ಮದಕರಿಗೆ ದುಬಾರಿ ನಟಿ ನಯನತಾರ ನಾಯಕಿ?

ಬೆಂಗಳೂರು, ಮಾ ೯- ಸದ್ಯ ಚಂದನವನದಲ್ಲಿ ದರ್ಶನ್ ದರ್ಬಾರ್ ಜೋರಾಗಿದೆ. ರಾಬರ್ಟ್ ಸಿನಿಮಾ ಒಂದೆಡೆ ಸದ್ದು ಮಾಡುತ್ತಿದ್ದರೇ, ಇನ್ನೊಂದೆಡೆ ರಾಜವೀರ ಮದಕರಿ ನಾಯಕ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇನ್ನು ಈ ಚಿತ್ರಕ್ಕೆ ದುಬಾರಿ ಹಾಗೂ ಬಹುಭಾಷಾ ನಟಿ ನಯನತಾರ ಮದಕರಿಗೆ ನಾಯಕಿಯಾಗಲಿದ್ದಾರೆ ಎಂದು ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ.
ಐತಿಹಾಸಿಕ ಮದಕರಿ ನಾಯಕನ ಕುರಿತ ಸಿನಿಮಾ ಕೂಡ ಇದೀಗ ಹೊಸ ದಾಖಲೆಗಳ ಮೂಲಕ ಇತಿಹಾಸದ ಪುಟಗಳು ಸೇರುವ ಶುಭಸೂಚನೆ ಕೊಟ್ಟಿದೆ. ಮದಕರಿ ನಾಯಕನಾಗಿ ದರ್ಶನ್ ಅಬ್ಬರಿಸೋಕೆ ತಯಾರಿ ನಡೆಸಿದ್ದಾರೆ, ಅಲ್ಲದೇ ತನ್ನ ನೆಚ್ಚಿನ ಮಗ ದರ್ಶನ್‌ಗಾಗಿ ರಾಜಮಾತೆಯಾಗಿ ಸುಮಲತಾ ಅಂಬರೀಶ್ ಸಂಸದೆ ಆದ ಬಳಿಕವೂ ಈ ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇದರ ಮಧ್ಯೆದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಅಂತಲೇ ಖ್ಯಾತಿ ಪಡೆದಿರುವ ನಯನತಾರ ಡಿ ಬಾಸ್‌ಗೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಸದ್ಯ ಒಂದು ವಾರದ ಶೂಟಿಂಗ್ ಮುಗಿಸಿರುವ ರಾಜವೀರ ಮದಕರಿ ನಾಯಕ ಟೀಂ, ಇಪ್ಪತ್ತು ದಿನದಲ್ಲಿ ಶುರುವಾಗಲಿರುವ ಎರಡನೇ ಹಂತದ ಶೂಟಿಂಗ್‌ಗೆ ನಾಯಕಿ ನಯನತಾರ ಕರೆತರೋ ಪ್ರಯತ್ನಗಳು ಭರದಿಂದ ಸಾಗಿವೆ.
ನಯನತಾರ ಮದಕರಿ ನಾಯಕ ಚಿತ್ರಕ್ಕೆ ಇನ್ನೂ ಫೈನಲ್ ಆಗಿಲ್ಲ. ಆದರೆ, ಮಾತುಕತೆ ನಡೆಯುತ್ತಿದೆ. ಅವರ ಡೇಟ್ಸ್ ನೋಡಿಕೊಂಡು ಫೈನಲ್ ಮಾಡಬೇಕಿದೆ ಎಂದು ಖುದ್ದಾಗಿ ರಾಕ್‌ಲೈನ್ ವೆಂಕಟೇಶ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಹಿಸ್ಟಾರಿಕಲ್ ಮೂವಿ ಸೈರಾದಲ್ಲಿ ಮಿಂಚಿದ್ದ ನಯನತಾರ ಇದೀಗ ನಮ್ಮ ಮದಕರಿ ನಾಯಕ ಚಿತ್ರದಲ್ಲೂ ಮಿಂಚೋದು ಬಹುತೇಕ ಖಚಿತವಾದರೇ, ಚಿತ್ರದ ಐತಿಹಾಸಿಕ ಪಾತ್ರಕ್ಕೆ ನಯನತಾರ ಇನ್ನಷ್ಟು ಮೆರುಗು ತರಲಿದ್ದಾರೆ.

Leave a Comment