ಮದ್ಯದ ಬಾಕ್ಸಗಳ ಕಳುವು

ಕುಂದಗೋಳ,ಅ.11-  ತಾಲ್ಲೂಕಿನ ಗುಡಗೇರಿ ಗ್ರಾಮದ ಹೊರವಲಯದಲ್ಲಿರುವ ಗೌಡಗೇರಿ ರಸ್ತೆಗಂಟಿಕೊಂಡ ಎಮ್‍ಎಸ್‍ಐಎಲ್ ಮದ್ಯದ ಮಳಿಗೆಯಲ್ಲಿ ಮದ್ಯದ ಬಾಕ್ಸಗಳನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಜರುಗಿದೆ.
ಸುಮಾರು 1 ಲಕ್ಷ 601 ರೂ. ಮೌಲ್ಯ ಮದ್ಯವನ್ನು ಕದೊಯ್ದಿರುವದನ್ನು ಬೆಳಿಗ್ಗೆ ಅಂಗಡಿಗೆ ಆಗಮಿಸಿದ ಸಿಬ್ಬಂದಿಗಳು ಈ ಘಟನೆಯನ್ನು ಕಂಡು ತಮ್ಮ ಹಿರಿಯ ಅಧಿಕಾರಿಗಳಿಗೂ ಹಾಗೂ ಗುಡಗೇರಿ ಪೊಲೀಸ ಠಾಣೆಗೂ ತಿಳಿಸಿದ ನಂತರ ಗುಡಗೇರಿ ಪಿಎಸ್‍ಐ ನವೀನ ಜಕ್ಕಲಿ ಅವರು ಸ್ವಾನ ದಳ ಹಾಗೂ ಬೆರಳು ಮುದ್ರಾಗಾರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment