ಮದುವೆಯಾಗುವುದಾಗಿ ನಂಬಿಸಿ ತಲೆಮರೆಸಿಕೊಂಡ ಯುವಕ-ಯುವತಿ ದೂರು.

ಕೂಡ್ಲಿಗಿ, ಮೇ.8: ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಹೊಂದಿದ್ದ ಯುವಕನೋರ್ವ ಮದುವೆಯಾಗದೇ ತಲೆಮರೆಸಿಕೊಂಡಿದ್ದಾನೆಂದು ನೊಂದ ಯುವತಿ ಗುರುವಾರ ಕೂಡ್ಲಿಗಿ ಠಾಣೆಯಲ್ಲಿ ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.

ಅಮ್ಮನಕೆರೆಯ ನೊಂದ 22 ವರ್ಷದ ಯುವತಿ ನೀಡಿದ ದೂರಿನಂತೆ ಅದೇ ಗ್ರಾಮದ ಬೆಲ್ದಾರ್ ಕೆಲಸ ಮಾಡುತ್ತಿದ್ದ ಯುವಕ ದುರುಗೇಶ್ (24) ಎಂಬಾತನು 2ವರ್ಷದಿಂದ ಪ್ರೀತಿಸುವ ನಾಟಕವಾಡಿ

ಮದುವೆಯಾಗುವುದಾಗಿ ನಂಬಿಸಿ ಏಪ್ರಿಲ್ 23ರಂದು ಸಂಜೆ ಗ್ರಾಮದ ಹಾಳು ಮನೆಗೆ ಕರೆಯಿಸಿಕೊಂಡು ಬಲವಂತವಾಗಿ ದೈಹಿಕ ಸಂಪರ್ಕ ಹೊಂದಿದ್ದು ನಂತರ ಮದುವೆಯಾಗಲು ಯುವತಿ ಕೇಳಿದ್ದರಿಂದ ಮದುವೆಯಾಗುವುದಿಲ್ಲವೆಂದು ನಿಕಾರಿಸಿ ಊರು ಬಿಟ್ಟು ಹೋಗಿ ತಲೆಮರೆಸಿಕೊಂಡಿರುತ್ತಾನೆಂದು ನೊಂದ ಯುವತಿ ಗುರುವಾರ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಕೂಡ್ಲಿಗಿ ಠಾಣಾ ಪಿಎಸ್ಐ ತಿಮ್ಮಣ್ಣ ಚಾಮನೂರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Leave a Comment