ಮಠದಲ್ಲಿ ರಾಜಕೀಯ ನಡೆಯಲ್ಲ : ಕರಂದ್ಲಾಜೆ

ನಾಗಮಂಗಲ, ಆ. 13- ಆದಿ ಚುಂಚನಗಿರಿ ಕ್ಷೇತ್ರ ಪವಿತ್ರವಾದ ಧಾರ್ಮಿಕ ಕ್ಷೇತ್ರ. ಇಲ್ಲಿ ಯಾವುದೇ ರೀತಿಯ ರಾಜಕೀಯ ನಡೆಯುತ್ತಿಲ್ಲ ಎಂದು ಸಂಸದೆ ಶೋಭ ಕರಂದ್ಲಾಜೆ ತಿಳಿಸಿದರು.
ಇಂದು ಬೆಳಿಗ್ಗೆ ಆದಿ ಚುಂಚನಗಿರಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಅಮಿತ್ ಶಾ ಅವರು ಸ್ವ ಇಚ್ಛೆಯಿಂದ ಶ್ರೀ ಮಠಕ್ಕೆ ಆಗಮಿಸಿದ್ದಾರೆ. ಮಠಕ್ಕೆ ಎಲ್ಲಾ ಪಕ್ಷದವರು ಬರುತ್ತಾರೆ ಹೋಗುತ್ತಾರೆ. ಇಲ್ಲಿ ಯಾವುದೇ ರೀತಿಯ ರಾಜಕೀಯ ಸ್ಪರ್ಶಕ್ಕೆ ಅವಕಾಶವಿರುವುದೇ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಅಮಿತ್ ಶಾ ಅವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿರುವುದು ಚುನಾವಣೆಯ ಗಿಮಿಕ್ ಎಂಬ ಆರೋಪಕ್ಕೆ ಉತ್ತರಿಸಿದ ಅವರು ಮಠಕ್ಕೆ ಬರುವವರೆಲ್ಲರೂ ರಾಜಕೀಯ ಲಾಭ ಪಡೆಯಲು ಎಂಬ ಮಾತು ಸರಿಯಲ್ಲ. ಧಾರ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ನುಸುಳುವುದಿಲ್ಲ. ಇಲ್ಲಿಗೆ ಬರುವವರು ಭಕ್ತರಾಗಷ್ಟೇ ಭೇಟಿ ನೀಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

Leave a Comment