ಮಧ್ಯಮ ವರ್ಗದ ನೊಂದ ಹೆಣ್ಣಿನ ಕಥೆ ‘ಬೆಂಕಿಯಲ್ಲಿ ಅರಳಿದ ಹೂವು’

ಬೆಂಗಳೂರು, ಜ 24 – ‘ಬೆಂಕಿಯಲ್ಲಿ ಅರಳಿದ ಹೂವು’ ಹೆಸರು ಕೇಳಿದ ಕೂಡಲೇ ಖ್ಯಾತ ನಟಿ ಸುಹಾಸಿನಿ ನೆನಪಾಗುತ್ತಾರೆ   ಹೌದು, ಕೆ ಬಾಲಚಂದರ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದೆ

ಇದೀಗ ಇದೇ ಶೀರ್ಷಿಕೆಯ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ   ಅನುಪಮಾ ಗೌಡ ಪ್ರಧಾನ ಭೂಮಿಯಲ್ಲಿದ್ದು, ದೇವಿಶ್ರೀ ಪ್ರಸಾದ್ ನಿರ್ದೇಶನವಿದೆ

ಸೋಮಾರಿ ಗಂಡನ ಜತೆ ಹೆಣಗಾಡುವ ಪಾತ್ರಕ್ಕೆ ಅನುಪಮಾ ಗೌಡ ಜೀವ ತುಂಬಿದ್ದು, ಹೆಣ್ಣಿನ ಮೇಲೆ ನಡೆಯುವ ಶೋಷಣೆ, ಗಾರ್ಮೆಂಟ್ ಗಳಲ್ಲಿ ದುಡಿಯುವ ಮಹಿಳೆಯರ ದಳ್ಳುರಿಯ ಮೇಲೆ ಬೆಳಕು ಚೆಲ್ಲಲಾಗಿದೆ ಎಂದು ನಿರ್ಮಾಪಕ ಹಾಗೂ ಚಿತ್ರಕ್ಕೆ ಬಂಡವಾಳ ಹೂಡಿರುವ ವಿಶು ಆಚಾರ್ ತಿಳಿಸಿದ್ದಾರೆ.

Leave a Comment