ಮದುವೆ ಆಗಲಿದ್ದಾರಂತೆ ಬಾಹುಬಲಿ ನಟ ಪ್ರಭಾಸ್​

 

ಬಾಹುಬಲಿ ಸಿನಿಮಾ ಹಿಟ್ ಆದ ಮೇಲೆ ನಟ ಪ್ರಭಾಸ್ ಖ್ಯಾತಿ ಉತ್ತುಂಗಕ್ಕೇರಿತ್ತು. ಇದೇ ಕಾರಣಕ್ಕೆ ಅವರ ನಟನೆಯ ಸಾಹೋ ಸಿನಿಮಾ ಮೇಲೆ ವೀಕ್ಷಕರು ಭಾರಿ ನಿರೀಕ್ಷೆಯನ್ನು ಇಟ್ಟಿದ್ದರು. ಆದರೆ ಬಿಡುಗಡೆಯ ನಂತರ ಕಟುವಾಗಿ ವಿಮರ್ಶೆಗೊಳಗಾಗಿತ್ತು.

ಅದೆಲ್ಲ ಬಿಡಿ, ಪ್ರಭಾಸ್ ಸಿನಿಮಾ ಹೊರತಾಗಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಅದರಲ್ಲೂ 40 ವರ್ಷವಾದರೂ ಇನ್ನೂ ಮದುವೆಯಾಗದ ನಟ ಯಾರ ಕೈಹಿಡಿಯಲಿದ್ದಾರೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.

ಈ ಹಿಂದೆ ಬಾಹುಬಲಿ ಸಿನಿಮಾ ರಿಲೀಸ್ ಆದ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪ್ರೀತಿಸುತ್ತಿದ್ದಾರೆ. ಶೀಘ್ರವೇ ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದೊಂದು ಗಾಳಿ ಸುದ್ದಿ, ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಪ್ರಭಾಸ್ ಹೇಳಿದ್ದರು.

ಆದರೆ ಈಗ ಮತ್ತೆ ಪ್ರಭಾಸ್ ಮದುವೆ ವಿಚಾರ ಮುನ್ನಲೆಗೆ ಬಂದಿದೆ. ಅವರ ಮುಂದಿನ ಸಿನಿಮಾ ಜಾನ್ ಬಿಡುಗಡೆಯಾದ ಮೇಲೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಸುದ್ದಿಯಾಗಿದೆ. ಆನ್ಲೈನ್ ನ್ಯೂಸ್ ಪೋರ್ಟಲ್ವೊಂದು ವರದಿ ಮಾಡಿರುವ ಪ್ರಕಾರ ಪ್ರಭಾಸ್ ವಿವಾಹದ ವಿಚಾರವನ್ನು ಅವರ ಚಿಕ್ಕಮ್ಮ ಶ್ಯಾಮಲಾ ದೇವಿ ಅವರೇ ತಿಳಿಸಿದ್ದಾರೆ.

ವಧುವಿನ ಬಗ್ಗೆ ಯಾವುದೇ ಮಾಹಿತಿ ನೀಡದ ಅವರು, ಪ್ರಭಾಸ್ ಮುಂದಿನ ಸಿನಿಮಾ ಬಿಡುಗಡೆಯಾಗುತ್ತಲೇ ವಿವಾಹವಾಗಲಿದ್ದಾರೆ ಎಂದಿದ್ದಾರೆ. ಸದ್ಯ ಪ್ರಭಾಸ್ ಜಾನ್ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಪ್ರಭಾಸ್ ಅವರು ಅಮೆರಿಕ ಮೂಲದ ಉದ್ಯಮಿಯ ಮಗಳನ್ನು ಕೈಹಿಡಿಯಲಿದ್ದಾರೆ ಎಂಬುದು ಆಗಸ್ಟ್ನಲ್ಲಿ ಒಮ್ಮೆ ಸುದ್ದಿಯಾಗಿತ್ತು.

Leave a Comment