ಮತದಾರರ ಶ್ರೀರಕ್ಷೆ ನಮ್ಮ ಗೆಲುವಿನ ಅಸ್ತ್ರ: ಕಾರಜೋಳ

ಹುಬ್ಬಳ್ಳಿ, ನ21- ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು  ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರ ಈ ಉತ್ತಮ ಆಡಳಿತಕ್ಕಾಗಿ ಮತದಾರರು ನಮಗೆ ಶ್ರೀರಕ್ಷೆಯಾಗಿದ್ದು, ಉಪಚುನಾವಣೆಯ 15 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ನಿಶ್ಚಿತ ಎಂದು ಡಿಸಿಎಂ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆ ವಿಚಾರವಾಗಿ ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಬಿಜೆಪಿಯಲ್ಲಿ ಅಸಮಾಧಾನವಿದೆ.ಚುನಾವಣೆ ಎಂದಮೇಲೆ ಇದೆಲ್ಲ ಸಹಜ. ಚುನಾವಣಾ ಆಕಾಂಕ್ಷಿಗಳು ಎಂದ ಮೇಲೆ ಪಕ್ಷದಲ್ಲಿ ಕೊಂಚ ಅಸಮಾಧಾನವಿರುವುದು ಸಹಜ ಅಷ್ಟೇ. ಆದರೆ ಈ ಅಸಮಾಧಾನ ತಾತ್ಕಾಲಿಕ. ಇದನ್ನು ಪಕ್ಷದ ವರಿಷ್ಟರು ಸೂಕ್ತ ರೀತಿಯಲ್ಲಿ ನಿಭಾಯಿಸುವರು. ಚುನಾವಣಾ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಆದರೂ ನಮ್ಮ ಪಕ್ಷಕ್ಕೆ ಹಾನಿಮಾಡುವ  ಕೆಲಸವನ್ನು ಯಾರೂ ಮಾಡುವುದಿಲ್ಲ ಎಂದು ಅವರು ಹೇಳಿದರು.
ಎಲ್ಲರೂ ಒಗ್ಗಟ್ಟಾಗಿ ಉಪಚುನಾವಣೆಯನ್ನು  ಎದುರಿಸುತ್ತೇವೆ. ಸಿಎಂ ಯಡಿಯೂರಪ್ಪನವರು ರಾಜ್ಯದಲ್ಲಿ ನೆರೆಯ ಸಂದರ್ಭದಲ್ಲಿ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಕೆಲಸ ಮಾಡಿದ್ದಾರೆ.ಮತದಾರರ ಶ್ರೀರಕ್ಷೆ ನಮ್ಮ ಗೆಲುವಿಗೆ ಅಸ್ತ್ರವಾಗಿ ಪರಿಣಮಿಸಲಿದೆ ಎಂದು ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

Leave a Comment