ಮದುವೆ ಸದ್ಯಕ್ಕಿಲ್ಲ

-ಚಿಕ್ಕನೆಟಕುಂಟೆ ಜಿ.ರಮೇಶ್
ನಾಯಕ ನಟಿಯಾಗಿ ಕಾಣಿಸಿಕೊಂಡ ನಂತರ ನಾಯಕರ ಜೊತೆ ನಟಿಸಬೇಕು ಅಂತ ಅನ್ನಿಸುತ್ತಿಲ್ಲ. ಒಳ್ಳೆಯ ಪಾತ್ರ ಮತ್ತು ಕಥೆ ಬಂದರೆ ನಟಿಲು ಅಡ್ಡಿಯಿಲ್ಲ. ಆದರೆ ಸಿನಿಮಾ ಇಲ್ಲ. ಮಾರ್ಕೆಟ್ ಇಲ್ಲ ಎನ್ನುವರಿಗೆಲ್ಲಾ ’ಐ ಡೋಂಟ್ ಕೇರ್. ವರ್ಷಕ್ಕೆ ಒಂದಾದರೂ ಆಕ್ಷನ್ ಚಿತ್ರಗಳಲ್ಲಿ ನಟಿಸುತ್ತೇನೆ….”

ಹೀಗಂತ ನಟಿ ರಾಗಿಣಿ ದ್ವಿವೇದಿ ಹೇಳುವ ಮೂಲಕ ನಾಯಕಿ ಪ್ರಧಾನ ಚಿತ್ರಗಳಲ್ಲಿಯೇ ಕಾಣಿಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇಲ್ಲವೆಂದು ಹೇಳುವರು ಏನಾದರೂ ಹೇಳಿಕೊಳ್ಳಲಿ, ತಿಂಗಳಿಗೆ ಕನಿಷ್ಟ ೨೦ ಮಂದಿ ಕಥೆ ಹೇಳಲು ಬರುತ್ತಾರೆ.

ದುಡ್ಡಿಗಾಗಿ ಎಲ್ಲವನ್ನೂ ಒಪ್ಪಿಕೊಂಡಿದ್ದರೆ ಈ ವೇಳೆಗಾಗಿ ೭೦ರಿಂದ ೮೦ ಚಿತ್ರಗಳನ್ನು ದಾಟುತ್ತಿದ್ದೆ. ದುಡ್ಡಿಗಿಂತ ಕಥೆ, ಪಾತ್ರ ಮುಖ್ಯ. ದುಡ್ಡಿಗಾಗಿ ಸಿನಿಮಾ ಮಾಡುವುದಿದ್ದರೆ ಈ ವೇಳೆಗಾಗಲೇ ಜಾಗ್ವಾರ್ ಖರೀದಿ ಮಾಡಿರುತ್ತಿದ್ದೆ. ಒಳ್ಳೆಯ ಸಿನಿಮಾವಾದರೆ ಸಂಭಾವನೆಯಲ್ಲಿ ಹತ್ತು ಲಕ್ಷ ಕಡಿಮೆ ಕೊಟ್ಟರೂ ತೆಗೆದುಕೊಳ್ಳುತ್ತೇನೆ. ಆದರೆ ಒಳ್ಳೆಯ ಚಿತ್ರ, ಕಥೆ ಇಲ್ಲದಿದ್ದರೆ ನಯಾ ಪೈಸೆಯನ್ನೂ ಬಿಡುವುದಿಲ್ಲ. ಒಳ್ಳೆಯ ಪಾತ್ರಗಳಲ್ಲಿ ನಟಿಸಲು ಸದಾ ಮುಂದೆ ಇರುತ್ತೇನೆ.

ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಮೇಲೆ ರೋಮಾಂಟಿಕ್ ಹಾಡುಗಳಲ್ಲಿ ಕಾಣಿಸಿಕೊಳ್ಳದಿರುವ ಕೊರಗಿದೆ. ಆದರೆ ಏನು ಮಾಡೋದು, ’ರಾಗಿಣಿ ಐಪಿಎಸ್ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಎಲ್ಲಿಯೇ ಹೋಗಲಿ ಯಾವಾಗ ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೀರಾ ಎಂದು ಎಲ್ಲರೂ ಕೇಳುತ್ತಾರೆ. ಉಪೇಂದ್ರ ಜೊತೆ ’ಶಿವಂ’ ಮಾಡಿದಾಗ ಜನರು ಬೇಸರ ವ್ಯಕ್ತಪಡಿಸಿ ಈ ರೀತಿಯ ಪಾತ್ರಗಳನ್ನು ಮಾಡಬೇಡಿ ಎಂದಿದ್ದರು.ಹೀಗಾಗಿ ನಾಯಕಿ ಪ್ರಧಾನ ಚಿತ್ರಗಳಲ್ಲಿಯೇ ಕಾಣಿಸಿಕೊಳ್ಳುವ ಆಸೆ ಇದೆ ಎಂದರು.

ಎಲ್ಲರೂ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ ಆದರೆ ನಾನಿನ್ನೂ ಇನ್ನೂ ೧೦ ವರ್ಷಗಳ ಕಾಲ ಮದುವೆಯಗುವ ಯಾವುದೇ ಆಲೋಚನೆ ಇಲ್ಲ. ನನಗೆ ಹುಡುಗನೇ ಸಿಗ್ತಾ ಇಲ್ಲ. ಹೆಣ್ಣು ಎಂದ ಮೇಲೆ ಒಂದು ದಿನ ಮದುವೆಯಾಗಬೇಕು. ಅಂತಹ ಸಮಯ ಬಂದಾಗ ನೋಡೋಣ. ಮದುವೆ ಆಗುವುದಿದ್ದರೆ ಅದು ೩೫ ವರ್ಷಗಳ ಬಳಿಕ. ನಿರ್ಮಾಪಕರೊಬ್ಬರ ಜೊತೆ ಮದುವೆಯಗುತ್ತಾರೆ ಎನ್ನುವ ಸುದ್ದಿ ಸುಳ್ಳು.

ಕನ್ನಡದಲ್ಲಿ “ನಾನೇ ನೆಕ್ಸ್ಟ್ ಸಿಎಂ” ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ, ಇದಾದ ನಂತರ “ಕಿಚ್ಚು”, “ಗಾಂದಿಗಿರಿ’ ತೆರೆಗೆ ಬರಲಿದೆ. “ಅಮ್ಮ ಚಿತ್ರ ಸದ್ಯಕ್ಕೆ ಗೊಂದಲದಲ್ಲಿದೆ. ಇದಲ್ಲದೆ ತೆಲುಗು ತಮಿಳು ಮತ್ತು ಹಿಂದಿಯಿಂದಲೂ ಅವಕಾಶ ಬರುತ್ತಿವೆ. ನಾನೇ ನೆಕ್ಸ್ಟ್ ಸಿಎಂ ಚಿತ್ರದಲ್ಲಿ ಮಳೆ ಹಾಡಿನಲ್ಲಿ ಕಾಣಿಸಿಕೊಂಡಿದ್ದೇನೆ. ಇದುವರೆಗೂ ಆ ರೀತಿಯ ಹಾಡಿನಲ್ಲಿ ಕಾಣಿಸಿಕೊಂಡಿರಲಿಲ್ಲ. ಮರೆಯಲಾಗದ ಅನುಭವ ಎಂದರು ರಾಗಿಣಿ.

ಇತ್ತೀಚೆಗೆ ನಟಿ ಭಾವನಾ ಮೇಲೆ ಅತ್ಯಾಚಾರ ಪ್ರಯತ್ನ ನಡೆದ ಮೇಲಂತೂ ಯಾರನ್ನೂ ನಂಬುವುದು ಬಿಡುವುದು ಎನ್ನುವಷ್ಟರ ಮಟ್ಟಿಗೆ ಬಂದಿದ್ದೇನೆ. ನನ್ನ ಬಾಡಿಗಾರ್ಡ್ ಮತ್ತು ಸಹಯಕನನ್ನು ನಂಬಬೇಕು ಬಿಡಬೇಕು ಎನ್ನುವ ಗೊಂದಲದಲ್ಲಿದ್ದೇನೆ. ಅಭಿಮಾನಿಗಳ ಸಂಘ ತನ್ನದೇ ಆದ ರೀತಿಯಲ್ಲಿ ಕೆಸಲ ಮಾಡುತ್ತಿದೆ. ಅದರಲ್ಲಿಯೂ ಹೆಚ್.ಐವಿ ಭಾದಿತರು ಸೇರಿದಂತೆ ಅಸಾಯಕರ ಪರವಾಗಿ ಕೆಲಸ ಮಾಡುತ್ತಿದೆ ಎಂದು ರಾಗಿಣಿ ಹೇಳಿಕೊಂಡರು.

Leave a Comment