ಮನರಂಜಿಸಿದ ಮಕ್ಕಳ ನೃತ್ಯ

ಬಳ್ಳಾರಿ, ಫೆ.12: ನಗರದ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗ ಮಂದಿರದಲ್ಲಿ ನಿನ್ನೆ ರಾತ್ರಿ ಸಾಹಿತ್ಯ ಕಲಾ ಸಾಗರ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ರಿದಂ ನೃತ್ಯ ಶಾಲೆಯ ಮಕ್ಕಳಿಂದ ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮಗಳು ನೆರೆದ ಶೋತೃಗಳ ಮನ ರಂಜಿಸಿದವು.

ಕಾರ್ಯಕ್ರಮವನ್ನು ಕಲಾ ಸಾಗರ ಸಂಸ್ಥೆಯ ಅಧ್ಯಕ್ಷ ವೀರಣ್ಣ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಲೆಯ ಮುಖ್ಯಸ್ಥ ಬಸವರಾಜ್ ನಿರ್ದೇಶನದಲ್ಲಿ 30 ಕ್ಕೂ ಹೆಚ್ಚು ಮಕ್ಕಳು, ಕನ್ನಡ, ತೆಲುಗು, ಹಿಂದಿ ಭಾಷೆಯ ಸಿನಿಮಾ ಹಾಡುಗಳಿಗೆ ಹೆಜ್ಜೆಹಾಕಿದರು. 3 ವರ್ಷದಿಂದ 16 ವರ್ಷದೊಳಗಿನ ಬಾಳಕ ಬಾಲಕಿಯರು ಸಂಗೀತದ ನಿನಾದಕ್ಕೆ ತಕ್ಕಂತೆ ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿದ್ದು. ನೆರೆದ ಪೋಷಕರು ಮತ್ತು ಕಲಾಸಕ್ತರನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿತ್ತು.

ಅಂಬಿಕ, ಮೇಘ, ಸಾಹಿತ್ಯ, ಹರೀಶ್ ದೀಪ್ತಿ, ಅನೀಶ್, ಸುಯೋಗ, ಪೂಜಿತ, ವೈಷ್ಣವಿ, ಸಾಯಿ ಶ್ರಾವ್ಯ ಬಿಯಾ, ಶ್ರೀಚರಣ ಕೃಪಾ ಸದಾರ್ ಮೊದಲಾದವರು. ನೃತ್ಯಮಾಡಿ ಆನಂದಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಮಾದ್ಯಮ ಪ್ರತಿನಿಧಿಗಳಾದ ನಾಘಭೂಷಣ ಮತ್ತು ವೀರಭದ್ರಗೌಡ ಬಹುಮಾನ ವಿತರಿಸಿದರು

Leave a Comment