ಮನರೂಪದಲ್ಲಿ ಮನಗೆಲ್ಲಲು ಸಿದ್ದರಾದ ನಿಶಾ

ಈಗಾಗಲೇ ಹೊಸಬರ ಸೈಕಲಾಜಿಕಲ್ ಥ್ರಿಲ್ಲರ್ ಮನರೂಪ ಚಿತ್ರ ಪೋಸ್ಟರ್ ಹಾಗೂ ಟ್ರೇಲರ್‌ಗಳ ಮೂಲಕ ಗಮನ ಸೆಳೆದಿದ್ದು, ಚಿತ್ರದ ನಟಿ ನಿಶಾ ಯಶ್‌ ರಾಮ್ ನಟನೆ ಮೂಲಕ ಸ್ಯಾಂಡಲ್ ವುಡ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ರಂಗಭೂಮಿಯಲ್ಲಿ ಪಳಗಿರುವ ನಿಶಾ ಅವರು ಥ್ರಿಲ್ಲರ್ ಪಾತ್ರದಲ್ಲಿ ಸಕತ್‌ಗೆ ಕಾಣಿಸಿಕೊಂಡಿದ್ದಾರೆ.

n1n2

*ನಿಶಾ ಇದಕ್ಕೂ ಮೊದಲು ಏನು ಮಾಡ್ತಾ ಇದ್ರಿ?
ನಾನು ಮೂಲತಃ ಬೆಂಗಳೂರಿನವಳು, ಬಿ.ಎಸ್ಸಿ , ಎಂಎಸ್ಸಿ ಮುಗಿದಿದೆ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಲೇ ನಾಟಕ, ನೃತ್ಯ ಅಂತ ತೊಡಗಿಸಿಕೊಂಡಿದ್ದೆ. ಕಾಲೇಜು ಮುಗಿಸಿ ನೇರವಾಗಿ ನಾಟಕದ ಅಭ್ಯಾಸಕ್ಕೆ ಹೊರಟು ಬಿಡುತ್ತಿದ್ದೆ, ಹಾಗಾಗಿ ರಂಗಭೂಮಿ ನಂಟು ಬೆಳೆಯಿತು. ನನ್ನ ತಂದೆತಾಯಿ ಒಳ್ಳೆ ಕೆಲಸದ ಜೊತೆ ಇದನ್ನು ಹವ್ಯಾಸವಾಗಿ ತೊಡಗಿಸಿಕೊಳ್ಳಲು ಹೇಳಿದ್ದರು, ಆದರೆ ನನಗೆ ಇದೇ ವೃತ್ತಿಜೀವನ ಮಾಡಿಕೊಳ್ಳವ ತವಕವಿತ್ತು, ಮೊದಮೊದಲ ನಟನೆಗೆ ಒಲ್ಲೆ ಎಂದಿದ್ದರು, ಆದರೆ ಮನರೂಪದ ಟ್ರೇಲರ್ ಕಂಡ ಖಷಿಯಾಗಿದ್ದಾರೆ. ಇದಕ್ಕೂ ಮೊದಲು ೩ ಚಿತ್ರದಲ್ಲಿ ನಟಿಸಿದ್ದೇನೆ, ಆದರೆ ಮನರೂಪದಲ್ಲಿ ಲೀಡ್ ರೋಲ್ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡುತ್ತಿದ್ದೇನೆ ಎಂಬ ಹೆಮ್ಮೆ ಇದೆ.

*ಮನರೂಪ ಚಿತ್ರ ಹಾಗೂ ನಿರ್ದೇಶಕರ ಬಗ್ಗೆ?
ನಾನು ಪಕ್ಕ ಸಿಟಿಯಲ್ಲಿ ಹುಟ್ಟಿಬೆಳೆದ ಹುಡಗಿ, ಏಕಾಏಕಿ ಕಾಡಿಗೆ ಕರೆದುಕೊಂಡು ಹೋಗಿ ನಟನೆ ಮಾಡು ಎಂದರೆ ಒಂದು ರೀತಿ ಆತಂಕ ಜೊತೆಗೆ ಕುತೂಹಲವಿತ್ತು. ಆದರೆ ನಿರ್ದೇಶನದ ಶೈಲಿ ನಿಜಕ್ಕೂ ಅದ್ಭುತ ಹಾಗಾಗಿ ನಾವು ಪಾತ್ರಗಳಾಗಿ ಹೊರಬರಲು ಸಾಧ್ಯವಾಯಿತು. ನಿರ್ದೇಶಕ ಕಿರಣ್ ಹೆಗಡೆ ಅವರು ಚಿತ್ರಕ್ಕೆ ಏನು ಎಂಬುದನ್ನು ಚೆನ್ನಾಗಿ ಅರಿತಿದ್ದರು. ಅವರ ಬಳಿ ಚಿತ್ರಕ್ಕೆ ಬೇಕಾದ ಸರಕುಗಳು ಸಿದ್ದವಿತ್ತು. ನಮ್ಮನೆಲ್ಲಾ ಚಿತ್ರೀಕರಣದ ಜಾಗಕ್ಕೆ ಕರೆದುಕೊಂಡು ಹೋಗಿ ಪೂರ್ವಭಾವಿ ಸಿದ್ದತೆ ನಡೆಸಿದ ಮೇಲಿಯೇ ಚಿತ್ರೀಕರಣ ಆರಂಭಿಸಿದ್ದರು. ಅವರಲ್ಲಿ ಅತ್ಯುತ್ತಮ ಕಲೆ ಅಡಕವಾಗಿದೆ. ಅವರ ಕೆಲಸ ತೆಗೆಸುವ ರೀತಿ ಸಾಕಷ್ಟು ಭರವಸೆ ಮೂಡಿಸಿದೆ. ಹೊಸ ತಲೆಮಾರಿನ ಐದು ಜನ ಸ್ನೇಹಿತರು ದಟ್ಟ ಕಾಡಿನಲ್ಲಿರುವ ಕರಡಿ ಗುಹೆ ಹುಡುಕಿಕೊಂಡು ಹೋಗುವ ಕತೆಯನ್ನು ಒಳಗೊಂಡಿದೆ. ಹೊಸ ಬಗೆಯ ನಿರೂಪಣೆ, ಕತೆ ಮತ್ತು ಈ ಕಾಲದ ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಕಾಡಿನ ಬ್ಯಾಕ್‌ಡ್ರಾಪ್‌ನಲ್ಲಿ ಹೇಳಲಾಗಿದೆ. ಮನಸಿನ ವಿವಿಧ ಛಾಯೆಗಳ ಅನಾವರಣವೇ ಮನರೂಪ.

*ಚಿತ್ರದ ಟ್ರೇಲರ್, ಪೋಸ್ಟರ್‌ಗಳ ಬಗ್ಗೆ ಹೇಗಿದೆ ಪ್ರತಿಕ್ರಿಯೆ?
ನಾನು ಮೊದಲು ನನ್ನ ಕುಟುಂಬದವರಿಗೆ ಚಿತ್ರದ ಟ್ರೇಲರ್ ತೋರಿಸಿದೆ. ಏಕೆಂದರೆ ಅವರು ನೇರವಾಗಿ ಫಲಿತಾಂಶ ಹೇಳುತ್ತಾರೆ. ಆದರೆ ವಿಭಿನ್ನ ರೀತಿಯಲ್ಲಿ ಟ್ರೇಲರ್ ಕಂಡು ಖಷಿಯಾದರು. ಅಲ್ಲದೇ ಟ್ರೇಲರ್ ನಲ್ಲಿಯೇ ಕಥೆ ಹೇಳವ ಪ್ರಂiiತ್ನ ನಡೆದಿದೆ ಎಂದು ಹೇಳಿದಾಗ ನನಗೂ ಸಂತಸವಾಯಿತು. ಇನ್ನು ಕನ್ನಡಿಗರು, ಸ್ನೇಹಿತರು ಒಳ್ಳೆ ಪ್ರತಿಕ್ರಿಯೆ ವ್ಯಕ್ತಪಡಿಸಿದಲ್ಲದೇ ಸಿನಿಮಾ ನೋಡುವ ತವಕ ಹೆಚ್ಚಾಗಿದೆ ಎಂದಿದ್ದಾರೆ.

* ನಿಮ್ಮ ಪಾತ್ರದ ಬಗ್ಗೆ ಹೇಳಿ?
ಸಿನಿಮಾದಲ್ಲಿ ನಾನು ಸಿಗರೇಟು ಸೇದುವ ಮಾಡರ್ನ್ ಹುಡಗಿ, ಆದರೂ ಸಮಾಜದ ಕಟ್ಟುಪಾಡಿಗಳಿಗೆ ಜೋತು ಬಿದ್ದಿರುತ್ತೇನೆ. ಪೂರ್ಣ ಎಂಬ ಪಾತ್ರದ ಹುಡುಗಿ ಎಂಎನ್‌ಸಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಜೊತೆಗೆ ಕೋಪಿಸ್ಟೆ, ಕವನ ಓದುವ ಹುಚ್ಚು, ಜೊತೆಗೆ ಸಂಬಂಧಗಳ ಬಗ್ಗೆ ಅರಿವಿರುವ ಹುಡುಗಿ ಈ ಪಾತ್ರ ನಿಜಕ್ಕೂ ವಿಚಿತ್ರ ಭಾವನೆವುಳ್ಳ ಪಾತ್ರವಾಗಿದೆ. ನೀವು ತೆರೆ ಮೇಲೆ ನೋಡಿದಾಗ ಪ್ರೇಕ್ಷಕರು ಥ್ರೀಲ್ ಆಗಿ ಹೊರಬರುವುದು ಖಚಿತ.

n3

*ಚಿತ್ರದ ಛಾಯಾಗ್ರಾಹಕರ ಕೈಚಳ, ಚಿತ್ರೀಕರಣ ಅನುಭವ ಹೇಗಿತ್ತು?
ಗೋವಿಂದ್ ರಾಜ್ ಅವರು ಕೈಚಳಕ ಅಮೋಘ, ಅದ್ಭುತ. ಪ್ರತಿ ದೃಶ್ಯಗಳನ್ನು ಬಹಳ ಅದ್ಧೂರಿಯಾಗಿ ಸೆರೆಹಿಡಿದಿದ್ದಾರೆ. ಚಿತ್ರದ ದೃಶ್ಯಗಳು ಒಂದು ಕಾರಿನಲ್ಲಿ ಅಥವಾ ಕಾಡಿನಲ್ಲಿ ಇರುತ್ತಿತ್ತು. ಬಹಳ ರಿಸ್ಕಿ ಶಾಟ್‌ಗಳನ್ನು ಗೋವಿಂದ ರಾಜ್ ಅವರು ಸೆರೆಹಿಡಿದಿದ್ದಾರೆ. ಟೆಕ್ನಿಕಲ್ ಆಗಿ ತುಂಬಾ ಅದ್ಭುತ ದೃಶ್ಯಗಳು ಚಿತ್ರದಲ್ಲಿ ಮೂಡಿಬಂದಿದೆ. ದುರ್ಗಮ ಕಣಿವೆ, ಇಳಿಜಾರು, ಪೊದೆಗಳು, ಬೆಟ್ಟದ ತುದಿಗಳು ಮತ್ತು ನದಿ ದಂಡೆಯಲ್ಲಿ ಕಾಡಿನ ನಿಗೂಢ ಲೋಕ ಮನರೂಪ ಚಿತ್ರದ ಪ್ಲಸ್ ಪಾಯಿಂಟ್ ಕೂಡ ಶೇ.೯೦ರಷ್ಟು ಚಿತ್ರೀಕರಣ ಹೊರಾಂಗಣದ ದಟ್ಟ ಕಾಡಿನಲ್ಲಿ ನಡೆದಿದ್ದು, ನಗರ ಪ್ರದೇಶದ ವೀಕ್ಷಕರಿಗೆ ಪ್ರಕೃತಿಯ ವಿಸ್ಮಯಗಳನ್ನು ಆಸ್ವಾದಿಸುವ ಅದ್ಭುತ ಅವಕಾಶವಿದೆ. ಚಾರಣಿಗರು ಅನುಭವಿಸುವ ಯಾತನೆಗಳ ಇದರಲ್ಲಿದೆ. ಪ್ರಕೃತಿ ಮಡಿಲಿನಲ್ಲಿ ಹಗಲುರಾತ್ರಿ ಶ್ರಮಪಟ್ಟು ಚಿತ್ರೀಕರಣ ಮಾಡಿದ್ದೇವೆ. ತಂಡದ ಶ್ರಮಕ್ಕೆ ಅಭಿಮಾನಿಗಳ ಆರೈಕೆ ಅಗತ್ಯ.

* ಇಷ್ಟವಾಗುವ ಪಾತ್ರ, ಪ್ರೇಕ್ಷಕರು ಯಾಕೆ ಚಿತ್ರ ನೋಡಬೇಕು?
ಎಲ್ಲಾರ ಪಾತ್ರ ಇಷ್ಟವಾಗುತ್ತದೆ. ಈಗಾಗಲೇ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವ ಅಮೋಘ್ ಸಿದ್ದಾರ್ಥ್ ಖಂಡಿತ ಸಕತ್ ಶ್ರಮಪಟ್ಟಿದ್ದಾರೆ. ಬರಿಗಾಲಿನಲ್ಲಿ ಸಾಹಸದೊಂದಿಗೆ ಕಾಡಿನ ಕರಡಿಗುಹೆಯಲ್ಲಿ ಅವರ ಪಾತ್ರ ತುಂಬಾ ಚಾಲೆಂಜಿಂಗ್ ಆಗಿತ್ತು. ಅವರ ಪಾತ್ರಕ್ಕೆ ಒಳ್ಳೆ ಸ್ಕೋಪ್ ಇದೆ. ಈ ಚಿತ್ರವನ್ನು ಸುಮ್ಮನೇ ಬೇಕಾಬಿಟ್ಟಿ ಮಾಡಿಲ್ಲ, ನಿರ್ದೇಶಕರು ಚಿತ್ರವನ್ನು ಬಹಳ ಸಂಶೋಧನೆ ಕೈಗೊಂಡು ಕಥೆ ರಚಿಸಿದ್ದಾರೆ. ಈಗೀನ ಯುವಪೀಳಿಗೆಗೆ ಬಹಳ ಸೂಕ್ತವಾದ ಚಿತ್ರ. ಸೈಕಲಾಜಿಕಲ್ ಥ್ರಿಲ್ಲರ್ ಜೊತೆಗೆ ಕುಟುಂಬಸಮೇತ ನೋಡುವ ಚಿತ್ರ.

n4

*ಕನ್ನಡ ಪ್ರೇಕ್ಷಕರ ಬಗ್ಗೆ?
ಕನ್ನಡ ಹಾಗೂ ಕನ್ನಡಿಗರ ಮೇಲೆ ಬಹಳ ಅಭಿಮಾನ. ಈಗೀನ ಪ್ರೇಕ್ಷಕರು ಒಳ್ಳೆ ಚಿತ್ರಗಳನ್ನು ಎಂದಿಗೆ ಕೈಬಿಡುವುದಿಲ್ಲ, ಒಳ್ಳೆ ಚಿತ್ರ ಕೊಡಿ ನಾವೇ ನೋಡೆ ನೋಡ್ತಿವಿ ಅಂತಾರೆ. ಆ ಸಾಲಿನಲ್ಲಿ ನಮ್ಮ ಮನರೂಪ ಚಿತ್ರ ಇರಲಿದೆ. ದೊಡ್ಡ ದೊಡ್ಡ ಸ್ಟಾರ್‌ಗಳಿಲ್ಲದ ಎಷ್ಟೋ ಚಿತ್ರಕ್ಕೆ ಕನ್ನಡಿಗರು ಬೆಂಬಲಿಸಿದ್ದಾರೆ. ನಮ್ಮನ್ನು ಅವರು ಕೈಹಿಡಿಯುತ್ತಾರೆ ಎಂಬ ಭರವಸೆ ಇದೆ.

Leave a Comment