ಮಡಿಕೇರಿ ಸಂತ್ರಸ್ತರಿಗೆ ದೇಣಿಗೆ

ಚಾಮರಾಜನಗರ ಅಗಸ್ಟ್.24- ಜಿಲ್ಲಾಸ್ಪತ್ರೆಯ ಹೊರ ಗುತ್ತಿಗೆ ನೌಕರರ ಸಂಘದಿಂದ ಮಡಿಕೇರಿಯ ಸಂತ್ರಸ್ತರಿಗೆ ದೇಣಿಗೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರು ನೌಕರರು ತಮ್ಮ ಸಂಬಳದ ಸ್ವಲ್ಪ ಹಣವನ್ನು ಸಂತ್ರಸ್ತರ ನಿಧಿಗೆ 13600 ರೂಗಳನ್ನು ಅರವಳಿಕೆ ತಜ್ಞರಾದ ಡಾ.ಮಹೇಶ್ ಅವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸಿ.ಮಹೇಶ್, ಉಪಾಧ್ಯಕ್ಷರಾದ ಸಂಪತ್ತುಕುಮಾರ್, ಕಾರ್ಯದರ್ಶಿ ಮಹದೇವಸ್ವಾಮಿ.ಎಸ್, ಗೌರವಧ್ಯಕ್ಷ ಶಿವಣ್ಣ, ಖಜಾಂಚಿ ಬಂಗಾರು, ಜಯಲಕ್ಷ್ಮಿ, ರೇಣುಕ, ಚಂದನ್,ಮಹದೇವಮ್ಮ ಇನ್ನು ಮುಂತಾದವರು ಹಾಜರಿದ್ದರು.

Leave a Comment