ಮತ್ತೆ ನಾಯಕನಾದ ರವಿಚಂದ್ರನ್

ಮಾಣಿಕ್ಯ, ’ಲಕ್ಷಣ’ ಮತ್ತು ’ಹೆಬ್ಬುಲಿ’ ಚಿತ್ರಗಳಲ್ಲಿ ಒಂದರ ಮೇಲೊಂದರಂತೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ರವಿಚಂದ್ರನ್ ಪೋಷಕ ಪಾತ್ರಗಳಿಗೆ ಸೀಮಿತವಾಗಿ ಬಿಡುತ್ತಾರಾ? ಎನ್ನುವ ಅನುಮಾನ ಮತ್ತು ಗೊಂದಲದಿಂದ ಹೊರಬರಲು ಏಕಕಾಲಕ್ಕೆ ಮೂರು ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಏಕಕಾಲಕ್ಕೆ ರಾಜೇಂದ್ರ ಪೊನ್ನಪ್ಪ, ಬಕಾಸುರ ಮತ್ತು ದಶರಥ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸುವ ಮೂಲಕ ನಾನು ಬರೀ ಪೋಷಕ ಪಾತ್ರಗಳಿಗೆ ಸೀಮಿತವಾಗಿಲ್ಲ. ನಾಯಕನಾಗಿ ಇನ್ನೂ ಇದ್ದೇನೆ ಎನ್ನುವುದನ್ನು ಚಿತ್ರರಂಗದ ಮಂದಿಗೆ ಸಾರಿ ಹೇಳುವ ಪ್ರಯತ್ನ ಮಾಡಿದ್ದಾರೆ.

ರಾಜೇಂದ್ರ ಪೊನ್ನಪ್ಪ ಮತ್ತು ದಶರಥದಲ್ಲಿ ಬಹಳ ದಿನಗಳ ನಂತರ ವಕೀಲನ ಪಾತ್ರ ಮಾಡುತ್ತಿದ್ದಾರೆ. ಬಕಾಸುರ ಚಿತ್ರ ಸ್ಪನ್ಸೆನ್ಸ್ ಮತ್ತು ಥ್ರಿಲ್ಲರ್‌ನಿಂದ ಕೂಡಿದ ಚಿತ್ರ ಎನ್ನುವ ಮೂಲಕ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಕಾಪಾಡಿಕೊಂಡರು.

’ರಾಜೇಂದ್ರ ಪೊನ್ನಪ್ಪ ಚಿತ್ರವನ್ನು ರವಿಚಂದ್ರನ್ ಅವರದೇ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದು ನಿರ್ದೇಶನದ ಜೊತೆಗೆ ಸಂಗೀತವನ್ನೂ ಅವರೇ ನೀಡುತ್ತಿದ್ದಾರೆ. ’ಬಕಾಸುರ’ ಚಿತ್ರವನ್ನು ಕರ್ವ ನಿರ್ದೇಶಕ ನವನೀತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮತ್ತೊಂದು ಚಿತ್ರ ’ದಶರಥ’ ಚಿತ್ರಕ್ಕೆ  ಎಂ.ಎಸ್ ರಮೇಶ್ ನಿರ್ದೇಶಕ.

ಮಹಾಶಿವರಾತ್ರಿಯಂದು ಮೂರು ಚಿತ್ರಗಳ ಮಹೂರ್ತ ನಡೆಯಿತು. ಮಹೂರ್ತದ ನಂತರ ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಿಗಿಳಿದ ರವಿಚಂದ್ರನ್, ಮೂರು ಚಿತ್ರಗಳು ಸ್ವಮೇಕ್‌ಗಳು, ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಅದಕ್ಕೆ ಸೀಮಿತವಾಗಬಾರದು ಎನ್ನುವ ಕಾರಣಕ್ಕೆ ನಾಯಕನಾಗಿದ್ದೇನೆ. ಕಳೆದ ಏಳು ತಿಂಗಳುಗಳಿಂದ ಚಿತ್ರಕಥೆ ಮಾಡಿಕೊಂಡಿದ್ದೇನೆ. ಒಳ್ಳೆ ಚಿತ್ರ ಮಾಡುವ ಉದ್ದೇಶವಿದೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ. ಬಹಳ ದಿನಗಳ ನಂತರ ವಕೀಲನ ಪಾತ್ರ ಮಾಡುತ್ತಿದ್ದು, ರಾಜೇಂದ್ರ ಪೊನ್ನಪ್ಪ ಚಿತ್ರದಲ್ಲಿ ಕ್ರಿಮಿನಲ್ ಲಾಯರ್, ದಶರಥದಲ್ಲಿ ಸಾಮಾನ್ಯ ವಕೀಲ ಇನ್ನು ಬಕಾಸುರದಲ್ಲಿ ವಿಭಿನ್ನ ಪಾತ್ರವಿದೆ. ಪಾತ್ರ ಏನು ಎಂದು ಹೇಳಿದರೆ ಕಥೆಯ ಗುಟ್ಟು ಬಿಟ್ಟುಕೊಟ್ಟಂತಾಗುತ್ತದೆ. ಈ ಚಿತ್ರ ಸಸ್ಪೆನ್ಸ್ ಮತ್ತು ಥ್ರಿಲ್ಲರ್‌ನಿಂದ ಕೂಡಿದೆ. ಮೂರು ಚಿತ್ರಗಳಲ್ಲಿ ತಲಾ ನಾಲ್ಕು ಹಾಡುಗಳಿವೆ.

ನಾಯಕಿ ಯಾರೆನ್ನವುದು ಸದ್ಯದಲ್ಲಿಯೇ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದರು. ಇನ್ನು ಹೆಬ್ಬುಲಿ ಚಿತ್ರದಲ್ಲಿ ರವಿಚಂದ್ರನ್ ಅವರ ಭಾವಚಿತ್ರ ಹಾಕದ ಬಗ್ಗೆ  ಅವರ ಅಭಿಮಾನಿಗಳು ಬೇಸರಪಟ್ಟುಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ರವಿಚಂದ್ರನ್,ಗೌರವ ಕೇಳಿ ಪಡೆಯುವಂತಹುದಲ್ಲ.ಅದು ತಾನಾಗಿಯೇ ಬರಬೇಕು.

ಚಿತ್ರದಲ್ಲಿ ಪೋಸ್ಟರ್ ಹಾಕಿಲ್ಲ ಎಂದು ನನಗೇನು ಬೇಜಾರಿಲ್ಲ. ಆದರೆ ಪೋಸ್ಟರ್ ಹಾಕುವುದು ಚಿತ್ರದ ನಿರ್ಮಾಪಕರ ಕೆಲಸ. ಅಭಿಮಾನಿಗಳು ಯಾರೂ ಕೂಡ ಈ ಬಗ್ಗೆ ಬೇಸರ ಪಟ್ಟುಕೊಳ್ಳಬಾರದು. ಪೋಸ್ಟರ್‌ಗಿಂತ ಚಿತ್ರದಲ್ಲಿನ ಪಾತ್ರ ಮುಖ್ಯ ಎಂದು ಸಮಾಧಾನದ ಮಾತುಗಳನ್ನಾಡಿದರು.

Leave a Comment