ಮತದಾರರ ಪಟ್ಟಿ ಪರಿಷ್ಕರಣೆಗೆ ‘ಅವಧಿ ವಿಸ್ತರಣೆ’ : ನ.18 ರವರೆಗೆ ಗಡುವು

ಬೆಂಗಳೂರು.ಅ.೧೮ ಕೇಂದ್ರ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆ ಆಂದೋಲವನ್ನು ನವೆಂಬರ್ 18 ರವರೆಗೆ ವಿಸ್ತರಿಸಲಾಗಿದೆ. 2020ಕ್ಕೆ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಿಸುವ ಸಲುವಾಗಿ ರಾಜ್ಯಾದ್ಯಂತ ಸೆ.1 ರಿಂದ ಅ.15ದ ವರೆಗೆ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ ಆಂದೋಲನ ಕೈಗೊಳ್ಳಲಾಗಿತ್ತು. ಸದ್ಯ ಈ ಗಡುವನ್ನು ವಿಸ್ತರಿಸಲಾಗಿದೆ.

18 ವರ್ಷ ತುಂಬಿದವರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ನೊಂದಣಿ ಮಾಡಿಕೊಳ್ಳಲು, ವೋಟರ್ ಐಡಿಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸೆ.1 ರಿಂದ ಅ.15ದ ವರೆಗೆ ಕೈಗೊಂಡಿದ್ದ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ ಆಂದೋಲನ ನಿರೀಕ್ಷಿತ ಮಟ್ಟಕ್ಕೆ ತಲುಪದ ಹಿನ್ನೆಲೆಯಲ್ಲಿ ಅವಧಿಯನ್ನು ಈಗ ವಿಸ್ತರಿಸಲಾಗಿದೆ.

ಇನ್ನು ವೋಟರ್ ಹೆಲ್ಪ್ ಲೈನ್ ಅಥವಾ ಎನ್‍ವಿಎಚ್‍ಪಿ, ಪೋರ್ಟಲ್‍ನಲ್ಲಿ ಲಾಗಿನ್ ಆಗಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ, ಇಲ್ಲವೋ ಎಂದು ಖಾತ್ರಿಪಡಿಸಿಕೊಳ್ಳಬಹುದು. ವಿಶೇಷ ಚೇತನರ ಹಾಗೂ ಮತದಾರರು ಅಲ್ಲದವರು 1950ಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ…

Leave a Comment