ಮಣಿಪಾಲಕ್ಕೆ ಹೊಸ ಯಂತ್ರ: ಪರೀಕ್ಷಾ ಸಾಮರ್ಥ್ಯ ಹೆಚ್ಚಳ

ಉಡುಪಿ, ಮೇ ೨೬- ಕೋವಿಡ್ ಶಂಕಿತರ ಗಂಟಲದ್ರವ ಸಂಗ್ರಹದ ಸಂಖ್ಯೆ ಹೆಚ್ಚುತ್ತಲೇ ಇರುವಾಗ ಪರೀಕ್ಷಾ ವರದಿಗಳೂ ಅಷ್ಟೇ ಪ್ರಮಾಣದಲ್ಲಿ ಬಾಕಿ ಆಗುತ್ತಿದೆ. ಸದ್ಯವೇ ಇದರ ಪರಿಹಾರಕ್ಕೆ ಪ್ರಯತ್ನಗಳು ಸಾಗುತ್ತಿವೆ. ಶಿವಮೊಗ್ಗದಲ್ಲಿ ಸರಕಾರಿ ಸ್ವಾಮ್ಯದಲ್ಲಿ ಎರಡು ಪ್ರಯೋಗಾಲಯಗಳು ಸ್ಥಾಪನೆಯಾಗುತ್ತಿದ್ದು ಅವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗ ನಡೆಸಿ ವರದಿ ಕಳುಹಿಸುವುದಾಗಿ ತಿಳಿಸಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಇನ್ನು ಎರಡು ಮೂರು ದಿನಗಳಲ್ಲಿ ಸ್ವಯಂಚಾಲಿತ ಯಂತ್ರೋಪಕರಣವನ್ನು ತರಿಸಲಾಗುತ್ತಿದೆ. ಇದರಿಂದ ಒಂದು ದಿನಕ್ಕೆ ೫೦೦-೬೦೦ ಮಾದರಿಗಳ ಪರೀಕ್ಷೆ ನಡೆಸಲು ಸಾಧ್ಯವಾಗುತ್ತದೆ. ಉಡುಪಿ ಜಿಲ್ಲಾಸ್ಪತ್ರೆಗೆ ಮಂಜೂರಾದ ಪ್ರಯೋಗಾಲಯ ಮೂರು ವಾರಗಳಲ್ಲಿ ಸ್ಥಾಪನೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

Share

Leave a Comment