ಮಣ್ಣಿನ ಪಾತ್ರೆ ಆರೋಗ್ಯಕರ

ಹಳೆಯ ಕಾಲದಿಂದಲೂ ಮಣ್ಣಿನ ಪಾತ್ರೆಯಲ್ಲಿ ಇಂದು ಆರೋಗ್ಯ ಪಾತ್ರೆ ಎನಿಸಿಕೊಂಡಿದ್ದು, ಮತ್ತೆ ಜನರು ಮಣ್ಣಿನ ಸಾಮಾಗ್ರಿಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಸಾಮಾನ್ಯ ಪಾತ್ರೆಗಳಿಗೆ ಹೋಲಿಸಿದರೆ ಮಣ್ಣಿನ ಪಾತ್ರೆಯಲ್ಲಿ ಸಾಂಬಾರು, ಸಾರು ಇನ್ನಿತರ ಅಡುಗೆ ಮಾಡುವಾಗ ಎಣ್ಣೆ ಅಧಿಕ ಉಪಯೋಗಿಸುವ ಅಗತ್ಯವಿರಲಾರದು. ಇದರಿಂದಾಗಿ ಕಡಿಮೆ ಎಣ್ಣೆಯನ್ನು ಬಳಸಿ ಉಚಿಯಾದ ಅಡುಗೆ ಸಿದ್ಧವಾಗುತ್ತದೆ. ಈ ಕಾರಣದಿಂದ ಅನಗತ್ಯ ಕೊಬ್ಬು ದೇಹಕ್ಕೆ ಹೋಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸಂಶೋಧಕರು ಸಹ ಹೇಳಿದ್ದಾರೆ.

* ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರ ಧೀರ್ಘಕಾಲ ಬಿಸಿಯಾಗಿಯೂ ರುಚಿಕರವಾಗಿಯೂ ಇರುತ್ತದೆ.

*ಮಣ್ಣಿನ ಪಾತ್ರೆಗಳಲ್ಲಿ ಔಷಧೀಯ ಗುಣಗಳಿರುವುದರಿಂದ ರುಚಿ ಮತ್ತು ಆರೋಗ್ಯಕ್ಕೆ ಸಹಕಾರಿ.

* ಅಸಿಡಿಟಿ ಸಮಸ್ಯೆ ಇದ್ದವರು ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದು.

* ಬೇರೆ ಅಡುಗೆ ಪಾತ್ರೆಗಳಿಗೆ ಸೇರಿಸಿ ನೋಡಿದರೆ ಅಗ್ಗದಲ್ಲಿ ದೊರೆಯುತ್ತದೆ.

*ದೇಹದ ಜೀರ್ಣ ಕ್ರಿಯೆಯನ್ನು ಸಮರ್ಪಕವಾಗಿಸಲು ಮಣ್ಣಿನ ಪಾತ್ರೆಯ ಆಹಾರ ಸಹಕಾರಿ. ಇದು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸಲು ಪ್ರಮುಖ ಪಾತ್ರವಹಿಸುತ್ತವೆ.

* ಅಂದ ಹಾಗೆ ಹೊಳಿಪಿನ ಮಿಶ್ರಣ ತಯಾರಿಸಲು ಹಲವು ಬಗೆಯ ರಾಸಾಯನಿಕ ವಸ್ತುಗಳನ್ನು ಬಳಸಿ ಮಡಿಕೆ ಮಾಡುವವರೂ ಸಹ ಇದ್ದಾರೆ. ಹೆಚ್ಚಿನ ಹೊಳೆಯುವ ಬಣ್ಣದಲ್ಲಿ ಸೀಸದಂಶ ಇರುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಮಣ್ಣಿನ ಪಾತ್ರೆಯನ್ನು ಸರಿಯಾಗಿ ನೋಡಿ ಕೊಂಡುಕೊಳ್ಳುವುದು ಉತ್ತಮ.

Leave a Comment