜಮೀನು ಮಾರಿ ನಗದಾಗಿಸುವಂತಾಯಿತು. ಅರಸುರವರು ಹಾವನಾರು ಆಯೋಗದ ಮುಖಾಂತರ ಅಭಿವೃದ್ಧಿಗೆ ಸಂವಿಧಾನ ವಿಧಿ ೧೫(೪) ೧೬(೪) ರಲ್ಲಿ ಒದಗಿಸಿರುವ ಮೀಸಲಾತಿ ಜ್ಯಾರಿಗೆ ತಂದು ಕಾರಣರಾದರು. ಜೀತ ಮತ್ತು ಜಾತಿ ಬಗ್ಗೆ ಇರುವ ಕೀಳು ಮೇಲು ಸಂಬಂಧವನ್ನು ಜೀತಮುಕ್ತಗೊಳಿಸಿ ಕೊನೆಗೊಳಿಸಿದರು. ಹಿಂದುಳಿದವರು ಇಂದು ಸ್ವಲ್ಪ ಮಟ್ಟಿಗೆ ಮುಂದುವರಿದಿದ್ದರೆ, ಹಿಂದುಳಿದವರನ್ನು ದಾಸ್ಯ ಪದ್ದತಿಯಿಂದ ಹೊರತಂದು ಶೈಕ್ಷಣಿಕ, ಔದ್ಯೋಗಿಕ ಮತ್ತಿತರ ಕ್ಷೇತ್ರಗಲಲ್ಲಿ ಮುಂದುವರಿಯುವಂತೆ ಮಾಡಿದವರು ಅರಸು. ಮಾನವರು ಮಾನವರ ಮಲ ಹೊರುವ ಕೆಟ್ಟ, ದುಷ್ಟ ಪದ್ದತಿಯನ್ನು ನಿರ್ಮೂಲ ಮಾಡಿದವರು ಅರಸು. ಋಣ ಮುಕ್ತ ಕಾಯಿದೆ ಜ್ಯಾರಿ,
ಬಡ್ಡಿಯಿಂದ ದುರ್ದೆಸೆಗೊಳಗಾದವರನ್ನು ಕಾಪಾಡಿದವರು ಅರಸು. ಹಿಂದುಳಿದ ಬೇರೆ ಬೇರೆ ಜಾತಿಗಳವರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ, ಅನುದಾನ ನೀಡಿ, ಕುಲಕಸುಬನ್ನು ಅಭಿವೃದ್ಧಿಪಡಿಸುವುದರೊಂದಿಗೆ ಸ್ವಾವಲಂಬನೆಯ ಬದುಕು ನೀಡಿದವರು ಅರಸು, ಮೈಸೂರಿನವರಾಗಿದ್ದು ಮೈಸೂರು ರಾಜ್ಯಕ್ಕೆ ’ಕರ್ನಾಟಕ’ ಎಂದು ನಾಮಕರಣ ಮಾಡಿದ ಎದೆಗಾರಿಕೆ, ಧೀಮಂತತನ ತೋರಿದವರು ಅರಸು. ಇಂದು ಶಾಲೆಗಳಲ್ಲಿ ಸದ್ಭಾವನ ದಿನಾಚರಣೆ ಮಾಡಿ, ಅರಸುರವರ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಲಾಗುತ್ತದೆ. ಗ್ರಾಮೀಣ ಜನತೆಗೆ ಮೀಸಲಾತಿ ನೀಡಿ ಜೀವನ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟವರು ಅರಸು. ಈ ರೀತಿ ಎಲ್ಲರಿಗೆ ಅದರಲ್ಲೂ ದೀನದಲಿತರಿಗೆ ಸ್ವಾಭಿಮಾನದ ಜೀವನ ಕಟ್ಟಿ ಕೊಟ್ಟ ಅಪರೂಪದ ರಾಜಕಾರಣಿ, ನೇತಾರ, ಅಡಳಿತಗಾರ ಅರಸು ಸದಾ ಸ್ಮರಣಿಯರು. ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಹಿಂದುಳಿದವರು ಸಂಘಟಿತರಾಗಿ ಪ್ರಯತ್ನಿಸಬೇಕು.
ಪ್ರಾರಂಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಿರಿಯ ಕಾರ್ಯಕರ್ತ ಯಂ ಜಯಾನಂದ ದೇವಾಡಿಗರು ಸ್ವಾಗತಿಸಿದರು. ಅಧ್ಯಕ್ಷ ನವೀನಚಂದ್ರ ಡಿ ಸುವರ್ಣರವರು ಅಧ್ಯಕ್ಷತೆಯನ್ನು ವಹಿಸಿ ತನ್ನ ಭಾಷಣದಲ್ಲಿ ಅರಸು ಬಗ್ಗೆ ಬಹಳ ವರ್ಷಗಳಿಂದ ಅವರ ಜನ್ನದಿನಾಚರಣೆ ಸಮಾರಂಭವನ್ನು ನಡೆಸಿ ಹಿರಿಯರಾದ ಜಯಾನಂದ ದೇವಾಡಿಗರು ಹೆಚ್ಚಿನ ವಿಚಾರ ತಿಳಿಸುತ್ತಾ ಬಂದಿದ್ದಾರೆ. ಇಂದು ಡಾ|| ಜ್ಯೋತಿ ಚೇಳಾರುರವರು ತನ್ನ ಅದ್ಯಯನ, ಸಂಶೋಧನೆಯ ಮುಖೇನ ಅರಸು ಕೆಲಸ ಕಾರ್ಯಗಳನ್ನು ಅವುಗಳ ಮಹತ್ವವನ್ನು ತಿಳಿಸಿ ಅರಸುರವರಲ್ಲಿ ದೇವರನ್ನು ಕಂಡವರೆಂಬುದನ್ನು ಪ್ರಮಾಣಿಕರಿಸಿ ತಿಳಿಸಿದ್ದಾರೆ ಎಂದರು. ಉಪಕಾರ್ಯದರ್ಶಿ ಕೆ ಆರ್ ನಾಥ್ ರವರು ತಾನು ಕಂದಾಯ ಅಧಿಕಾರಿಯಾಗಿ ಕುಂದಾಪುರದ ಕಡೆ ಜಮೀನುದಾರರು ಗೇಣಿದಾರರನ್ನು ಸತಾಯಿಸಿರುವುದನ್ನು ತಿಳಿಸಿ, ಡಾ|| ಜ್ಯೋತಿ ಚೇಳಾರುರವರು ಬಹಳ ಅಧ್ಯಯನ ನಡೆಸಿ ಈ ತನಕ ನಿರೂಪಿಸದ ವಿಚಾರಗಳನ್ನು ಎಳೆಎಳೆಯಾಗಿ ಮನಸ್ಸಿಗೆ ನಾಟುವಂತೆ ವಾಸ್ತವಿಕೆಯನ್ನು ಎತ್ತಿ ಹಿಡಿದು ತಿಳಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದಗಳನ್ನು ಅರ್ಪಿಸಿದರು.
ಹಿರಿಯ ಮಹಿಳಾ ಕಾರ್ಯಕರ್ತೆ ಶ್ರೀಮತಿ ಸರೋಜಿನಿ ಜೆ ದೇವಾಡಿಗರು ಡಾ|| ಜ್ಯೋತಿ ಚೇಳಾರುರವರಿಗೆ ಹಾರಾರ್ಪಣೆ ಮಾಡಿ ಗೌರವಿಸಿದರು.
ಚಿತ್ರದಲ್ಲಿ ಡಾ|| ಜ್ಯೋತಿ ಚೇಳಾರುರವರು ದೀಪ ಬೆಳಗಿಸಿ ಜನ್ಮಾದಿನಚರಣೆ ಸಮರಂಭವನ್ನು ಉದ್ಘಾಟಿಸಿದ್ದು, ಬಲದಿಂದ ಎಡಕ್ಕೆ ಬಿ ಮೋಹನದಾಸ ನಾಯಕ್, ಪುರುಶೊತ್ತಮ ಕೊಟ್ಟಾರಿ ಮಲ್ಲೂರು, ಎ ಕೆ ಭಂಡಾರಿ, ಯಮ ಜಯಾನಂದ ದೇವಾಡಿಗ, ನವೀನಚಂದ್ರ ಸುವರ್ಣ, ಕೆ ಆರ್ ನಾಥ್‌ರವರಿದ್ದಾರೆ.

Leave a Comment