ಮತ್ತೆ ಜೋಡಿ ಆಗುತ್ತಾರಾ ಕಾರ್ತಿಕ್ -ಸಾರಾ!

 
ಮುಂಬೈ, ಜೂನ್ 9 – ಇದೇ ಮೊದಲ ಬಾರಿಗೆ ‘ಲವ್ ಆಜ್ ಕಲ್-2’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವ ಕಾರ್ತಿಕ್ ಆರ್ಯನ್, ಸಾರಾ ಅಲಿ ಖಾನ್ ಜೋಡಿ ಈಗ ಮತ್ತೊಂದು ಚಿತ್ರದಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆನಂದ್ ಎಲ್ ರಾಯ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿಯೂ ಈ ಜೋಡಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ ಎಂಬ ಮಾತುಗಳು ಬಿಟೌನ್ ನಲ್ಲಿ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ಕಾರ್ತಿಕ್, ಆನಂದ್ ಅವರ ಕಚೇರಿಗೆ ಭೇಟಿಕೊಟ್ಟಿದ್ದೇ ಇಂತಹದೊಂದು ಸುದ್ದಿ ಹೊರಬರುವುದಕ್ಕೆ ಕಾರಣವಾಗಿದೆ.

ಅಮ್ತಿಯಾಜ್ ಅಲಿ ಖಾನ್ ನಿರ್ದೇಶನದ ‘ಅಲ್ ಆಜ್ ಕಲ್ -2’ ಚಿತ್ರದಲ್ಲಿ ಕಾರ್ತಿಕ್ ಹಾಗೂ ಸಾರಾ ನಟಿಸುತ್ತಿದ್ದು, ಸದ್ಯ ಮುಂಬೈದಲ್ಲಿ ಚಿತ್ರೀಕರಣ ನಡೆಯುತ್ತಿದೆ.2009ರಲ್ಲಿ ನಟ ಸೈಫ್ ಅಲಿ ಖಾನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ತೆರೆ ಕಂಡಿದ್ದ ‘ಲವ್ ಆಜ್ ಕಲ್’ ಚಿತ್ರದ ಅವತರಣಿಕೆ ಇದಾಗಿದೆ. ಚಿತ್ರದಲ್ಲಿ ಕಾರ್ತಿಕ್ ವಿವಿಭಿ ಲುಕ್ಸ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂದೆಯ ಅವತರಣಿಕೆ ಚಿತ್ರದಲ್ಲಿ ಸಾರಾ ನಟಿಸುತ್ತಿದ್ದು, ಪ್ರೇಕ್ಷಕ ವರ್ಗದಲ್ಲಿ ಭಾರಿ ಕುತೂಹಲ ಮೂಡಿಸಿದೆ.

Leave a Comment