ಮನಸ್ಥಿತಿ ಮಹತ್ವ ಹೇಳುವ ಮನೋರಥ

ಮಾನಸಿಕ ಖಿನ್ನತೆಗೆ ಒಳಗಾದ ಮಗನನ್ನು ಹೇಗೆ ತಾಯಿ ನಿಭಾಯಿಸುತ್ತಾರೆ ಸಮತೋಲನ ಕಳೆದುಕೊಂಡವರನ್ನು ಸರಿದಾರಿಯಲ್ಲಿ ನಡೆಸುವುದು ಹೇಗೆ ಎನ್ನುವ ಕತೆಯನ್ನಾಧರಿಸಿದ ‘ಮನೋರಥ’ ಸಿನೆಮಾ ಪೂರ್ಣಗೊಂಡಿದೆ.

ಸಿನೆಮಾದಲ್ಲಿ ನಾಯಕ, ನಾಯಕಿ ಇಬ್ಬರಿಗೂ ಎರಡು ಶೇಡ್ ಇರಲಿದೆಮನುಷ್ಯನ ಮನಸ್ಸು ಸಮತೋಲನ ತಪ್ಪಿದಾಗ ಏನಾಗುತ್ತದೆ ಅರಿಯದ ಮಕ್ಕಳ ಮನಸ್ಸನ್ನು ನಿರ್ಲಕ್ಷ ಮಾಡಿದ್ದಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ಕಂ ನಿರ್ಮಾಪಕ ಪ್ರಸನ್ನಕುಮಾರ್.

ಫೋಬಿಯಾ ಎನ್ನುವ ಖಾಯಿಲೆ ಬಂದ ರೋಗಿಗಳ ಮನಸ್ಥಿತಿ ಸಮತೋಲನದಲ್ಲಿರುವುದಿಲ್ಲ ಚಿತ್ರದಲ್ಲಿ ಅದೇ ಪ್ರಮುಖ ಅಂಶ ಯಾವುದೇ ಒಂದು ಘಟನೆಯಲ್ಲಿ ಸಿಲುಕಿ ಒದ್ದಾಡುವವರನ್ನು ಸೂಕ್ಷ್ಮವಾಗಿ  ಗಮನಿಸದಿದ್ದರೆ ಯಾವ ರೀತಿಯ ಅನಾಹುತ ಎದುರಿಸಬೇಕಾಗುತ್ತದೆ ಎನ್ನುವುದು ಮನೋರಥ ಹೇಳಲಿದೆ ಎಂದು ಅವರು ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡರು. ಚಿತ್ರದಲ್ಲಿ ಎರಡು ಕ್ಲೈಮಾಕ್ಸ್ ಇರಲಿದ್ದು, ದಂದ್ವ ಇದ್ದರೂ ನೋಡುಗನಿಗೆ ಕೊನೆ ಯಾವುದು ಅಂತ ಗೊತ್ತಾಗುವುದಿಲ್ಲಕ್ಲೈಮಾಕ್ಸ್ ಬಂದು ಹೋಗುವುದು ತಿಳಿಯುವುದಿಲ್ಲ ಚಿತ್ರಕ್ಕೆ ಬೆಂಗಳೂರು ಹಾಗೂ ಕನಕಪುರ ಸುತ್ತ-ಮುತ್ತ ಚಿತ್ರೀಕರಣ ನಡೆಸಲಾಗಿದೆ ಎನ್ನುತ್ತಾರೆ.

ಶೀರ್ಷಿಕೆಯಡಿ ಒನ್ಸ್ ಎಗೈನ್ ಬುದ್ದಿವಂತರಿಗೆ ಮಾತ್ರ ಎನ್ನುವ ಅಡಿಬರಹವಿದೆ ಅನಿಮೇಶನ್ ಕೋರ್ಸ್ ಮಾಡಿರುವ ಎಂ.ಪ್ರಸನ್ನಕುಮಾರ್  ನಿರ್ದೇಶನ ನಿರ್ಮಾಣ ಜೊತೆಗೆ ಚಿತ್ರಕತೆ, ಸಂಭಾಷಣೆ ಕೂಡ ಬರೆದಿದ್ದಾರೆ.

ಪ್ರತಿ ಸನ್ನಿವೇಶಗಳು ಕುತೂಹಲಕಾರಿಯಾಗಿ ಆಸಕ್ತಿ ಮೂಡಿಸುವಂತೆ ಇರಲಿದೆ. ಪ್ರಪಂಚ ದೂರ ಮಾಡಿದರೂ ತಾಯಿ ಚೆನ್ನಾಗಿ ಮಗನನ್ನು ನೋಡಿಕೊಳ್ಳುತ್ತಿರುತ್ತಾಳೆ. ಹೀಗೆ ಮಾನಸಿಕ ಖಿನ್ನತೆಗೆ ಒಳಪಟ್ಟಿರುವ ಪಾತ್ರದಲ್ಲಿ ರಾಜ್‌ಚರಣ್ ನಾಯಕನಾಗಿ ನಟಿಸಿದ್ದು ಅವರಿಗೆ ಮೊದಲ ಚಿತ್ರ. ಸಕರಾತ್ಮಕ ಮತ್ತು ನಕರಾತ್ಮಕದಲ್ಲಿ ನಟಿಸಿರುವ ಅಂಜಲಿಗೆ ನಾಯಕಿಯಾಗಿ ಪ್ರಥಮ ಅನುಭವ. ಉಳಿದಂತೆ ದಮಯಂತಿ, ರಾಘು ರಾಮನಕೊಪ್ಪ, ನಾಗೇಂದ್ರ, ವಿಠಲ್‌ಭಟ್ ನಟನೆ ಇದೆ.

ಮೂರು ಹಾಡುಗಳಿಗೆ ಚಂದ್ರು ಓಬಯ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ಮುರಳಿಕ್ರಿಶ್,  ಸಂಕಲನ ಚಲುವಮೂರ್ತಿ ಅವರದ್ದಾಗಿದೆ. ರಘುಪತಿ.ಎಂ., ಮಂಜುಳಮುನಿಯಪ್ಪ ಮತ್ತು ಲಾವಣ್ಯ ಪಾಲುದಾರರಾಗಿದ್ದಾರೆ. ಸದ್ಯದಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದು,ಚಿತ್ರವು ಮುಂದಿನ ತಿಂಗಳು ೧೦ರಂದು  ದರ್ಷ್ ಮೂವೀಸ್ ಮುಖಾಂತರ ಬಿಡುಗಡೆಯಾಗುವಸಾದ್ಯತೆ ಇದೆ.

Leave a Comment