ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆ ಬಗೆಹರಿಸುವತ್ತ ಗಮನ: ವಿಕ್ರಮ್‌ ರಾಥೋಡ್

ನವದೆಹಲಿ, ಸೆ 6 – ಟೀಮ್‌ ಇಂಡಿಯಾಗೆ ನೂತನವಾಗಿ ಆಯ್ಕೆಯಾಗಿರುವ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌ ಅವರು ಮುಂಬರುವ ದಿನಗಳಲ್ಲಿ ಸೀಮಿತ ಓವರ್‌ಗಳ ತಂಡದ ಮಧ್ಯಮ ಬ್ಯಾಟಿಂಗ್‌ ಕ್ರಮಾಂಕದ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

90ರ ದಶಕದಲ್ಲಿ ವಿಕ್ರಮ್‌ ರಾಥೋಡ್‌ ಅವರು ಭಾರತದ ಪರ ಆರು ಟೆಸ್ಟ್ ಹಾಗೂ ಏಳು ಏಕದಿನ ಪಂದ್ಯಗಳಾಡಿದ್ದಾರೆ. ಭಾರತ ತಂಡದ ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕ ಸಮಸ್ಯೆ ಹಾಗೂ ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಸಂಜಯ್‌ ಬಂಗಾರ್‌ ಪರಿಹರಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ, ಅವರ ಸ್ಥಾನಕ್ಕೆ ವಿಕ್ರಮ್‌ ರಾಥೋಡ್‌ ಅವರನ್ನು ಬ್ಯಾಟಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ.
ಬಿಸಿಸಿಐ ಟಿವಿಯೊಂದಿಗೆ ಮಾತನಾಡಿದ ವಿಕ್ರಮ್‌, ” ವಿಶ್ವಕಪ್‌ ಟೂರ್ನಿ ಬಗ್ಗೆ ಒಂದೇ ಅಲ್ಲ. ಏಕದಿನ ತಂಡದ ಮಧ್ಯಮ ಕ್ರಮಾಂಕ ಸತತವಾಗಿ ವಿಫಲವಾಗುತ್ತಿದೆ. ಇದನ್ನು ಬಗೆಹರಿಸುವುದು ತಮ್ಮ ಮೊದಲ ಗುರಿ ಎಂದು ತಿಳಿಸಿದ್ದಾರೆ.
ಶ್ರೇಯಸ್‌ ಅಯ್ಯರ್‌ ಅವರು ಕಳೆದ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಜತೆಗೆ ಮನೀಶ್‌ ಪಾಂಡೆ ಕೂಡ ಇದ್ದಾರೆ. ಇವರಿಬ್ಬರು ಭಾರತ(ಎ) ತಂಡದ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇವರಿಬ್ಬರಲ್ಲಿ ಮಧ್ಯಮ ಕ್ರಮಾಂಕ ಜವಾಬ್ದಾರಿ ನಿರ್ವಹಿಸುವ ಸಾಮರ್ಥ್ಯವಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್‌ ವಿರುದ್ಧ ಇತ್ತೀಚೆಗೆ ಮುಕ್ತಾಯವಾಗಿದ್ದ ಏಕದಿನ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್‌ ಅವರು ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 71 ಹಾಗೂ 65 ರನ್‌ ದಾಖಲಸಿದ್ದರು. ಆ ಮೂಲಕ ಮುಖ್ಯ ಕೋಚ್‌ ರವಿಶಾಸ್ತ್ರಿ ಹಾಗೂ ವಿರಾಟ್‌ ಕೊಹ್ಲಿ ಅವರ ಗಮನವನ್ನು ಅಯ್ಯರ್‌ ಸೆಳೆದಿದ್ದರು.

Leave a Comment