ಮಧುಮೇಹ, ಸ್ಥೂಲಕಾಯ ನಿಯಂತ್ರಣಕ್ಕೆ ಹಾಗಲಕಾಯಿ ರಸ ಸೇವಿಸಿ

ಇತ್ತೀಚಿನ ದಿನಗಳಲ್ಲಿ ಮಧುಮೇಹದಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹಲವರನ್ನು ಚಿಂತೆಗೀಡು ಮಾಡಿದೆ. ಆದರೆ ಹಾಗಲಕಾಯಿ ರಸ ಸೇವಿಸದರೆ ಮಧುಮೇಹ ಮತ್ತು ದೇಹದ ತೂಕ ಇಳಿಸಬಹುದಾಗಿದೆ. ಆದರೆ  ಬಹುತೇಕ ಜನರು ಹಾಗಲಕಾಯಿಯನ್ನು ಇಷ್ಟಪಡುವುದಿಲ್ಲ.

ಹಾಗಲಕಾಯಿ ವಾಸ್ತವವಾಗಿ ಒಂದು ಹಣ್ಣು ಎಂದು ನಿಮಗೆ ಗೊತ್ತಿತ್ತೇ? ಟೊಮಾಟೋ ತರಹವೇ ಸಸ್ಯಶಾಸ್ತ್ರದ ಪ್ರಕಾರ ಹಾಗಲಕಾಯಿಯೂ ಒಂದು ಹಣ್ಣು. ಆದರೆ ನಾವು ಇವುಗಳನ್ನು ತರಕಾರಿಯ ರೂಪದಲ್ಲಿ ಬಳಕೆ ಮಾಡುತ್ತೇವೆ. ಕಹಿಯಾದರೂ ಹಾಗಲಕಾಯಿಯಲ್ಲಿ  ಔಷಧೀಯ ಗುಣಗಳವೆ.

ಹಿರಿಯರು ಇದನ್ನು ಹಲವಾರು ಕಾಯಿಲೆಗಳಿಗೆ ಔಷಧಿಯಂತೆ ಬಳಸುತ್ತಾ ಬಂದಿರುವುದು ವಿಶೇಷ.  ಮಧುಮೇಹಕ್ಕೆ ಹೇಳಿ ಮಾಡಿಸಿದಂತಹ ಔಷಧಿ ಮತ್ತು ಆಹಾರವೆಂದರೆ ಹಾಗಲಕಾಯಿ. ಪ್ರತಿದಿನ ಮುಂಜಾನೆ ಎದ್ದ ಕೂಡಲೆ ಹಾಗಲಕಾಯಿಯ ತಾಜಾ ರಸವನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಿ ಮಧುಮೇಹಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಕಡಿಮೆಗೊಳಿಸಬಹುದಾಗಿದೆ.

ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ಕೊಲೆಸ್ಟ್ರಾಲ್  ನಿಯಂತ್ರಣಕ್ಕೆ ರಹದಾರಿ. ಹಾಗಲಕಾಯಿಯ ರುಚಿಸದೆ ಇದ್ದರೂ  ಇದರಲ್ಲಿರುವ  ಪೋಷಕಾಂಶಗಳು ನಮ್ಮ ದೇಹಕ್ಕೆ ಉತ್ತಮವಾಗಿವೆ. ಕಬ್ಬಿಣ, ಮೆಗ್ನೇಶಿಯಂ, ಪೊಟ್ಯಾಶಿಯಂ, ವಿಟಮಿನ್ ಸಿ ಸಹಿತ ಹಲವರು ಪೋಷಕಾಂಶಗಳು ಇದರಲ್ಲಿವೆ. ಇದರ ಹೊರತಾಗಿ ಅತ್ಯುತ್ತಮ ಪ್ರಮಾಣದ ಕರಗುವ ನಾರು, ದುಪ್ಪಟ್ಟು ಪ್ರಮಾಣದ ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಅಧಿಕ ಬೀಟಾ ಕ್ಯಾರೋಟೀನ್ ಮಟ್ಟ ಹಾಗಲಕಾಯಿಯ ರಸದಲ್ಲಿದೆ.

ಹಾಗಲಕಾಯಿಯಲ್ಲಿರುವ ಮೂರು ಪ್ರಮುಖ ಗುಣಗಳು ಮಧುಮೇಹ ನಿಯಂತ್ರಿಸಬಹುದಾಗಿದೆ. ಪ್ರಮುಖವಾಗಿ ಇದರಲ್ಲಿರುವ ಕ್ಯಾರಂಟಿನ್ ಎಂಬ ಪೋಷಕಾಂಶ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ವೈಸೀನ್ ಎಂಬ ಪೋಷಕಾಂಶಕ್ಕೆ ಇನ್ಸುಲಿನ್ ಗೆ ಸಮನಾದ ಗುಣಗಳಿವೆ.

ಇನ್ನೊಂದು ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ವರದಿ ಅನುಸಾರ ಹಾಗಲಕಾಯಿಯ ಕಹಿತನ ಮಧುಮೇಹಿಗಳ ರಕ್ತದಿಂದ ಗ್ಲೂಕೋಸ್ ಅನ್ನು ಬಳಸಿಕೊಳ್ಳಲು ನೆರವಾಗುವ ಮೂಲಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಹಾಗೂ ಗ್ಲೈಸೆಮಿಕ್ ಕೋಷ್ಟಕವನ್ನು ಸಹಾ ಉತ್ತಮಗೊಳಿಸುತ್ತದೆ.

ಉತ್ತಮ ಆರೋಗ್ಯಕ್ಕಾಗಿ ಮಧುಮೇಹಿಗಳು ನಿತ್ಯವೂ ಐವತ್ತರಿಂದ ನೂರು ಮಿಲಿಲೀಟರ್ ತಾಜಾ ಹಾಗಲಕಾಯಿಯ ರಸವನ್ನು ಸೇವಿಸಲು ಸಲಹೆ ಮಾಡಲಾಗುತ್ತದೆ. ಅಂದರೆ ಸುಮಾರು ೯೦೦ ಮಿಲಿಗ್ರಾಂ ನಷ್ಟು ಹಾಗಲಕಾಯಿಯ ಸಾಂದ್ರೀಕೃತ ರಸ  ಸೇವಿಸುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಹೀಗೆ ಹಾಗಲಕಾಯಿ ಸೇವಿಸುತ್ತಾ ಬಂದರೆ ಮಧುಮೇಹ ಮತ್ತು ದೇಹದ ತೂಕವನ್ನು ಹತೋಟಿಯಲ್ಲಿಡಬಹುದಾಗಿದೆ.

Leave a Comment