ಮತ್ತೆ ತಾಯಿಯಾದ ಶಿಲ್ಪಾ ಶೆಟ್ಟಿ..!

ಮುಂಬೈ, ಫೆ 21- ಕರಾವಳಿ ಬೆಡಗಿ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿನ ತಾಯಿಯಾಗಿರುವುದಾಗಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಷ್ಟು ದಿನಗಳ ನಮ್ಮ ಪ್ರಾರ್ಥನೆ ಫಲವಾಗಿ ಅದ್ಬುತ ನಡೆದಿದೆ. ನಮ್ಮ ಹೃದಯಗಳು ಸಂತಸದಿಂದ ತುಂಬಿಹೋಗಿವೆ. ಜೂನಿಯರ್ ಎಸ್‌ಎಸ್‌ಕೆ ಬಂದಿದ್ದಾಳೆ. ಪುಟ್ಟ ಕಂದಮ್ಮಳ ಆಗಮನ ರೋಮಾಂಚನ ಮೂಡಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಸಮಿಶಾ ಶೆಟ್ಟಿ ಕುಂದ್ರಾ .. ಫೆ ೧೫ ರಂದು ಜನಿಸಿದ್ದಾಳೆ. ‘ಸ’ ಎಂದರೆ ಸಂಸ್ಕೃತದಲ್ಲಿ ಒಳಗೊಂಡು ’ಮಿಶಾ’ ಎಂದರೆ ರಷ್ಯನ್ ಭಾಷೆಯಲ್ಲಿ ದೇವತೆ. ನಮ್ಮ ಮನೆಯ ಮಹಾ ಲಕ್ಷ್ಮಿ .. ನಮ್ಮ ಕುಟುಂಬವನ್ನು ಪರಿಪೂರ್ಣಗೊಳಿಸಿದ್ದಾಳೆ.
ನಮ್ಮ ದೇವಕನ್ಯೆಗೆ ನಿಮ್ಮ ಆಶೀರ್ವಾದ ಬೇಕು. ತಂದೆ ತಾಯಿ: ರಾಜ್- ಶಿಲ್ಪಾಶೆಟ್ಟಿ ಕುಂದ್ರಾ. ಅಣ್ಣ ವಿಯಾನ್ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.

೯೦ ರ ದಶಕದಿಂದ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸುತ್ತಿರುವ ಶಿಲ್ಪಾಶೆಟ್ಟಿ ಉದ್ಯಮಿ ರಾಜುಕುಂದ್ರಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ವಿಯಾನ್ ಎಂಬ ಮಗನಿದ್ದಾನೆ. ಫೆಬ್ರವರಿ ೧೫ ರಂದು ಸರೊಗಸಿ ಮೂಲಕ ದಂಪತಿಗೆ ಹೆಣ್ಣು ಮಗು ಜನಿಸಿದೆ. ಹದಿಮೂರು ವರ್ಷಗಳಿಂದ ಚಿತ್ರರಂಗದಿಂದ ದೂರದಲ್ಲಿರುವ ಶಿಲ್ಪಾ ಶೆಟ್ಟಿ ಯೋಗಾಸನ ವೀಡಿಯೊಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಶಬ್ಬೀರ್ ಖಾನ್ ನಿರ್ದೇಶನದಲ್ಲಿ ನಿಕಮ್ಮ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಶೀಘ್ರದಲ್ಲೇ ಬಾಲಿವುಡ್ ಎಂಟ್ರಿ ನೀಡಲಿದ್ದಾರೆ.

Leave a Comment