ಮಡೊನ್ನಾಗೆ 60…………!

ಜಗತ್ತಿನಾದ್ಯಂತ ಇರುವ ಸಂಗೀತ ಪ್ರಿಯರನ್ನು ತನ್ನ ಸೌಂದರ್ಯ ಮತ್ತು ಸಂಗೀತದ ಗಾನ ಸುಧೆಯಿಂದ ಮಂತ್ರ ಮುಗ್ಧಗೊಳಿಸಿದ ಅನುಪಮ ಸುಂದರಿ ಮಡೊನ್ನಾಗೆ ೬೦ ವರ್ಷ ಸಂದಿದೆ. ಅರ್ರೆ… ಅರವತ್ತಾ ಯಿತಾ? ಎನ್ನುವಷ್ಟರ ಮಟ್ಟಿಗೆ ಈಗಲೂ ಅವರ ಸಹಜ ಸೌಂದರ್ಯ ವನ್ನು ಕಾಪಾಡಿಕೊಂಡು ಬಂದಿದ್ದಾರೆ.

ಅಮೆರಿಕಾದ ಖ್ಯಾತ ಗಾಯಕಿ ಮಡೊನ್ನಾ… ಆ. 16 ರಂದು 60ನೇ ಹುಟ್ಟುಹಬ್ಬ ಆಚರಿಸಿ ಕೊಂಡ ಮಡೊನ್ನಾಗೆ ಜಗತ್ತಿನ ವಿವಿಧೆಡೆ ಇರುವ ಅಭಿಮಾನಿಗಳ ಶುಭಾಷಯದ ಮಹಾ ಪೂರವನ್ನೇ ಹರಿಸಿದ್ದಾರೆ.

ಕಳೆದ 40 ವರ್ಷದಿಂದ ಗಾಯನ ಕ್ಷೇತ್ರ ದಲ್ಲಿ ಮೋಡಿ ಮಾಡಿರುವ ಮಡೊನ್ನಾ. ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ನೊಂದಾಯಿಸಿದ್ದಾರೆ. 60 ವರ್ಷವಾದರೂ ಇನ್ನು ಗಾಯನ ಮುಂದುವರಿಸಿದ್ದಾರೆ. 6 ಮಕ್ಕಳಲ್ಲಿ ನಾಲ್ವರನ್ನೂ ಆಫ್ರಿಕಾದಿಂದ ದತ್ತು ಪಡೆದಿದ್ದಾರೆ.

leo

ಅಳಿವಿನಂಚಿನಲ್ಲಿ ಹಿಮ ಚಿರತೆ

ಹಿಮ ಚಿರತೆ ಅಳಿವಿನಂಚಿನಲ್ಲಿವೆ. ಇದಕ್ಕಾಗಿಯೇ ಚೀನಾ ಸರ್ಕಾರ ಅವುಗಳ ರಕ್ಷಣೆಗೆ ಮುಂದಾಗಿದ್ದಾರೆ. ಹಿಮ ಚಿರತೆ ೧.೫ ಮೀಟರ್ ಉದ್ದ. ೧೦೦ ಕೆಜಿ ಸರಾಸರಿ ತೂಕವಿರುತ್ತವೆ. ಮಾಮೂಲಿ ಚಿರತೆಗಿಂತ ಹೆಚ್ಚು ದೊಡ್ಡ ಮತ್ತು ಉದ್ದವಾಗಿರುತ್ತವೆಯೂ ಕೂಡ. ಚೀನಾದಲ್ಲಿ ಚಿರತೆ ಕುರಿ ಕಂಡು ಬೇಲಿ ಹಾರಿ ಹೊಟ್ಟೆ ಬಿರಿಯುವತನಕ ತಿಂದು ತೇಗಿತ್ತು. ಆದರೆ, ಮತ್ತೆ ಬೇಲಿ ಹಾರಲು ಬರಲಾಗಲಿಲ್ಲ. ಜನರು ಕಂಡು ಅದನ್ನು ಓಡಿಸುವ ಪ್ರಯತ್ನ ಮಾಡಿದರೂ ಈ ಚಿರತೆಗೆ ಓಡಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ಸಮಯದ ಬಳಿಕ ಹೊಟ್ಟೆ ಕರಗಿದಾಗ ಕಾಡಿನತ್ತ ತೆರಳಿದೆ.

snake-at-the-doctor

ಯುರೋಪ್‌ನ ಅತಿ ದೊಡ್ಡ ಹಾವು

ಯುರೋಪ್‌ನಲ್ಲಿ ಅತಿ ದೊಡ್ಡ ಹಾವು ಪತ್ತೆಯಾಗಿದೆ. ಹಾಗಂತ ಇದು ಎಲ್ಲಿಯೋ ಕಾಡಿನಲ್ಲಿ ಇಲ್ಲ ಬದಲಾಗಿ ಅಲ್ಲಿನ ಪ್ರಾಣಿಸಂಗ್ರಹಾಲಯದಲ್ಲಿದೆ. ಈ ಹಾವು ಜಗತ್ತಿನ ಅತಿ ದೊಡ್ಡ ಹಾವು ಎನ್ನುವ ಶ್ರೇಯಕ್ಕೆ ಪಾತ್ರವಾಗಿದೆ. ಸರಾಸರಿ ೬೦ ಕೆಜಿ ತೂಕ ಹೊಂದಿದೆ. ವೈದ್ಯರು ಅಲ್ಟ್ರಾ ಸೌಂಡ್ ಮೂಲಕ ಹಾವಿನ ಹೃದಯ ಮತ್ತು ಆರೋಗ್ಯ ತಪಾಸಣೆಯನ್ನೂ ಆಗಾಗ ಮಾಡುತ್ತಾರೆ. ತಜ್ಞರು ಇದೇ ಮಾದರಿಯ ತಪಾಸಣೆಯನ್ನು ಜಿರಾಫೆ, ಶಾರ್ಕ್‌ಗಳ ಮೇಲೂ ಮಾಡಿದ್ದಾರೆ. ಆಸಕ್ತಿಕರ ಸಂಗತಿ ಎಂದರೆ ಹಾವಿನ ಹೃದಯ ಮಾನವನ ಹೃದಯಕ್ಕಿಂತ ಭಿನ್ನವಾಗಿರುತ್ತದೆ ಎನ್ನುವುದನ್ನು ಪತ್ತೆ ಮಾಡಲಾಗಿದೆ.

Leave a Comment