ಮಟ್ಕಾ : ಓರ್ವನ ಬಂಧನ – 1 ಲಕ್ಷ ನಗದು ವಶ

ರಾಯಚೂರು.ನ.08- ಜಿಲ್ಲೆಯಲ್ಲಿ ಮಟ್ಕಾ ವಿರುದ್ಧ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡಿದ್ದು, ಲಿಂಗಸೂಗೂರಿನಲ್ಲಿ ಪೊಲೀಸರು ಮಟ್ಕಾ ವಿರುದ್ಧ ನಡೆಸಿದ್ದ ದಾಳಿಯಲ್ಲಿ ದರ್ವೇಶ ತಂದೆ ಬಾಬಾ ಸಾಹೇಬ್ ಇವರನ್ನು ಬಂಧಿಸಿ, ಮಟ್ಕಾ ಚೀಟಿಯೊಂದಿಗೆ 1.05 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಮಟ್ಕಾ ವಿರುದ್ಧ ಜಿಲ್ಲೆಯಾದ್ಯಂತ ಎಸ್ಪಿ ಅವರು ನಡೆಸಿದ ಕಾರ್ಯಾಚರಣೆ ಈಗಾಗಲೆ ಅನೇಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ ಸಂಪೂರ್ಣ ನಿಷೇಧಿಸಲು ಪೊಲೀಸ್ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಲಾಗಿದೆ. ಇಲ್ಲಿವರೆಗೂ ನಡೆದ ಮಟ್ಕಾ ದಾಳಿಯಲ್ಲಿ ಲಿಂಗಸೂಗೂರಿನ ದರ್ವೇಶ ವಿರುದ್ಧ ಪ್ರಕರಣ ಅತ್ಯಂತ ದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ.

Leave a Comment