ಮದ್ಯದ ಅಮಲಿನಲ್ಲಿ ಜಗಳ : ಕೊಲೆಯಲ್ಲಿ ಅಂತ್ಯ

 

ಕಲಬುರಗಿ,ಮೇ.26-ಮದ್ಯ ಅಮಲಿನಲ್ಲಿ ನಡೆದ ಜಗಳ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಸೋನಿಯಾಗಾಂಧಿ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಖಾಜಾಮಿಯಾ ಗುಡುಮಿಯಾ ಬೇಕ್ರಿವಾಲೆ (60) ಕೊಲೆಯಾದ ವ್ಯಕ್ತಿ.

ಖಾಜಾಮಿಯಾ ಬೇಕ್ರಿವಾಲೆ ಕುಡಿದ ಅಮಲಿನಲ್ಲಿ ಶಹಾನವಾಜ್, ಶಾರುಖ್, ಸೈಯದ್ ಅಬ್ಬಾಸ್, ತಾಜುದ್ದೀನ್ ಮತ್ತು ಶಿಖಂದರ್ ಎಂಬುವವರೊಂದಿಗೆ ಜಗಳ ತೆಗೆದು ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಇವರೆಲ್ಲರು ಕೋಪಗೊಂಡು ಖಾಜಾಮಿಯಾ ಮೇಲೆ ಹಲ್ಲೆ ನಡೆಸಿದ್ದರಿಂದ ಗಾಯಗೊಂಡಿದ್ದ.

ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಮೃತ ಖಾಜಾಮಿಯಾ ವಿರುದ್ಧ ಕೊಲೆಯತ್ನ ಮತ್ತು ಆತನ ಮೇಲೆ ಹಲ್ಲೆ ನಡೆಸಿದ ಐವರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

Share

Leave a Comment