ಮತಪೆಟ್ಟಿಗೆಯೊಂದಿಗೆ ತೆರಳಿದ ಅಧಿಕಾರಿಗಳು

ದಾವಣಗೆರೆ, ಜ. 11 – ನಾಳೆ ನಡೆಯಲಿರುವ ಎಪಿಎಂಸಿ ಚುನಾವಣೆ ಹಿನ್ನಲೆಯಲ್ಲಿ ಇಂದು ನಗರದ ಮೋತಿವೀರಪ್ಪ ಕಾಲೇಜು ಮೈದಾನದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿತು. ಮತಗಟ್ಟೆ ಅಧಿಕಾರಿಗಳು ನಿಯೋಜಿತಗೊಂಡ ಸ್ಥಳಗಳಿಗೆ ಮತಪೆಟ್ಟಿಗೆಯೊಂದಿಗೆ ಇಂದು ಬೆಳಗ್ಗೆ ತೆರಳಿದ್ದಾರೆ. ಮತದಾನ ಪ್ರಕ್ರಿಯೆ ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಮತದಾನ ಮುಗಿದ ನಂತರ ಮೋತಿವೀರಪ್ಪ ಕಾಲೇಜಿನಲ್ಲಿ ಮೊಹರಾದ ಮತಪೆಟ್ಟಿಗೆಯನ್ನಿಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಜನವರಿ 14 ರಂದು ಮೋತಿವೀರಪ್ಪ ಕಾಲೇಜಿನಲ್ಲಿ ಬೆಳಗ್ಗೆ 8 ರಿಂದ ಮತ ಎಣಿಕೆ ಪ್ರಾರಂಭಗೊಳ್ಳಲಿದೆ ಎಂದು ತಹಶೀಲ್ದಾರ್ ಸಂತೋಷ್ ತಿಳಿಸಿದ್ದಾರೆ.

ಜಿಲ್ಲಾವಿವರ
ಜಿಲ್ಲೆಯಲ್ಲಿ ಒಟ್ಟು 80 ಕ್ಷೇತ್ರಗಳಿದ್ದು, ಅದರಲ್ಲಿ 16 ಕ್ಷೇತ್ರಗಳಲ್ಲಿ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, ಉಳಿದ 64 ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದೆ. ಒಟ್ಟಾರೆ 373 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 405 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ 64 ಬಸ್ ಗಳಲ್ಲಿ ಮತಗಟ್ಟೆ ಅಧಿಕಾರಿಗಳು ನಿಯೋಜಿತ ಸ್ಥಳಗಳಿಗೆ ಮತಪೆಟ್ಟಿಗೆಯೊಂದಿಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3.27.763 ಮತದಾರರಿದ್ದು, ಅವರಲ್ಲಿ 2.51.810 ಪುರುಷ ಮತದಾರರು, 75.953 ಮಹಿಳಾ ಮತದಾರರಿದ್ದಾರೆ ಎಂದು ಚುನಾವಣಾ ತಹಶೀಲ್ದಾರ್ ಎಸ್.ಎ.ಪ್ರಸಾದ್ ತಿಳಿಸಿದ್ದಾರೆ.

Leave a Comment