ಮಟ್ಕಾ ಧಂಧೆ ನಿಷೇಧಕ್ಕೆ ಒತ್ತಾಯ

ರಾಯಚೂರು.ಜೂ.20- ಮಟ್ಕಾ ಧಂಧೆಯನ್ನು ಏಜೆಂಟರುಗಳು ರಾಜಾರೋಷವಾಗಿ ನಡೆಯುತ್ತಿದ್ದು ಇದರಿಂದ ಜಿಲ್ಲೆಯ ಯುವಕರ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಮಟ್ಕಾ ಜೂಜಾಟದಲ್ಲಿ ಜನರು ದುಡಿದ ಹಣವನ್ನೆಲ್ಲ ಸಂಸಾರಕ್ಕೆ ಕೊಡದೆ ಮಕ್ಕಳ ವಿದ್ಯಾಭ್ಯಾಸಕ್ಕೂ ಕೊಡದೆ ಈ ಜೂಜಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಯುವಕರ ನಾಗರಿಕರ ಮೇಲೆ ತೀವ್ರ ಪರಿಣಾಮ ಬೀರಿದ್ದು ಎಷ್ಟೋ ಸಂಸಾರಗಳು ಬೀದಿ ಪಾಲಾಗಿವೆ. ಈ ಕೂಡಲೇ ತಪ್ಪಿತಸ್ಥರ ವಿರುದ್ಧ ನಗರದಲ್ಲಿ ಮತ್ತು ನಗರಸಭೆ ಹತ್ತಿರ ಎಂ.ಈರಣ್ಣ ವೃತ್ತ, ಎಲ್‌ಬಿಎಸ್ ನಗರದಲ್ಲಿ ಚಿಕ್ಕ ವಯಸ್ಸಿನ ಯುವಕರು ಜೂಜಾಟದಲ್ಲಿ ಗುರಿಯಾಗಿದ್ದಾರೆ.
ಸದರಿ ವಿಷಯವನ್ನು ಪರಿಗಣಿಸಿ ಒಂದು ವಾರದಲ್ಲಿ ಮಟ್ಕಾ ಏಜೆಂಟರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಇಮ್ರಾನ್ ಬಡೇಸಾಬ್, ನರೇಶ, ಚಾಂದ್, ರಾಜು, ಪಾರೂಕ್ ಪಟೇಲ್ ಇನ್ನಿತರರು ಉಪಸ್ಥಿತರಿದ್ದರು.

Leave a Comment