ಮಧುಮೇಹಿಗಳ ಸ್ನ್ಯಾಕ್ಸ್

ದಿನಕ್ಕೆ ಒಂದು ಬಾರಿಯಾದರೂ ಯಾವುದಾದರೂ ಸ್ನ್ಯಾಕ್ಸ್ ಅಂದರೆ ಕುರುಕು ತಿಂಡಿ, ಸಿಹಿ ತಿಂಡಿ ಏನನ್ನಾದರೂ ತಿನ್ನಬೇಕು ಅನಿಸುವುದು ಸಹಜ. ಆರೋಗ್ಯದಿಂದಿರುವವರು ನಿಯಮಿತವಾಗಿ ಸ್ನ್ಯಾಕ್ ಸೇವನೆ ಮಾಡುವುದು ಒಳ್ಳೆಯದು. ಆದರೆ ಸಕ್ಕರೆ ಕಾಯಿಲೆ ಅಂದರೆ ಮಧುಮೇಹ ಇರುವವರಿಗೆ ಇಂತಹ ಸ್ನ್ಯಾಕ್ಸ್‌ಗಳು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ.
ಹಾಗೆಂದು ಅವರು ಸ್ನ್ಯಾಕ್ ತಿನ್ನದೆ ಇರಬೇಕೆಂದೇನಿಲ್ಲ. ಮಧುಮೇಹಿಗಳಿಗೆ ಇಷ್ಟವಾದ ಸ್ನ್ಯಾಕ್ಸ್‌ಗಳೇ ಹಲವು ಇದೆ. ಸೇಬುಹಣ್ಣು ದಿನಕ್ಕೊಂದು ಸೇವಿಸಿದರೆ ಡಾಕ್ಟರಿಂದ ದೂರವಿರಬಹುದೆಂಬ ಗಾದೆ ಮಾತಿದೆ. ಅದು ನಿಜ ಕೂಡ. ಹಾಗಾಗಿ, ಮಧುಮೇಹಿ ರೋಗಿಗಳು ಏನಾದರು ತಿನ್ನಬೇಕು ಎನಿಸಿದರೆ ಒಂದು ಸೇಬುಹಣ್ಣು ತಿನ್ನುವುದು ಒಳ್ಳೆಯದು.
ಸೇಬುಹಣ್ಣಿಗೆ ಸ್ವಲ್ಪ ಪೀನಟ್ ಬಟರ್ ಸೇರಿಸಿ ತಿಂದರೆ ಅದು ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹಿ ರೋಗಿಗಳು ಉಪ್ಪಿನಾಂಶದಿಂದ ಕೂಡಿದ ವಾಲ್‌ನಟ್, ಕಡಲೆಬೀಜ, ಪಿಸ್ತ, ಬಾದಾಮಿಗಳನ್ನು ಸೇವಿಸುವುದು ಒಳ್ಳೆಯದು.
ಆದರೆ ಅತಿಯಾಗಿ ಸೇವಿಸಬಾರದು. ಒಂದು ಮುಷ್ಠಿಯಷ್ಟು ಬೀಜಗಳನ್ನು ಮಾತ್ರ ಸೇವಿಸಬೇಕು. ಇದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಲಭ್ಯವಾಗುತ್ತದೆ.
ಮಧುಮೇಹಿ ರೋಗಿಗಳು ಯೋಗರ್ಟ್‌ನ್ನು ಸೇವಿಸುವುದು ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟಿನ್ ಇರುತ್ತದೆ. ಇದರ ಜತೆಗೆ ಬೇಯಿಸಿದ ತರಕಾರಿಯನ್ನೂ ಮಧುಮೇಹಿ ರೋಗಿಗಳು ತಿನ್ನಬಹುದು. ಪಪ್ಪಾಯಿ ಹಣ್ಣು ಸೇವನೆ ಸಹ ಮಧುಮೇಹಿ ರೋಗಿಗಳಿಗೆ ಒಳ್ಳೆಯದು.
ಏನನ್ನಾದರೂ ತಿನ್ನಬೇಕು ಎನಿಸಿದರೆ ಇತಿಮಿತಿಯಲ್ಲಿ ತಿಂದರೆ ಯಾವುದೂ ಅನಾರೋಗ್ಯ ತರುವುದಿಲ್ಲ. ಹಾಗಾಗಿ, ಮಧುಮೇಹಿ ರೋಗಿಗಳು ಆದಷ್ಟು ಹಣ್ಣು, ತರಕಾರಿ, ಒಣ ಹಣ್ಣುಗಳನ್ನು ಆಗಾಗ ತಿನ್ನುವುದು ಒಳ್ಳೆಯದು.
ಮಧುಮೇಹಿ ರೋಗಿಗಳು ಪಾಪ್‌ಕಾರ್ನ್‌ಗಳನ್ನು ತಿನ್ನಲು ಅಡ್ಡಿಯಿಲ್ಲ. ಆದರೆ ಆ ಪಾಪ್‌ಕಾರ್ನ್‌ಗಳಿಗೆ ಬೆಣ್ಣೆ, ಚೀಸ್‌ಗಳನ್ನು ಹಾಕದೆ ತಿಂದರೆ ಒಳ್ಳೆಯದು.
ಮಧುಮೇಹಿ ರೋಗಿಗಳಿಗೆಂದೇ ಎಣ್ಣೆ, ಹಣ್ಣು, ನಿಂಬೆರಸ, ಟಮೊಟೊ, ಮೆಣಸು, ಈರುಳ್ಳಿ ಬಳಸಿ ಗ್ವಾಕಮೋಲ್ ಕ್ರೀಂ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ಸಿಗುತ್ತಿರುವ ಈ ಗ್ವಾಕಮೋಲ್‌ನ್ನು ಪ್ರವಾಸ ಹೋದಾಗ ಆರಾಮವಾಗಿ ತಿನ್ನಬಹುದು.
ಇಂತಹ ಸ್ನ್ಯಾಕ್ಸ್‌ಗಳಿಂದ ಮಧುಮೇಹಿ ರೋಗಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Leave a Comment