ಮತ್ತೆರಡು ವಿಕೆಟ್ ಕಬಳಿಸಿದ ಭಾರತ

ರಾಂಚಿ, ಮಾ.೨೦- ಆಸ್ಟ್ರೇಲಿಯಾ ತಂಡದವರು ಮೂರನೇ ಕ್ರಿಕೆಟ್ ಟೆಸ್ಟ್‌ನ ಕೊನೆಯ ದಿನವಾದ ಸೋಮವಾರ ಭಾರತದ ವಿರುದ್ಧ ಚಹಾ ವಿರಾಮಕ್ಕೆ ಸುಮಾರು ಒಂದು ಗಂಟೆ ಮುನ್ನ ೪೮  ಓವರ್‌ಗಳಲ್ಲಿ ೪ ವಿಕೆಟ್‌ಗೆ ೧೦೬  ರನ್ ಮಾಡಿದ್ದರು. ಆಸ್ಟ್ರೇಲಿಯಾ ಇನ್ನೂ ೮೮ ರನ್‌ಗಳಿಂದ ಹಿಂದಿದೆ.

ಶಾನ್ ಮಾರ್ಷ್ (೬೨ ಎಸೆತಗಳಲ್ಲಿ ೪ ಬೌಂಡರಿಗಳಿದ್ದ ೨೭) ಹಾಗೂ ಪೇಟರ್ ಹ್ಯಾಂಡ್‌ಸ್ಕೊಂಬ್ (೫೪ ಎಸೆತಗಳಲ್ಲಿ ೧೨) ಆಡುತ್ತಿದ್ದರು

ಊಟದ ಸಮಯಕ್ಕೆ ೪ ವಿಕೆಟ್‌ಗೆ ಆಸ್ಟ್ರೇಲಿಯಾ ೪ ವಿಕೆಟ್‌ಗೆ ೮೩ ರನ್ ಗಳಿಸಿತ್ತು. ಭಾರತದ ಬೌಲರ್‌ಗಳು ಮೊದಲ ಅಧಿವೇಶನದಲ್ಲಿ ೬೦ ರನ್ ನೀಡಿದರೂ ಪ್ರವಾಸಿಗರ ಎರಡು ಪ್ರಮುಖ ವಿಕೆಟ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.

ಮೊದಲ ಸರದಿಯಲ್ಲಿ ೧೫೨ ರನ್‌ಗಳಿಂದ ಹಿಂದುಳಿದಿದ್ದ ಆಸ್ಟ್ರೇಲಿಯಾ ಭಾನುವಾರ ೨ ವಿಕೆಟ್‌ಗೆ ೨೩ ರನ್ ಗಳಿಸಿತ್ತು. ಆರಂಭಿಕ ಮ್ಯಾಟ್ ರೆನ್‌ಶಾ ಜೊತೆ ಆಟ ಮುಂದುವರಿಸಿದ ಕ್ಯಾಪ್ಟನ್ ಸ್ಟೀವನ್ ಸ್ಮಿತ್ ಮೊದಲ ಒಂದು ಗಂಟೆ ಸುರಕ್ಷತೆಯತ್ತ ಗಮನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿಗರ ಇನಿಂಗ್ಸ್‌ಗೆ ಸ್ಮಿತ್ ಲಂಗರು ಹಾಕಿದ್ದರೆ, ಈ ಸಲ ಆ ಜವಾಬ್ದಾರಿ ವಹಿಸಿಕೊಂಡ ರೆನ್‌ಶಾ (೬೮ ಎಸೆತಗಳಲ್ಲಿ ೨ಬೌಂಡರಿಗಳಿದ್ದ ೨೧) ಅವರನ್ನು ಇಶಾಂತ್ ಶರ್ಮ ಎಲ್‌ಬಿ ಬಲೆಗೆ ಬೀಳಿಸಿದರು. ಭಾನುವಾರ ಎರಡು ವಿಕೆಟ್ ಗಳಿಸಿದ್ದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮರು ಓವರ್‌ನಲ್ಲಿ ಸ್ಮಿತ್ (೬೮ ಎಸೆತಗಳಲ್ಲಿ ೨ ಬೌಂಡರಿಗಳಿದ್ದ ೨೧) ವಿಕೆಟ್ ಉರುಳಿಸಿದರು.

ಸ್ಕೋರು ವಿವರ

ಆಸ್ಟ್ರೇಲಿಯಾ, ೧ನೇ ಇನಿಂಗ್ಸ್: ೪೫೧

ಭಾರತ, ೧ನೇ ಇನಿಂಗ್ಸ್:

೯ ವಿಕೆಟ್‌ಗೆ ೬೦೩ ಡಿಕ್ಲೇರ್ಡ್

ಆಸ್ಟ್ರೇಲಿಯಾ, ೨ನೇ ಇನಿಂಗ್ಸ್:

೪ ವಿಕೆಟ್‌ಗೆ ೧೦೬

(ಭಾನುವಾರ ೨ ವಿಕೆಟ್‌ಗೆ ೨೩)

ಡೇವಿಡ್ ವಾರ್ನರ್ ಬಿ ಜಡೇಜ ೧೪, ಮ್ಯಾಟ್ ರೆನ್‌ಶಾ ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮ , ಸ್ಟೀವನ್ ಸ್ಮಿತ್ ಬಿ ಜಡೇಜ ೨೧, ಶಾನ್ ಮಾರ್ಷ್ ಬ್ಯಾಟಿಂಗ್ ೨೭, ಪೀಟರ್  ಹ್ಯಾಂಡ್‌ಸ್ಕೊಂಬ್ ಬ್ಯಾಟಿಂಗ್ ೧೨, ಇತರೆ (ಬೈ ೯, ಲೆಬೈ ೩, ನೋಬಾ ೩) ೧೫

ವಿಕೆಟ್ ಪತನ: ೧-೧೭ (ವಾರ್ನರ್, ೫.೧), ೨-೨೩ (ಲಿಯೊನ್, ೭.೨), ೩-೫೯ (ರೆನ್‌ಶಾ, ೨೮.೪), ೪-೬೩ (ಸ್ಮಿತ್, ೨೯.೧)

ಬೌಲಿಂಗ್: ಆರ್.ಅಶ್ವಿನ್ ೧೦-೨-೨೭-೦; ರವೀಂದ್ರ ಜಡೇಜ ೧೯-೧೦-೨೨-೩; ಉಮೇಶ್ ಯಾದವ್ ೧೨-೨-೨೩-೦; ಇಶಾಂತ್ ಶರ್ಮ ೭-೦-೨೨-೧

 

Leave a Comment