ಮತದಾನ ಜಾಗೃತಿ ಕಾರ್ಯಕ್ರಮ

ಧಾರವಾಡ,ಏ.15-ಶಹರ ಗ್ರಾಹಕ ವಸ್ತುಗಳ ವಿತರಕರ ಸಂಘ ಹಾಗೂ ಕಿರಾಣಿ ವರ್ತಕರ ಸಂಘದ ವತಿಯಿಂದ ನಗರದ ಜುಬಿಲಿ ಸರ್ಕಲ್‍ನಲ್ಲಿ ಮತದಾರರಿಗೆ ಚಾಕಲೇಟ್ ನೀಡುವುದರ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಮತದಾರರು ಯಾವುದೇ ಆಮಿಷಕ್ಕೂ ಒಳಗಾಗದೆ ನಿರ್ಭಯವಾಗಿ ಮುಕ್ತ ಹಾಗೂ ಪಾರದರ್ಶಕ ತಮ್ಮ ಚಲಾಯಿಸಬೇಕು. ಮತದಾರರು ರಜೆ ಇದೆ ಎಂದು ಪ್ರವಾಸಕ್ಕೆ ಹೋಗದೆ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕೆಂದು ಸಂಘದ ಅಧ್ಯಕ್ಷ ಮಹೇಶ ಬೆಣ್ಣಿ ಮತದಾರರಲ್ಲಿ ವಿನಂತಿಸಿದರು.
ಬಿ.ಜಿ.ದೊಡಮನಿ, ರವಿ ಆಕಳವಾಡಿ, ಸಂತೋಷ ಪಾಟೀಲ, ಮಹೇಶ ಬೆಣ್ಣಿ, ಅಜಿತ್ ಬೋಗಾರ್, ಹಂಸರಾಜ ಅಂಗಡಿ, ಚಂದ್ರಶೇಖರ ಬೈರಪ್ಪನವರ, ಮಹಾಂತೇಶ ಪಟ್ಟಣಶೆಟ್ಟಿ, ವಿರೇಶ ಕೆಲಗೇರಿ, ಮುರಳಿ ಕಂದಕೂರ್, ಸುನಿಲ ಕಂದಕೂರ, ಬಸವರಾಜ ವಾಣಿ, ವಿಶ್ವನಾಥ, ಸಂಗನಬಸಟ್ಟಿ, ರಮೇಶ ಮುಗದೂರ, ಲಿಂಗರಾಜ ಪಾಟೀಲ, ಅಸ್ಲಮ್ ಅಟ್ಟಿಹಾಳ ಉಪಸ್ಥಿತರಿದ್ದರು.

Leave a Comment