ಮತ್ತೆ ಶುರುವಾಗಲಿದೆ ಡಿಕಿಡಿ ಫ್ಯಾಮಿಲಿ ವಾರ್

ದೀರ್ಘ ಕಾಲದ ವರೆಗೂ ಬ್ರೇಕ್ ತೆಗೆದುಕೊಂಡಿದ್ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತೆ ಶುರುವಾಗಲಿದೆ. ಈ ಹೊಸ ಸೀಸನ್‌ನಲ್ಲಿ ಜೀ ಕನ್ನಡ ಕುಟುಂಬದ ಪ್ರಮುಖ ತಾರೆಗಳು ಪಾಲ್ಗೊಂಡು ವೀಕ್ಷಕರನ್ನು ಮನರಂಜಿಸಲಿದ್ದಾರೆ

ನಗರ ಮತ್ತು ಗ್ರಾಮೀಣ ಮಾರುಕಟ್ಟೆಯಲ್ಲಿ ೭.೫ ಟಿವಿಆರ್ ಗಳಿಸಿದ, ಜೀ ಕನ್ನಡದ ಅತ್ಯಂತ ಜನಪ್ರಿಯ ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್, ಹೊಸ ಸೀಸನಿನ್ನೊಂದಿಗೆ ಹೆಚ್ಚಿನ ಉತ್ಸಾಹವನ್ನೂ ತರಲಿದೆ. ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿ ಹಕ್ಕಿ, ರಾಧಾ ಕಲ್ಯಾಣ, ಮಹಾದೇವಿ, ಪಾರು, ಜೋಡಿ ಹಕ್ಕಿ, ಉಘೆ ಉಘೆ ಮಹಾದೇಶ್ವರ, ಸರೆಗಮಪ, ಡ್ರಾಮಾ ಜೂನಿಯರ್ಸ್ ಸೀಸನ್ ೨ ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ ೩ ಸೇರಿದಂತೆ, ಹಲವಾರು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳಿಂದ ಹೊಸ ಪ್ರತಿಭಾವಂತರು ಫ್ಯಾಮಿಲಿ ವಾರ್ ಸೀಸನ್ ೨ರಲ್ಲಿ ಭಾಗವಹಿಸಲಿದ್ದಾರೆ.

ಈ ಬಾರಿ ಡ್ಯಾನ್ಸ್ ವಾರ್‌ನಲ್ಲಿ
ಅನಿಖಾ (ಕಮಲಿ) ಪ್ರೀಥಮ್ (ಪಾರು), ವಿಕಿ ಮತ್ತು ಅದಿತಿ (ಗಟ್ಟಿಮೇಳ), ಪ್ರಶಾಂತ್ ಮತ್ತು ನೇತ್ರ (ಆತ್ಮ ಬಂಧನ), ಸುಬ್ಬು ಮತ್ತು ಪ್ರಣತಿ (ಬ್ರಹ್ಮಗಂಟು), ಹನುಮಂತು ಮತ್ತು ಶೈನಿ , (ಸರೆಗಮಪ೧೫), ಸೂರಜ್ ಮತ್ತು ಮಿಂಚು (ಕಾಮಿಡಿ ಕಿಲಾಡಿಗಳು ಸೀಸನ್ ೨), ಬರ್ಕಾತ್ ಅಲಿ (ಕಾಮಿಡಿ ಕಿಲಾಡಿಗಳು ಸೀಸನ್ ೨) ಮತ್ತು ನಿಂಗಿ (ಕಮಲಿ), ಲೋಕೇಶ್ (ಕಾಮಿಡಿ ಕಿಲಾಡಿಗಳು ಸೀಸನ್ ೧) ಮತ್ತು ಮಂಥನಾ (ಕಾಮಿಡಿ ಕಿಲಾಡಿಗಳು ಸೀಸನ್ ೨), ವಿವೇಕ್ ಮತ್ತು ಹಿರಣ್ಮಯಿ (ಮಹಾದೇವಿ), ಅನೂಪ್ ಮತ್ತು ಡಿಂಪಾನಾ (ಡ್ರಾಮಾ ಜೂನಿಯರ್ಸ್ ಸೀಸನ್ ೩),  ಪ್ರೇಕ್ಷಿತ್ ಮತ್ತು ಅನ್ವಿಶಾ (ಡ್ರಾಮಾ ಜೂನಿಯರ್ಸ್ ಸೀಸನ್ ೩) ಮತ್ತು ನಂದಿತಾ (ಜೋಡಿಹಕ್ಕಿ) ಮತ್ತು ಅನುಪಮಾ (ಜನಪ್ರಿಯ ಆಂಕರ್), ಸ್ಫರ್ಧಿಗಳಾಗಿರುತ್ತಾರೆ.

ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಅವರು ಕಾರ್ಯಕ್ರಮದ ತೀರ್ಪುಗಾರರಾಗಿದ್ದು, ಜನಪ್ರಿಯ ನಿರೂಪಕಿ ಅನುಶ್ರೀ ಆಯೋಜಿಸಲಿದ್ದಾರೆ.
ಇದೇ ಜುಲೈ ೨೦ ರಿಂದ ಪ್ರಾರಂಭವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಸೀಸನ್ ೨, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ೯: ೩೦ ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ಪ್ರಸಾರವಾಗಲಿದೆ.

Leave a Comment