ಮನಸ್ಸಿನ ಮರೆಯಲಿ..

ಆಸ್ಕರ್ ಕೃಷ್ಣ ಸದ್ದಿಲ್ಲದೆ ಮತ್ತೊಂದು ಚಿತ್ರ ನಿರ್ದೇಶಿಸಿ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ. ಅದುವೇ’ಮನಸಿನ ಮರೆಯಲಿ’. ಹೊಸ ಹುಡುಗರಾದ ಕಿಶೋರ್ ಮತ್ತು ದಿವ್ಯಾಗೌಡ ನಾಯಕ ನಾಯಕಿಯರಾಗಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಲಿಂಗರಾಜು ಬಂಡವಾಳ ಹಾಕಿದ್ದಾರೆ.

ಚಿತ್ರ ಪೂರ್ಣಗೊಂಡು ಬಿಡುಗಡೆಯ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕಳೆದವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಬ ಹಮ್ಮಿಕೊಂಡಿತ್ತು ಚಿತ್ರತಂಡ. ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಭಾ.ಮ ಹರೀಶ್ ಸೇರಿದಂತೆ ಮತ್ತಿತರರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭಕೋರಿದರು.

manasina-mareyali_148ಈ ವೇಳೆ ಮಾತಿಗಿಳಿದ ನಿರ್ದೇಶಕ, ಆಸ್ಕರ್ ಕೃಷ್ಣ, ನನ್ನ ನಿರ್ದೇಶನದ ನಾಲ್ಕನೇ ಚಿತ್ರ ಇದು. ಈ ಹಿಂದೆ ಮಾಡಿದ್ದ ಚಿತ್ರಗಳು ವಿವಿಧ ಕಾರಣಕ್ಕೆ ವಿವಾದ ಸೃಷ್ಠಿ ಮಾಡಿದ್ದವು. ಈಗ ಅದರಿಂದ ಹೊರಬಂದು ಸಂಪೂರ್ಣ ಮನರಂಜಯನೆಯ ವಿಷಯವನ್ನು ತೆರೆಯ ಮೇಲೆ ತರಲು ಮುಂದಾಗಿದ್ದು ಚಿತ್ರ ಎಲ್ಲರಿಗೂ  ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದಿನ ಚಿತ್ರಗಳಲ್ಲಿ ಸಮುದ್ರ, ಕಡಲತೀರ, ಮರಳು ಪ್ರೇಮಿಗಳು ಪ್ರಧಾನ ಪಾತ್ರವಹಿಸುತ್ತಿದ್ದವು. ಈ ಚಿತ್ರದಲ್ಲಿಯೂ ಅವುಗಳು ಮುಂದುವರಿದಿವೆ.ಕಳೆದ ವರ್ಷ ಕೃಷ್ಣ ಜನ್ಮಾಷ್ಠಮಿಗೆ ಚಿತ್ರವನ್ನು ಆರಂಭಿಸಿದ್ದೆವು. ಈಗ ಚಿತ್ರ ಪೂರ್ಣಗೊಂಡು ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಸೆಪ್ಟಂಬರ್ ಇಲ್ಲವೆ ಅಕ್ಟೋಬರ್‌ನಲ್ಲಿ ತೆರೆಗೆ ತರುವ ಉದ್ದೇಶವಿದೆ.

ಹುಡುಗ-ಹುಡುಗ ಸಣ್ಣ ತಪ್ಪಿಗೆ ಒಬ್ಬರನೊಬ್ಬರು ದೂರವಾಗುತ್ತಾರೆ. ಯಾಕೆ ದೂರವಾದರು ಅವರ ಮಧ್ಯೆ ಎದುರಾದ ಸಮಸ್ಯೆಯಾದರೂ ಏನು ಆ ಬಳಿಕ ಅವರಿಗೆ ಮನವರಿಕೆಯಾಗಿ ಮತ್ತೆ ಒಂದಾಗುತ್ತಾರಾ ಇಲ್ಲವೇ ಎನ್ನುವ ಸುತ್ತ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಹುಡುಗ ಅಥವಾ ಹುಡುಗಿಯಲ್ಲಿ ಇಗೋ ಸಮಸ್ಯೆ ಎದುರಾದರೆ ಏನೆಲ್ಲಾ ಸಮಸ್ಯೆಯಾಗಲಿದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸಲಾಗಿದೆ ಎಂದು ಹೇಳಿಕೊಂಡರು.

ನಿರ್ಮಾಪಕ ಲಿಂಗರಾಜು, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು, ನಾವೂ ಕೂಡ ಚಿತ್ರ ನಿರ್ಮಾಣ ಮಾಡುವ ಉದ್ದೇಶವಿತ್ತು.ಅದಕ್ಕೆ ಪೂರಕವಾಗಿ ಈ ಸಿನಿಮಾ ಸಿಕ್ಕಿದೆ. ಎಲ್ಲರಿಗೂ ಇಷ್ಟವಾಗಲಿದೆ ಎಂದರು.

ನಾಯಕ ಕಿಶೋರ್, ಒಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತಾಗಲಿದೆ ಎಂದರೆ ನಾಯಕಿ ದಿವ್ಯಾ ಗೌಡ, ಮೊದಲ ಚಿತ್ರ ಆದರೂ ಎಲ್ಲಿಯೂ ಮೊದಲ ಚಿತ್ರ ಅನ್ನಿಸಲಿಲ್ಲ ಎಂದು ವಿವರ ನೀಡಿದರು.

Leave a Comment