ಮಟನ್ ಮಾರುಕಟ್ಟೆಗೆ ಪೌರಾಯುಕ್ತರ ಭೇಟಿ

ಹಿರಿಯೂರು.ಜ.12: ಇಲ್ಲಿನ ಮಟನ್ ಮಾರುಕಟ್ಟೆಗೆ ಪೌರಾಯುಕ್ತ ಹೆಚ್.ಮಹಾಂತೇಶ್ ರವರು ಭೇಟಿ ನೀಡಿ ಪರಿಶೀಲಿಸಿದರು. ಸುಮಾರು ಇಪ್ಪತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮಾರುಕಟ್ಟೆ ಕಟ್ಟಡ ಇದ್ದು ಹೊರಭಾಗದಲ್ಲಿ ಮಟನ್ ವ್ಯಪಾರ ವಹಿವಾಟು ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಅನಧಿಕೃತ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ಕುರಿ ಮೇಕೆ ಕತ್ತರಿಸುವ ಮೊದಲು ಪಶುವೈದ್ಯರ ಪ್ರಮಾಣ ಪತ್ರ ಪಡೆದಿರಬೇಕು ಹಾಗೂ ಶುಚಿತ್ವ ಕಾಪಾಡಬೇಕು ಎಂದರು. ಇದೇ 27ರೊಳಗೆ ಮಟನ್ ಮಾರುಕಟ್ಟೆಯನ್ನು ದುರಸ್ತಿ ಕಾರ್ಯ ಮುಗಿಸಿ 28ರಂದು ಬಹಿರಂಗ ಹರಾಜು ಮಾಡಲಾಗುತ್ತದೆ. ಮಟನ್ ವ್ಯಾಪಾರಿಗಳು ಮಾರುಕಟ್ಟೆ ಒಳಗಡೆ ತಮ್ಮ ವ್ಯಾಪಾರ ವಹಿವಾಟು ನಡೆಸಬೇಕು ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಪರಿಸರ ಅಭಿಯಂತರ ಫೈರೋಜ್, ಆರೋಗ್ಯ ನಿರೀಕ್ಷ ಸುನೀಲ್ ಕುಮಾರ್ ಇದ್ದರು.

Leave a Comment