ಮಟಾಶ್ ಸಿದ್ಧ

ಮಟಾಶ್ ಚಿತ್ರ ಚಿತ್ರೀರಕಣ ಪೂರೈಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಎಸ್.ಡಿ ಅರವಿಂದ್ ನಿರ್ದೇಶನ ಮಾಡಿರುವ ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ.
ನೋಟು ಅಮಾನ್ಯವಾದ ಸಮಯದಲ್ಲಿ ನಡೆದ ಘಟನೆಯನ್ನಾಧರಿಸಿ ,ಸಸ್ಪೆನ್ಸ್,ಥ್ರಿಲ್ಲರ್ ಅಂಶಗಳನ್ನು ಮುಂದಿಟ್ಟುಕೊಂಡು ಚಿತ್ರ ಮಾಡಲಾಗಿದೆ. ಮೈಸೂರು, ವಿಜಯಪುರ ಮತ್ತು ಬೆಂಗಳೂರಿನ ಮೂರು ತಂಡಗಳು ಸಕಲೇಶಪುರದ ರೆಸಾರ್ಟ್‌ಗೆ ತೆರಳಿದಾಗ ಅಲ್ಲಿ ನಡೆಯುವ ಘಟನೆಗಳನ್ನಾಧಿರಿಸಿ ಚಿತ್ರ ಮಾಡಲಾಗಿದೆ ಎಂದು ನಿರ್ದೇಶಕ ಎಸ್.ಡಿ ಅರವಿಂದ್ ಹೇಳಿಕೊಂಡರು.
ಮೂರು ತಂಡ ಸಂತೋಷದಿಂದ ಒಂದೆಡೆ ಕಲೆತು ಆ ರಾತ್ರಿ ಖುಷಿಯಾಗಿರುತ್ತಾರೆ. ದಿನಬೆಳಗಾಗುವುದರಲ್ಲಿ ನಡೆದ ಘಟನೆಯಿಂದ ಎಲ್ಲರೂ ಒಬ್ಬರ ಮೇಲೆ ಒಬ್ಬರು ಆತಂಕಕ್ಕೆ ಸಿಲುಕಿ ಗಾಬರಿಯಾಗಿರುತ್ತಾರೆ. ಅದಕ್ಕೆ ಕಾರಣ ಏನು ಎನ್ನುವುದು ಚಿತ್ರದ ಕುತೂಹಲ ಎಂದರು.
ಚಿತ್ರಕ್ಕೆ ಅವಿನಾಶ್ ನರಸಿಂಹರಾಜು ಕಲಾನಿರ್ದೇಶನ, ಹಾಗು ರೋನಿ ಅಬ್ರಹಾಂ ಕ್ಯಾಮರವಿದ್ದು ನಿರ್ದೇಶಕರೇ ಸಂಗೀತ ನೀಡಿದ್ದು ೭ ಹಾಡುಗಳಿವೆ. ಚಿತ್ರದಲ್ಲಿ ಸಮರ್ಥ್ ನರಸಿಂಹರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರಧ್ವಜ್, ರಾಘು ರಾಮನಕೊಪ್ಪ, ನಂದಗೋಪಾಲ, ಸದಾನಂದ ಕಾಳಿ,ರವಿ ಸಿಂಗ್,ಸಿದ್ದಾಂತ್, ಸುಂದರ್, ಅಮೋಘ್, ರಾಹುಲ್ ಸೇರಿದಂತೆ ಮತ್ತಿತರ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ಏಳೆಂಟು ಮಂದಿ ಸೇರಿಕೊಂಡು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Leave a Comment