ಮತಾಂಧ ಟಿಪ್ಪುವಿನ ಜಯಂತಿ ನಿಷೇಧೀಸಿ ಹಿಂದೂ ಜನಜಾಗೃತಿ ಆಕ್ರೋಶ

ಮಂಗಳೂರು, ನ.೯- ಒಂದು ವೇಳೆ ಟಿಪ್ಪು ಜಯಂತಿ ಹೀಗೆಯೇ ಮುಂದುವರಿದರೆ, ನಾಳೆ ಅಕ್ಬರ, ಬಾಬರ, ಅಫಜಲಖಾನ ಇವರ ಜಯಂತಿಗಳೂ ಪ್ರಾರಂಭವಾಗಿ ಭಾರತವು ಇಸ್ಲಾಮೀಕರಣವಾಗಲು ಆರಂಭವಾಗಬಹುದು !
ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಟಿಪ್ಪು ಸುಲ್ತಾನನ ಜಯಂತಿಯನ್ನು ಆರಿಸಲಾಗುತ್ತಿದೆ. ಈಗ ಇದೇ ಟಿಪ್ಪುವಿನ ಜಯಂತಿ ಕೇವಲ ಕರ್ನಾಟಕದಲ್ಲಿಯಷ್ಟೇ ಅಲ್ಲ, ದೇಶದ ಅನೇಕ ರಾಜ್ಯಗಳಲ್ಲಿ ಪ್ರಾರಂಭವಾಗಿವೆ. ಯಾರು ಮೂಲ ಹಿಂದೂ ಹೆಸರಿರುವ ಮೈಸೂರನ್ನು ಬದಲಾಯಿಸಿ ಇಸ್ಲಾಮಿ ರಾಜ್ಯವೆಂದು ಟಿಪ್ಪು ಘೋಷಿಸಿದನೋ, ರಾಜ್ಯದ ಎಲ್ಲ ಕಾಫೀರರನ್ನು (ಮುಸಲ್ಮಾನೇತರರನ್ನು) ಮತಾಂತರಗೊಳಿಸಿ ಮುಸಲ್ಮಾನರನ್ನಾಗಿ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿದನೋ, ಯಾರು ‘ಎಲ್ಲ ಹಿಂದೂ ಸ್ತ್ರೀ-ಪುರುಷರಿಗೆ ಮುಸಲ್ಮಾನ ಧರ್ಮದ ದೀಕ್ಷೆಯನ್ನು ನೀಡಿರಿ ಮತ್ತು ಯಾರು ಸ್ವಇಚ್ಛೆಯಿಂದ ಮುಸಲ್ಮಾನ ಧರ್ಮದ ಸ್ವೀಕಾರವನ್ನು ಮಾಡುತ್ತಿಲ್ಲವೋ, ಅವರಿಗೆ ಬಲವಂತವಾಗಿ ಮುಸಲ್ಮಾನರನ್ನಾಗಿ ಮಾಡಿರಿ ಅಥವಾ ಕೊಲ್ಲಿರಿ, ಹಿಂದೂ ಸ್ತ್ರೀಯರನ್ನು ಹಿಡಿದು ತನ್ನಿರಿ ಮತ್ತು ಅವರನ್ನು ದಾಸಿಯರನ್ನಾಗಿ ಮಾಡಿ ಎಲ್ಲ ಮುಸಲ್ಮಾರಿಗೆ ಹಂಚಿರಿ ಎನ್ನುವ ಲಿಖಿತ ಆದೇಶವನ್ನು ಮುಸಲ್ಮಾನ ಅಧಿಕಾರಿಗಳಿಗೆ ಕಳುಹಿಸಿದನೋ, ಯಾರು ಸಾವಿರಾರು ಗೋವುಗಳ ಹತ್ಯೆ ಮಾಡಿದ, ಹಿಂದೂ ದೇವಸ್ಥಾನಗಳಲ್ಲಿ ಮೂರ್ತಿಗಳ ಧ್ವಂಸ, ದೇವಸ್ಥಾನಗಳ ನಾಶ, ನೂರಾರು ದೇವಸ್ಥಾನಗಳನ್ನು ಮಸೀದಿಯಾಗಿ ಪರಿವರ್ತಿಸಿದ, ಸಾವಿರಾರು ಹಿಂದೂಗಳ ಮತಾಂತರ, ಲಕ್ಷಗಟ್ಟಲೆ ಹಿಂದೂ ಸ್ತ್ರೀಯರ ಮೇಲೆ ದೌರ್ಜನ್ಯ ಮುಂತಾದ ಕುಕೃತ್ಯಗಳನ್ನು ಮಾಡಿದನೋ, ಈ ದೌರ್ಜನ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ದೌರ್ಜನ್ಯವನ್ನು ಕೊಡವ ಸಮಾಜದ ಮೇಲೆ ಮಾಡಿದನು, ಎಂದು ಮೈಸೂರು ಹತ್ತಿರದ ಶ್ರೀರಂಗಪಟ್ಟಣದ ಟಿಪ್ಪು ಗೋರಿ ಸಮೀಪದ ಶಿಲಾಲೇಖನದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಇಂತಹ ಕ್ರೂರ ರಾಜನ ಜಯಂತಿಯನ್ನು ಆಚರಿಸುವುದೆಂದರೆ, ಹಿಂದೂಗಳ ಗಾಯದ ಮೇಲೆ ಉದ್ದೇಶಪೂರ್ವಕವಾಗಿ ಬರೆ ಎಳೆಯುವ ಕೃತ್ಯವಾಗಿದ್ದು ಇದನ್ನು ರಾಜ್ಯದ ಕಾಂಗ್ರೆಸ ಮತ್ತು ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರಕಾರ ಮಾಡುತ್ತಿದೆ. ಇದು ಅಲ್ಪಸಂಖ್ಯಾತರ ಓಲೈಕೆ ಮತ್ತು ಹಿಂದೂಗಳನ್ನು ಕೆರಳಿಸುವ ಪ್ರಯತ್ನವಾಗಿದೆ. ಒಂದು ವೇಳೆ ಟಿಪ್ಪುವಿನಂತಹ ಕ್ರೂರಿ ಸುಲ್ತಾನನ ಜಯಂತಿ ಹೀಗೆಯೇ ಮುಂದುವರಿದರೆ, ನಾಳೆ ಅಕ್ಬರ, ಬಾಬರ, ಅಫಝಲಖಾನನ ಜಯಂತಿಗಳ ಆಚರಣೆಗಳು ಭಾರತದಲ್ಲಿ ಆರಂಭವಾಗಬಹುದು ಮತ್ತು ಭಾರತದ ಇಸ್ಲಾಮೀಕರಣ ಮಾಡುವ ದಿಶೆಯಲ್ಲಿ ಹೆಜ್ಜೆಯನ್ನಿಡುವುದು ಎನ್ನುವಂತಹ ಪ್ರಖರ ವಿಚಾರಗಳನ್ನು ಮಂಡಿಸುತ್ತಾ ಮತಾಂಧ ಟಿಪ್ಪುವಿನ ಜಯಂತಿಯ ಸರಕಾರಿ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
ಇಲ್ಲಿಯ ವರೆಗೆ ಹಿಂದೂವಿರೋಧ ಮತ್ತು ಅಲ್ಪಸಂಖ್ಯಾತರ ಓಲೈಕೆ ಇದೇ ಕಾಂಗ್ರೆಸ್ಸಿನ ರಾಜಕಾರಣದ ಕೇಂದ್ರಬಿಂದುವಾಗಿದೆ. ಇದರಿಂದಲೇ ಕಳೆದ ಚುನಾವಣೆಯಲ್ಲಿ ಹಿಂದೂಗಳು ಭಾರತದ ಬಹುತೇಕ ಭಾಗವನ್ನು ಕಾಂಗ್ರೆಸ್ಸಿನಿಂದ ಮುಕ್ತಗೊಳಿಸಿದೆ. ಆದರೂ ಕಾಂಗ್ರೆಸ್ ಏನೂ ಪಾಠ ಕಲಿಯಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ಅಮರನಾಥದಿಂದ ದಕ್ಷಿಣದ ವರೆಗಿನ ಎಲ್ಲ ಶಿವ ಮಂದಿರಗಳಿಗೆ ತೆರಳಿ ದರ್ಶನವನ್ನು ಪಡೆದು ತಾವು ‘ಜನಿವಾರಧಾರಿ ಶಿವಭಕ್ತ ಹಿಂದೂ ಎಂದು ಹೇಳುತ್ತಿದ್ದಾರೆ; ಆದರೆ ಅವರದೇ ಕರ್ನಾಟಕದ ಕಾಂಗ್ರೆಸ್ ಸರಕಾರ ದಕ್ಷಿಣದಲ್ಲಿ ಸಾವಿರಾರು ಶಿವ ದೇವಸ್ಥಾನಗಳನ್ನು ನಾಶಗೊಳಿಸಿ ಕ್ರೂರಕರ್ಮಿ ಟಿಪ್ಪುವಿನ ವೈಭವೀಕರಣಗೊಳಿಸುತ್ತಿದೆ, ಇದು ಕಾಂಗ್ರೆಸ್ಸಿನ ಕಪಟತನ ಮತ್ತು ದ್ವಂದ್ವ ನೀತಿಯಾಗಿದೆ. ಟಿಪ್ಪುವಿನ ಜಯಂತಿಯನ್ನು ರದ್ದುಗೊಳಿಸದಿದ್ದರೆ ಕಾಂಗ್ರೆಸ್ಸಿಗೆ ಹಿಂದೂಗಳ ಜನಾಕ್ರೋಶವನ್ನು ಎದುರಿಸಬೇಕಾಗುವುದು ಎಂದೂ ಸಮಿತಿಯು ತಿಳಿಸಿದೆ.

Leave a Comment