ಮತ್ತೊಂದು ಕುಡಿ ಆಗಮನ

ಗಾಂಧಿನಗರಕ್ಕೆ ಇತ್ತೀಚಿನ ದಿನಗಳಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಕಲಾವಿದರು, ತಂತ್ರಜ್ಞರ ಮಕ್ಕಳು ಪ್ರವೇಶಿಸುತ್ತಿದ್ದಾರೆ.ಅದರ ಸಾಲಿಗೆ ಈಗ ಕನ್ನಡದ ಯಶಸ್ವಿ ನಟ ಎಂದು ಗುರುತಿಸಿಕೊಂಡಿದ್ದ ಶಶಿಕುಮಾರ್ ಇದೀಗ ತಮ್ಮ ಪುತ್ರ ಆದಿತ್ಯನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

“ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಕಲಾವಿದ ಪುತ್ರನ ಆಗಮನವಾಗಿದೆ. ಅದುವೇ ಆದಿತ್ಯ ಶಶಿಕುಮಾರ್. ಕನ್ನಡ ಚಿತ್ರರಂಗದಲ್ಲಿಯೇ ತಮ್ಮ ನಟನೆ, ನೃತ್ಯದ ಮೂಲಕವೇ ಜನಮಾನಸದಲ್ಲಿ ಉಳಿದ ಶಶಿಕುಮಾರ್ ಪುತ್ರ ಈತ. ಈಗಿನ್ನೂ ಇಂಜಿನಿಯರ್ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು ಅಪ್ಪನಂತೆಯೇ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಉತ್ಸಾಹದಲ್ಲಿದ್ದಾರೆ”

modave_163

ಪುತ್ರ ಚೊಚ್ಚಲ ಬಾರಿಗೆ ನಟಿಸುತ್ತಿರುವ ಮೊಡವೆ ಚಿತ್ರವನ್ನು ಹರಸಿ ಹಾರೈಸಲು ಹಿರಿಯ ನಟರಾದ ಶಿವರಾಜ್‌ಕುಮಾರ್,ರಾಘವೇಂದ್ರ ರಾಜ್‌ಕುಮಾರ್, ದರ್ಶನ್ ಸೇರಿದಂತೆ ಚಿತ್ರರಂಗದ ಅನೇಕ ಮಂದಿ ಆಗಮಿಸಿ ಆದಿತ್ಯನಿಗೆ ಶುಭ ಹಾರೈಸಿ ಚಿತರಂಗದಲ್ಲಿ ದೊಡ್ಡ ನಟನಾಗಿ ಬೆಳೆಯಲಿ ಎಂದರು.

ತಮ್ಮ ಓರಗೆಯ ನಟರು, ಹಿರಿಯರು, ಕಿರಿಯರು ಮಹೂರ್ತ ಸಮಾರಂಭಕ್ಕೆ ಆಗಮಿಸಿ, ಪುತ್ರವನ್ನು ಹರಿಸಿದ್ದುದು ನಟ ಶಶಿಕುಮಾರ್ ದಂಪತಿಯಲ್ಲಿ ಸಂತಸ ಹಿಮ್ಮಡಿಗೊಳಿಸಿತ್ತು.

modave_141

ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬರಲು ಪತ್ರಕರ್ತರು ಸಿನಿಮಾ ಮಂದಿಯೇ ಕಾರಣ. ನನಗೆ ನೀಡಿದ ಬೆಂಬಲವನ್ನು ಪುತ್ರನಿಗೂ ನೀಡಿ ಎಂದು ಎಲ್ಲರನ್ನು ಕೇಳಿಕೊಂಡರು.

ಮೊಡವೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಷಯವಾಗುತ್ತಿದ್ದು ಅಪ್ಪ ಹಾಕಿಕೊಟ್ಟ ಹಾದಿಯಲ್ಲಿಯೇ ಮುಂದುವರಿಯುತ್ತೇನೆ. ಅಪ್ಪನ ಯುದ್ದಕಾಂಡ ಚಿತ್ರ ನೊಡಿದ್ದೆ. ಆ ಚಿತ್ರ ನನ್ನನ್ನು ಪ್ರೇರೇಪಿಸಿತು. ನಾಯಕನಗಲೂ ಈ ಚಿತ್ರವೂ ಕಾರಣ ಎಂದರು.

modave_123ಸದ್ಯ ನಾಲ್ಕನೇ ಸೆಮಿಸ್ಟರ್ ಇಂಜಿನಿಯರ್ ವ್ಯಾಸಂಗ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ. ಅಪ್ಪನ ಸಲಹೆ ಸೂಚನೆಯನ್ನು ಪಾಲಿಸುತ್ತೇನೆ ಎಲ್ಲರ ಸಹಕಾರ ಬೇಕು ಎಂದರು.

ನಿರ್ದೇಶಕ ಸಿದ್ದಾರ್ಥ ಮಂಡಪ್ಪ,ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಚಿತ್ರ ಮಾಡಲಾಗುತ್ತಿದೆ. ಚಿತ್ರವನ್ನು ಬೀದರ್, ಗುಲ್ಬರ್ಗ, ಬೆಂಗಳೂರು, ಬಾದಾಮಿ,ಐಹೊಳೆ, ಪಟ್ಟದ ಕಲ್ಲು ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡುವ ಉದ್ದೇಶವಿದೆ. ಚಿತ್ರದಲ್ಲಿ ನಾಯಕ ತಮಟೆ ಬಾರಿಸುವ ಕೆಲಸ ಮಾಡುತ್ತಾನೆ. ಅದು ಯಾಕೆ ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದರು.

ನಾಯಕಿ, ಅಪೂರ್ವ, ಮೂರನೇ ಚಿತ್ರ, ಗೌಡರ ಮಗಳ ಪಾತ್ರ ಎಂದರು. ಶ್ರೀಧರ್ ಸಂಭ್ರಮ್, ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೃಷ್ಣಮೂರ್ತಿ ಮತ್ತು ಶಿವಾನಂದ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Leave a Comment