ಮದನಿನಗರ ಘರ್ಷಣೆ: ಏಳು ಮಂದಿ ಬಂಧನ

ಉಳ್ಳಾಲ, ಏ.೧೫- ಮಂಗಳೂರಿನಲ್ಲಿ ಶನಿವಾರ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಬಸ್ಸಿಗೆ ನುಗ್ಗಿ ದಾಂಧಲೆ, ವಾಹನಗಳಿಗೆ ಕಲ್ಲು ತೂರಾಟ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ೫೦ಕ್ಕೂ ಅಧಿಕ ಮಂದಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧಿ ಇಬ್ಬರು ಬಾಲಕರು ಸಹಿತ ಏಳು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕುಪ್ಪೆಪದವು ಕಿಲಿಂಜೂರು ನಿವಾಸಿ ಸಲ್ಮಾನ್ ಫಾರಿಷ್ (೨೧), ಜಪ್ಪಿ ಎಂ. ಆರ್. ಭಟ್ ಲೇನಿನ ಮಹಮ್ಮದ್ ಸಿನಾನ್ (೧೯), ಮಹಾಂಕಾಳಿ ಪಡುವಿನ ಮಹಮ್ಮದ್ ಅರ್ಫಾಝ್ (೨೭), ಮದನಿನಗರ ಶಾಂತಿಬಾಗ್‌ನ ನೌಫಾಲ್ ಯಾನೆ ಕಿಡ್ನಿ ನೌಫಾಲ್ (೨೦), ಅಡ್ಯಾರು ಕೆಂಪುಗುಡ್ಡೆ ಕಣ್ಣೂರಿನ ಮಹಮ್ಮದ್ ರಫೀಜ್ ಯಾನೆ ಅಫ್ರೀದ್ (೨೦) ಹಾಗೂ ಇಬ್ಬರು ಬಾಲಕರು ಬಂಧಿತರು.

ಇವರ ವಿರುದ್ಧ ಬಸ್ಸಿನ ಒಳಗೆ ನುಗ್ಗಿ ದಾಂಧಲೆ, ಕಲ್ಲು ತೂರಾಟ, ಭಯದ ವಾತಾವರಣ, ಕೊಲೆ ಯತ್ನ, ಮಾನಭಂಗ ಯತ್ನ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Leave a Comment