ಮತ್ತೆಕ್ರಿಕೆಟ್ ಅಂಗಳಕ್ಕೆ ಮರಳಿದ ಕೇರಳ ಎಕ್ಸ್‌ಪ್ರೆಸ್

ಸೆಪ್ಟಂಬರ್‌ನಲ್ಲಿ ನಿಷೇಧ ಅಂತ್ಯ

ಆತ ಭಾರತೀಯಕ್ರಿಕೆಟ್‌ತಂಡದ ವೇಗದ ಬೌಲರ್. ಐಪಿಎಲ್‌ನಲ್ಲಿ ಸ್ಟಾಟ್ ಫಿಕ್ಸಿಂಗ್‌ಆರೋಪಕ್ಕೆಗುರಿಯಾಗಿಆಜೀವ ನಿಷೇಧಕ್ಕೊಳಗಾಗಿ ತಿಹಾರ್‌ಜೈಲು ಪಾಲಾಗಿದ್ದರು. ಕ್ರಿಕೆಟ್ ಬದುಕು ಮುಗಿದು ಹೋಯಿತುಎನ್ನುತ್ತಿರುವಾಗಲೇ ಮತ್ತೆ ದೇಶೀಯ ಕ್ರಿಕೆಟ್‌ಗೆ ಮರಳಿದ್ದಾರೆ.
ಹೌದು. ಇಷ್ಟು ಪೀಠಿಕೆಯಾರ ಬಗ್ಗೆ ಎಂಬ ಸಂಶಯಕಾಡುವುದು ಸಹಜ. ಆತ ಬೇರಾರೂಅಲ್ಲ ಕೇರಳ ಎಕ್ಸ್‌ಪ್ರೆಸ್‌ಎಂದೇಖ್ಯಾತಿಯಾಗಿದ್ದಎಸ್. ಶ್ರೀಶಾಂತ್.
ವಿವಾದಾಸ್ಪದಆಟಗಾರನೆಂದೇಖ್ಯಾತಿಯಾಗಿದ್ದ ಶ್ರೀಶಾಂತ್, ಮತ್ತೆಕ್ರಿಕೆಟ್ ಅಂಗಳಕ್ಕೆ ಮತ್ತೆ ವಾಪಸ್ ಬರುತ್ತಾರೆಂದುಯಾರೂಕೂಡ ನಿರೀಕ್ಷೆ ಮಾಡಿರಲಿಲ್ಲ. ಏಳು ವರ್ಷ ನಿಷೇಧಕ್ಕೊಳಗಾಗಿರುವ ಶ್ರೀಶಾಂತ್ ಅವರಅವಧಿ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಹೀಗಾಗಿ ೩೭ ವರ್ಷದಕ್ರಿಕೆಟಿಗನಿಗೆ ಕೇರಳ ಕ್ರಿಕೆಟ್ ಸಂಸ್ಥೆ ರಾಜ್ಯರಣಜಿಕ್ರಿಕೆಟ್‌ನಲ್ಲಿಆಡುವಂತೆಆಹ್ವಾನ ನೀಡಿದೆ.
ಚಿನಕುರಳಿ ಕ್ರಿಕೆಟ್‌ಎಂದೇಖ್ಯಾತಿಯಾಗಿರುವಐಪಿಎಲ್‌ನ ೨೦೧೩ರ ಆವೃತ್ತಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್‌ಆರೋಪದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿತ್ತು. ಶ್ರೀಶಾಂತ್ ವಿರುದ್ಧಆರೋಪ ಕೇಳಿಬಂದಿದ್ದರಿಂದ ಬಿಸಿಸಿಐ ಅವರ ಮೇಲೆ ಆಜೀವ ನಿಷೇಧ ಹೇರಿತ್ತು,
ಮೇ ೧೩, ೨೦೧೩ರಲ್ಲಿ ಶ್ರೀಶಾಂತ್ ಹಾಗೂ ರಾಜಸ್ತಾನರಾಯಲ್ಸ್‌ನ ಸಹ ಆಟಗಾರರಾದಅಂಕಿತ್‌ಚೌಹಾಣ್ ಮತ್ತುಅಜಿತ್‌ಚಾಂಡಿಲಾಅವರನ್ನುದೆಹಲಿ ಪೊಲೀಸರು ಬಂಧಿಸಿದ್ದರು.
ಬಿಸಿಸಿಐ ವಿಧಿಸಿದ್ದ ಅಜೀವ ನಿಷೇಧವನ್ನು ಪ್ರಶ್ನಿಸಿ ಶ್ರೀಶಾಂತ್ ಸುಧೀರ್ಘಅವಧಿಯವರೆಗೆ ನಡೆಸಿದ ಕಾನೂನು ಸಮರ ನಡೆಸಿದ್ದರು, ೨೦೧೫ರಲ್ಲಿ ದೆಹಲಿ ಹೈಕೋರ್ಟ್ ಶ್ರೀಶಾಂತ್ ವಿರುದ್ಧದ ಆರೋಪಗಳನ್ನು ಖುಲಾಸೆಗೊಳಿಸಿತ್ತು.
೨೧೦೮ರಲ್ಲಿ ಕೇರಳ ಹೈಕೋರ್ಟ್ ಬಿಸಿಸಿಯ ಹೇರಿದಆಜೀವ ನಿಷೇಧವನ್ನು ತೆರವುಗೊಳಸಿತ್ತು. ಆದರೆ, ಬಿಸಿಸಿಐ ಕಾನೂನು ಸಮರ ನಡೆಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡುವ ಸಂದರ್ಭದಲ್ಲಿಶ್ರೀಶಾಂತ್ ಮೇಲಿನ ಆರೋಪವನ್ನುಎತ್ತಿಹಿಡಿದು ಶಿಕ್ಷೆಯ ಪ್ರಮಾಣವನ್ನುಕಡಿಮೆ ಮಾಡಿತ್ತು. ನಂತರ ಬಿಸಿಸಿಐ ನಿಷೇಧವನ್ನು ಏಳು ವರ್ಷಗಳಿಗೆ ಸೀಮಿತ ಗೊಳಿಸಿತ್ತು. ಈ ನಿಷೇಧದಅವಧಿಇದೇ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ಮತ್ತೆ ಶ್ರೀಶಾಂತ್ ದೇಶೀಯ ಕ್ರಿಕೆಟಿಗೆ ಮರಳುವ ಹಾದಿ ಸುಗಮವಾಗಿದೆ.
ಹಾಗೆ ನೋಡಿದರೆ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್‌ಆರೋಪಕ್ಕೆಗುರಿಯಾಗಿತಿಹಾರ್‌ಜೈಲಿನಿಂದ ಮತ್ತೆಕ್ರಿಕೆಟ್ ಮೈದಾನಕ್ಕೆ ಮತ್ತೆ ಮರಳಲಿದ್ದಾರೆ. ಶ್ರೀಶಾಂತ್ ೨೭ ದಿನಗಳ ಕಾಲ ತಿಹಾರ್‌ಜೈಲಿನಲ್ಲಿ ಕಳೆದಿದ್ದರು. ಆಗ ಅವರಕ್ರಿಕೆಟ್ ಬದುಕು ಮುಗಿದೇ ಹೋಗಿತ್ತುಎಂದು ಭಾವಿಸಿದ್ದವರಿಗೆ ಕೇರಳ ಕ್ರಿಕೆಟ್ ಸಂಸ್ಥೆ ಮರುಜೀವ ನೀಡಿದೆ.
೨೦೧೧ರಲ್ಲಿ ವಿಶ್ವಕಪ್‌ಕ್ರಿಕೆಟ್‌ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದ ಭಾರತತಂಡವನ್ನು ಶ್ರೀಶಾಂತ್ ಪ್ರತಿನಿಧಿಸಿದ್ದ ಕೊಚ್ಚಿ ಮೂಲದ ಶ್ರೀಶಾಂತ್ ೨೭ ಟೆಸ್ಟ್ ಪಂದ್ಯಗಳಲ್ಲಿ ೮೭ ವಿಕೆಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ೭೫ ವಿಕೆಟ್‌ಗಳನ್ನು ಪಡೆದಿದ್ದಾರೆ.
ನಿಷೇಧದಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನುಕಾದುನೋಡಬೇಕಿದೆ.

ದೇಶೀಯ ಕ್ರಿಕೆಟ್‌ನಲ್ಲಿಆಡಲು ಅವಕಾಶ ನೀಡಿರುವ ಕೇರಳ ಕ್ರಿಕೆಟ್ ಸಂಸ್ಥೆಗೆ ಧನ್ಯವಾದ ಹೇಳುತ್ತೇನೆ. ದೈಹಿಕ ಸಾಮರ್ಥ್ಯವನ್ನು ಸಾಬೀತುಪಡಿಸಿ ಬಿರುಗಾಳಿಯಂತೆ ಕ್ರಿಕೆಟ್ ಅಂಗಳಕ್ಕೆ ವಾಪಸ್ ಬರುತ್ತೇನೆ. ಈ ಮೂಲಕ ಎಲ್ಲ ವಿವಾದಗಳಿಗೆ ಇತಿಶ್ರೀ ಹಾಡುತ್ತೇನೆ.
ಶ್ರೀಶಾಂತ್

೪೪ ಐಪಿಎಲ್ ಪಂದ್ಯಗಳನ್ನಾಡಿರುವ ಶ್ರೀಶಾಂತ್, ೪೦ ವಿಕೆಟ್ ಪಡೆದಿದ್ದಾರೆ. ೭ ವರ್ಷಗಳ ನಿಷೇಧದಅವಧಿಯಲ್ಲಿ ಮೇಕಪ್ ಹಚ್ಚಿ ಬಣ್ಣದ ಲೋಕಕ್ಕೂ ಎಂಟ್ರಿಕೊಟ್ಟಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಕೆಂಪೇಗೌಡ-೨ ಚಿತ್ರದಲ್ಲಿ ಅಭಿನಯಿಸಿದ್ದರು. ಇದರಜತೆಗೆ ಹಿಂದಿ ಹಾಗೂ ಮಲಯಾಳಂ ಚಿತ್ರದಲ್ಲೂ ನಟಿಸಿದ್ದರು.
ರಾಜಕೀಯಕ್ಕೂ ಪ್ರವೇಶಿಸಿದ ಅವರು, ತಿರುವನಂತಪುರಕ್ಷೇತ್ರದಿಂದ ವಿಧಾನಸಭಾಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೈ ಉಮೇದುವಾರ ವಿ.ಎನ್. ಶಂಕರ್ ವಿರುದ್ಧ ಪರಾಭವಗೊಂಡಿದ್ದರು.

Share

Leave a Comment