ಮತ್ತೆ ಬಣ್ಣಗೆದರಿತು ಕನಸು

ಮೊದಲ ಚಿತ್ರದಲ್ಲೇ ನಾಯಕನಟ ಶ್ರೀಮುರಳಿ ಜೋಡಿಯಾಗಿ ಪರಬ್ರಹ್ಮ ಎನ್ನುವ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಆಕಾಂಶ ಪೂಜಾರಿಯ ಸಿನೆಮಾ ನಟಿಯಾಗುವ ಕನಸಿಗೆ ಬಣ್ಣಬಣ್ಣದ ರೆಕ್ಕೆ ಮೂಡಿತ್ತು.  ಪರಬ್ರಹ್ಮದ ಚಿತ್ರೀಕರಣವೂ ನಡೆಯಿತು ಆದರೆ ಚಿತ್ರ ಅರ್ಧಕ್ಕೆ ನಿಂತಿತು. ಇದರಿಂದ ಸಿನೆಮಾ ಆಕಾಶದಲ್ಲಿ ಹಾರಡಲು ಆಗಷ್ಟೇ ರೆಕ್ಕೆ ಬಿಚ್ಚಿದ್ದ ಆಕಾಂಕ್ಷಗೆ ಭಾರಿ ಪೆಟ್ಟು ಬಿದ್ದಂತಾಗಿತ್ತು. ಆಗಿನ್ನೂ ಈ ಹುಡುಗಿ ಓದುತ್ತಿದ್ದಿದ್ದು ಪಿಯುಸಿ ಅಷ್ಟೇ ಸಧ್ಯಕ್ಕೆ ಸಿನೆಮಾ ಆಲೋಚನೆಯೇ ಬೇಡವೆಂದುಕೊಂಡು ತಣ್ಣಗಾದ ಹುಡುಗಿ ಪೂರ್ತಿಯಾಗಿ ಓದಿನತ್ತ ಗಮನ ಹರಿಸಿದ್ದಳು.

ಅಪ್ಪ-ಅಮ್ಮ ಮೂಲತಃ ಮಂಗಳೂರಿನವರಾದರೂ ಆಕಾಂಶಾ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಮನೆಯಲ್ಲಿ ಕನ್ನಡ ಭಾಷೆಯಲ್ಲಿಯೇ ಮಾತನಾಡುತ್ತಿದ್ದರಿಂದ ಕನ್ನಡ ಮಾತನಾಡಲು, ಓದಲು ಕಲಿತಿದ್ದಳು. ನಟನೆಯಲ್ಲಿ ತರಬೇತಿ ಪಡೆಯುವ ಅಥವಾ ಓದಲು ಮನಸು ಮಾಡದಿದ್ದರೂ ಸಿನೆಮಾ ಜಗತ್ತು ಸೆಳಯುತ್ತಲೇ ಇತ್ತು. ಆದರೆ     ಮೊದಲು ಹೆಜ್ಜೆ ಇಟ್ಟಿದ್ದು ಜಾಹೀರಾತು ಕ್ಷೇತ್ರಕ್ಕೆ. ಅನೇಕ ಮುದ್ರಣ ಜಾಹೀರಾತಿಗೆ ರೂಪದರ್ಶಿ ಆಗಿದ್ದಳು ಆ ವೇಳೆಗೆ ಓದುತ್ತಿದ್ದಿದ್ದು ಎರಡನೇ ವರ್ಷದ ಪಿಯುಸಿ. ಆಗಲೇ ಅವಳಿಗೆ ಪರಬ್ರಹ್ಮದ ಅವಕಾಶ ಸಿಕ್ಕಿತ್ತು. ಅದರಿಂದ ಆದ ಕಹಿ ಅನುಭವ ಹುಡುಗಿ ಸಿನೆಮಾ ಆಸೆಯನ್ನೇ ಬಿಡುವಂತೆ ಮಾಡಿತ್ತು.

ಆದರೆ ಈ ಬಣ್ಣದ ಜಗತ್ತು ಮತ್ತೆಮತ್ತೆ ಸೆಳೆಯುತ್ತಲೇ ಇರುತ್ತದೆ.  ಅದಕ್ಕೆ ತಕ್ಕಹಾಗೆ ಮುತ್ತಿನ ಹಾರ ಚಿತ್ರಕ್ಕೆ ಅವಳನ್ನು ಸಂಪರ್ಕಿಸಲಾಯಿತು ತಾಯಿ-ಮಗನ ಬಾಂಧವ್ಯದ ಜೊತೆಗೆ ಸಾಗುವ ಲವ್ ಸ್ಟೋರಿ ಅದರಲ್ಲಿ ಕ್ರೈಮ್‌ನ ತಿರುವಿನಿಂದ ಕುತೂಹಲಕರವಾಗಿರುವ ಕಥೆಯ ಎಳೆ ಇಷ್ಟವಾಗಿ ಆಕಾಂಶ ಮತ್ತೆ ಸಿನೆಮಾಕ್ಕೆ ಬಣ್ಣ ಹಚ್ಚಿದಳು.

ಮುಂಬೈನಲ್ಲಿಯೇ ಇದ್ದರೂ ಬಾಲಿವುಡ್‌ನ ಅವಕಾಶಕ್ಕೆ ಪ್ರಯತ್ನಿಸಲಿಲ್ಲ ಯಾವ ಸಿನೆಮಾದ ಆಡಿಷನ್‌ಗೂ ಹೋಗಲಿಲ್ಲ. ಮುತ್ತಿರನ ಹಾರ ಚಿತ್ರದಿಂದಲೇ ತಾನು ಸಿನೆಮಾ ನಟನೆ ಕಲಿಯುತ್ತಿದ್ದೇನೆ.

ನಿರ್ದೆಶಕ ರಿಷಿ ರಾಮಯ್ಯ ಹೊಸತನದ ಚಿತ್ರ ಕೊಡಬೇಕೆಂದಿರುವುದರಿಂದ ಚಿತ್ರ ಉತ್ತಮವಾಗಿ ಮೂಡಿಬರುತ್ತಿದೆ   ಈಗಾಲೇ ಸುಮಾರು ಅರ್ಧದಷ್ಟು ಚಿತ್ರೀಕರಣ ನಡೆದಿರುವುದರಿಂದ ಮತ್ತಿನ ಹಾರ ತನ್ನ ಸಿನೆಮಾ ಬದುಕಿಗೆ ಉತ್ತಮ ಮುನ್ನುಡಿ ಬರೆಯುತ್ತದೆ ಎನ್ನುವ ಹೊಸ ಕನಸಿನ ಭರವಸೆಯಲ್ಲಿ ಈಗ ಇದ್ದಾಳೆ ಆಕಾಂಶ.

ಎಲ್ಲಾ ಬಗೆಯ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸುವ ರಾಧಿಕಾ ಪಂಡಿತ್, ಹರಿಪ್ರಿಯ ಮತ್ತು ಪ್ರಿಯಾಮಣಿ, ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆ ಹಾಗು ಅಲಿಯಾ ಭಟ್ ತನ್ನ ನೆಚ್ಚಿನ ತಾರೆಯರು ಎನ್ನುವ ಅವಳಿಗೆ ಎಲ್ಲಾ ಭಾಷೆಗಳಲ್ಲಿಯೂ ನಟಿಸುವ ಆಸೆ ಇದೆ.

Leave a Comment