ಮನುಷ್ಯನ ದುರಾಸೆಯೇ ಇಂದಿನ ಎಲ್ಲಾ ಅವಘಡಗಳಿಗೂ ಕಾರಣ

ಮೈಸೂರು. ಆ.21. ಪ್ರಕೃತಿಗೆ ವಿರುದ್ಧವಾಗಿ ಹೋಗುತ್ತಿರುವುದೇ ಇಂದಿನ ಎಲ್ಲ ಅವಘಡಗಳಿಗೂ ಕಾರಣವಾಗಿದೆ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮನ: ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ|| ಬಿ.ಎನ್. ರವೀಶ್ ಅಭಿಪ್ರಾಯ ಪಟ್ಟರು.
ಅವರು ಇಂದು ಬೆಳಗ್ಗೆ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವಧಕ ಪ್ರಥಮ ದರ್ಜೆಕಾಲೇಜಿನ ಸಭಾಂಗಣದಲ್ಲಿ ಕಾಲೇಜು ವತಿಯಿಂದ ಆಯೋಜಿಸಿದ್ದ ಯೂತ ರೆಡ್ ಕ್ರಾಸ್ ಚಟುವಟಿಕೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ಇತ್ತೀಚೆಗೆ ನೆರೆರಾಜ್ಯ ಕೇರಳ ಹಾಗೂ ನಮ್ಮ ರಾಜ್ಯದ ಕೊಡಗು ಜಿಲ್ಲೆಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಇದಕ್ಕೆ ಕಾರಣ ಮನುಷ್ಯನ ದುರಾಸೆಯಿಂದಾಗಿ ಆತ ಪ್ರಕೃತಿಯ ವಿರುದ್ಧವಾಗಿ ಹೋಗುತ್ತಿರುವುದೇ ಆಗಿದೆ ಎಂದರು. ಹಿಂದಿನ ದಿನಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ರಾಜಕಾಲುವೆಗಳನ್ನು ನಿರ್ಮಿಸಲಾಗಿತ್ತು. ಆದರೆ ಜನಸಂಖ್ಯಾಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮನುಷ್ಯ ತಾನು ಜೀವಿಸಲು ಪೂರ್ವಿಕರು ನಿರ್ಮಿಸಿದ್ದ ರಾಜಕಾಲುವೆಗಳ ಮೇಲೆ ಮನೆಗಳನ್ನು ನಿರ್ಮಿಸಿಕೊಂಡಿರುವುದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಭೂಮಿಯಲ್ಲೇ ಇಂಗುವದರಿಂದ ವಿಪರೀತ ಶೈತ್ಯವಾಗಿ ಕಟ್ಟಿದ ಮನೆಗಳ ಬುನಾದಿ ನಾಶವಾಗಿ ಕಟ್ಟಡ ಕುಸಿಯುವುದರೊಂದಿಗೆ ಅಪಾರ ಜೀವಹಾನಿಗೂ ಕಾರಣಕರ್ತವಾಗುತ್ತದೆ ಎಂದು ಹೇಳಿದ ಡಾ|| ರವೀಶ್ ಪ್ರಕೃತಿಯ ವಿರುದ್ಧವಾಗಿ ಮುಂದಾಗುವುದನ್ನು ಇಂದಿನಿಂದಲಾದರೂ ನಿಲ್ಲಿಸುವುದರ ಮೂಲಕ ಭವಿಷ್ಯದಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಬಹುದಾಗಿದೆ ಎಂದರು.
ರೆಡ್‍ಕ್ರಾಸ್ ಸಂಸ್ಥೆಯು ಒಂದು ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು ಅದರ ಕಾರ್ಯಕರ್ತರು ಪ್ರಕೃತಿ ವಿಕೋಪಗಳಿಂದ ಹಾನಿಗೊಳಗಾದವರ ಸಹಾಯಕ್ಕೆ ಯಾವುದೇ ಆಸೆ ಆಕಾಂಕ್ಷಿಗಳಿಲ್ಲದೆ ಧಾವಿಸುತ್ತಾರೆ. ಇದು ನಿಜವಾಗಿಯೂ ಅತ್ಯಂತ ಶ್ಲಾಘನೀಯವಾದ ಕಾರ್ಯವಾಗಿದೆ ಎಂದು ತಿಳಿಸಿದ ಡಾ|| ರವೀಶ ಈ ಸಂಸ್ಥೆಯಲ್ಲಿ ತಾವೂ ಸಹಾ ಕಾರ್ಯಕರ್ತರಾಗಿ ಪಾಲ್ಗೊಂಡು ನೊಂದವರ ಪಾಲಿಗೆ ಸಹಾಯ ಹಸ್ತ ನೀಡುವಂತೆ ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿ ಮಹದೇವಪ್ಪ ಮಾತನಾಡಿ, ನಮ್ಮ ಜಿಲ್ಲೆಯಲ್ಲಿಯೂ ರೆಡ್ ಕ್ರಾಸ್ ಸಂಸ್ಥೆಯ ಶಾಖೆಯು ಕರ್ತವ್ಯ ನಿರ್ವಹಿಸುತ್ತಿದ್ದು ಯಾವುದೇ ಪ್ರಕೃತಿ ವಿಕೋಪಗಳು ಸಂಭವಿಸಿದರ ಬಗ್ಗೆ ನಮಗೆ ಮಾಹಿತಿ ತಿಳಿಸಿದಲ್ಲಿ ಕೂಡಲೇ ಆ ಸ್ಥಳಗಳಿಗೆ ಶಾಖಾ ಕಾರ್ಯಕರ್ತರು ಕೂಡಲೇ ಧಾವಿಸಿ ಅವರ ನೆರವಿಗೆ ಬರುತ್ತಾರೆ. ಎಂದು ಹೇಳಿದ ಅವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಗೌರವ ಖಜಾಂಚಿ ಎಸ್. ಎನ್. ಲಕ್ಷ್ಮೀ ನಾರಾಯಣ, ಕಾಲೇಜಿನ ಪ್ರಾಂಶುಪಾಲ ಡಾ|| ಎಸ್. ಮರೀಗೌಡ ಪ್ರೋ. ಪಿ.ಕೆ ಗೋವರ್ಧನ್ , ಫ್ರೋ.ಹೆಚ್.ಜೆ. ಚಂದ್ರಶೇಖರ್, ಟಿ. ನಾಗರಾಜ್ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment