ಮನೀಶ್ ಖರ್ಬೇಕರ್ ನೂತನ ಐಜಿಪಿ

ಕಲಬುರಗಿ,ಆ.2-ಈಶಾನ್ಯ ವಲಯದ ನೂತನ ಐಜಿಪಿಯಾಗಿ ಮನೀಶ್ ಖರ್ಬೆಕರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

1998ನೇ ಬ್ಯಾಚ್ ನ ಖರ್ಬೆಕರ್ ಅವರು ಮಧ್ಯಪ್ರದೇಶ ಮೂಲದವರಾಗಿದ್ದು, 2008 ರಿಂದ 2010ರವರೆಗೆ ಇಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.

ಮೈಸೂರು ಎಸ್ಪಿಯಾಗಿ, ಮಂಗಳೂರು ಪೊಲೀಸ್ ಆಯುಕ್ತರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಈಶಾನ್ಯ ವಲಯ ಐಜಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಮುರಗನ್ ಅವರನ್ನು ಲೋಕಾಯುಕ್ತ ಐಜಿಪಿಯಾಗಿ ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಖರ್ಬೇಕರ್ ಅವರನ್ನು ನೇಮಕ ಮಾಡಿದೆ.

Leave a Comment