ಮತ್ತೆ ರೆಸಾರ್ಟ್ ರಾಜಕೀಯ ಶುರು

 

ಬೆಂಗಳೂರು : ಮೈತ್ರಿ ಸರ್ಕಾರ ರಚೆನೆಯ ಮೊದಲು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರೆಸಾರ್ಟ್ ರಾಜಕೀಯ ನಡೆಸಿದ್ದವು. ಇದೀಗ ಅದೇ ಮಾದರಿಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ತೊಡೆ ತಟ್ಟಲು, ಬಿಜೆಪಿ ರೆಸಾರ್ಟ್ ಪಾಲಿಟಿಕ್ಸ್ ಶುರ ಮಾಡಿದೆ. ಹೀಗಾಗಿ ಬಿಜೆಪಿಯ 105 ಶಾಸಕರನ್ನು ಬೆಂಗಳೂರಿನ ಹೊರವಲಯದ ರಮಾಡಾ ರೆಸಾರ್ಟ್ ಗೆ ಶಿಫ್ಟ್ ಮಾಡಿದೆ.

ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ವಿದ್ಯಾಮಾನಗಳು ಘಟಿಸುತ್ತಿವೆ. ಮೈತ್ರಿ ಮಣಿಸಲು ಬಿಜೆಪಿ. ಬಿಜೆಪಿ ಮಣಿಸಲು ದೋಸ್ತಿಗಳು ತಾಯಾರಿಯಲ್ಲಿ ನಿರತರಾಗಿದ್ದಾರೆ. ಈ ಹಿನ್ನಲೆಯಲ್ಲಿ ದೋಸ್ತಿಗಳು ರಿವರ್ಸ್ ಆಪರೇಷನ್ ಮಾಡ್ತಾರ, ಈ ಮೂಲಕ ಬಿಜೆಪಿ ಮಣಿಸಲು ಸಿದ್ದರಾಗಿದ್ದಾರೆ ಎಂಬ ಸುಳಿವಿನ ಕಾರಣಕ್ಕೆ, ರೆಸಾರ್ಟ್ ರಾಜಕೀಯ ಶುರು ಮಾಡಿದೆ.

ನಾಲ್ವರು ಅತೃಪ್ತ ಶಾಸಕರನ್ನು ಕರೆತರಲು ಸಿಎಂ ಪ್ಲಾನ್ ಮಾಡಿ, ರಾಮಲಿಂಗಾರೆಡ್ಡಿ, ಆನಂದ್ ಸಿಂಗ್, ರೋಷನ್ ಬೇಗ್ ಹಾಗೂ ಮುನಿರತ್ನ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿ, ಬಿಜೆಪಿಯ 105 ಶಾಸಕರು ಬೆಂಗಳೂರು ಹೊರಹೊಲಯದಲ್ಲಿರುವ ರಮಾಡಾ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಅತೃಪ್ತ ಶಾಸಕರಿಗೆ ಸುಪ್ರೀಂ ಕೋರ್ಟ್ ಆದೇಶ ನೈತಿಕ ಬಲ ಬಂದಿದೆ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವುದು ಅವರಿಗೆ ಬಿಟ್ಟ ವಿಚಾರ. ನಮ್ಮ ಎಲ್ಲ ಶಾಸಕರು ರೆಸಾರ್ಟ್‌ಗೆ ತೆರಳುತ್ತಿದ್ದೇವೆ. ಮುಂದಿನ ತೀರ್ಮಾನ ಸಭೆ ನಡೆಸಿ ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನೂ ಜೆಡಿಎಸ್ ಪಕ್ಷ ಕೂಡ ತಮ್ಮ ಶಾಸಕರನ್ನು ಬಿಟ್ಟು ಹೋಗದಂತೆ ರಕ್ಷಿಸುವ ನಿಟ್ಟಿನಲ್ಲಿ ಕಳೆದ ನಿನ್ನೆಯಿಂದಲೇ ರೆಸಾರ್ಟ್ ಪಾಲಿಟಿಕ್ಸ್ ಶುರುಮಾಡಿತ್ತು. ಇಂದು ಸದನಕ್ಕೆ ಜೆಡಿಎಸ್ ಶಾಸಕರು, ಸಚಿವರು ಕೂಡ ರೆಸಾರ್ಟ್ ನಿಂದಲೇ ಹಾಜರಾಗಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದು.

Leave a Comment