ಮತ್ತೆ ಬಂದ ಮಂಜ

ಮೆಂಟಲ್ ಮಂಜ” ಚಿತ್ರದ ಮೂಲಕ ಚಿತ್ರರಂಗಕ್ಕೆ ಸಹೋದರರ ಪ್ರವೇಶವಾಗಿತ್ತು. ಅಲ್ಲದೆ ಮೊದಲ ಯತ್ನದಲ್ಲಿಯೇ ಮಿಂಚು ಹರಿಸಿದ್ದರು. ತಮ್ಮ ಸಾಯಿ ಸಾಗರ್ ನಿರ್ದೇಶಕರಾಗಿ ಪರಿಚಯವಾದರೆ, ಅಣ್ಣ ಅರ್ಜುನ್ ನಾಯಕನಾಗಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದರು. ಇದೀಗ ಈ ಜೋಡಿ ದಶಕಗಳ ಬಳಿಕ ಮತ್ತೆ ಮೆಂಟಲ್ ಮಂಜನನ್ನು ಕರೆತರಲು ಮುಂದಾಗಿದ್ದಾರೆ. ಅರ್ತಾಥ್, “ಮೆಂಟಲ್ ಮಂಜ-೨” ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಬಂದಿದೆ.

ಕಳೆದವಾರ ಚಿತ್ರದ ಮಹೂರ್ತ ಮಾಡಿಕೊಂಡಿದ್ದ ಚಿತ್ರತಂಡ ಚಿತ್ರದ ಬಗ್ಗೆ ಪತ್ರಿಕಾಗೋಷ್ಠಿ ಕರೆದು ವಿವರ ನೀಡಿತು. ಈ ಸಹೋದರ ಅರ್ಜುನ್ ಅವರನ್ನು ವಿಭಿನ್ನ ರೀತಿ ತೆರೆಯ ಮೇಲೆ ಪರಿಚಯಿಸಲು ನಿರ್ದೇಶಕ ಸಾಯಿ ಸಾಗರ್ ಮುಂದಾಗಿದ್ದಾರೆ. ಚಿತ್ರದ ಕುರಿತು ಮಾತಿಗಿಳಿದ ನಿರ್ದೇಶಕ ಸಾಯಿ ಸಾಗರ್, ಕಥೆಯನ್ನು ಪಕ್ಕಾ ಮಾಡಿಕೊಂಡಿದ್ದೇನೆ. ಆದರೆ ನಟ ಅರ್ಜುನ್ ಸೇರಿದಂತೆ ಯಾರಿಗೂ ಕಥೆ ಹೇಳಿಲ್ಲ. ಚಿತ್ರದ ಸೆಟ್‌ನಲ್ಲಿ ಅವರ ಸನ್ನಿವೇಶವನ್ನು ವಿವರಿಸಿ ಅವರಿಂದ ಅಭಿನಯ ತೆಗೆಸಲಾಗುವುದು. ಜೊತೆಗೆ ಚಿತ್ರದಲ್ಲಿ ಬಹುತೇಕ ರಂಗಭೂಮಿಯ ಕಲಾವಿದರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ರೌಡಿಸಂ ಚಿತ್ರವನ್ನು ವಿಭಿನ್ನ ರೀತಿಯಲ್ಲಿ ತೆರೆಗೆ ತರಲಾಗುವುದು ಇದುವರೆಗೂ ಈ ರೀತಿಯ ಪ್ರಯತ್ನ ಯಾರೂ ಮಾಡಿಲ್ಲ. ಕ್ರೌರ್ಯ, ಹೀಂಸೆ ತೋರಿಸದೆ ರೌಡಿಸಂ ಕಥೆಯನ್ನು ಹಾಸ್ಯದ ರೂಪದಲ್ಲಿ ತೆರೆಗೆ ತರಲಾಗುವುದು ಅಲ್ಲದೆ ಸಮಸ್ಯೆಯನ್ನೂ ಹೀಗೂ ಬಗೆಹರಿಸಬಹುದಾ ಎನ್ನುವುದನ್ನು ತೋರಿಸಲಾಗುತ್ತಿದೆ. ಹಾಗಂತ ರೌಡಿಸಂ ವಿಜೃಂಬಿಸುತ್ತಿಲ್ಲ. ಬೆಂಗಳೂರಿನಲ್ಲಿ ೩೫ ದಿನ ಹಾಗು ಮಂಗಳೂರಿನಲ್ಲಿ ೧೦ ದಿನ ಸೇರಿದಂತೆ ೪೫ ದಿನಗಳ ಕಾಲ ಚಿತ್ರೀಕರಣ ಮಾಡುವ ಉದ್ದೇಶವೊಂದಲಾಗಿದೆ. ನಾಯಕನನ್ನು ಎರಡು ರೀತಿಯಲ್ಲಿ ತೋರಿಸಲಾಗುತ್ತಿದೆ ಎಂದು ಮಾತು ಮುಗಿಸಿದರು.

ನಾಯಕ ಅರ್ಜುನ್, ಹೇಂಗೋ ಮಾಡುವುದಕ್ಕಿಂತ ಹಿಂಗೇ ಚಿತ್ರ ಮಾಡಬೇಕೆನ್ನುವ ಉದ್ದೇಶದಿಂದ ಚಿತ್ರ ಮಾಡಲಗುತ್ತಿದೆ. ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದೇನೆ. ನಾಲ್ಕು ವರ್ಷದ ಹಿಂದೆ ಕಥೆ ಸಿದ್ದವಾಗಿತ್ತು ಕಾರಣಾಂತದಿಂದ ತಡವಾಯಿತು. ಒಳ್ಳೆಯ ಚಿತ್ರ ಮಾಡುವ ಉದ್ದೇಶವೊಂದಲಾಗಿದೆ ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು.

ಸಹ ನಿರ್ಮಾಪಕ ಗೋವಿಂದಣ್ಣ, ಮೆಂಟಲ್ ಮಂಜ ಚಿತ್ರ ಮಾಡುವಾಗಲೂ ಜೊತೆಯಲ್ಲಿ ಇದ್ದೆ ಈಗಲೂ ಜೊತೆಯಲ್ಲಿ ಇದ್ದೇನೆ. ಒಳ್ಳೆಯ ಚಿತ್ರ ಮಾಡುವ ಉದ್ದೇಶವಿದೆ, ನಮ್ಮ ಕನಸಿನ ಕೂಸು ನಿಮ್ಮ ಕೂಸೆಂದು ತಿಳಿದು ಹರಸಿ ಎಂದು ಕೇಳಿಕೊಂಡರು. ನಿರ್ಮಾಪಕರ ಪುತ್ರ ಗಿರೀಶ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Leave a Comment