ಮಚ್ಚಿ ಬಜಾರ್, ಟಿಪ್ಪು ಸುಲ್ತಾನ್ ರಸ್ತೆ ಅಗಲೀಕರಣಕ್ಕೆ ಒತ್ತಾಯ

ರಾಯಚೂರು.ಜೂ.12- ತೀನ್ ಖಂದೀಲ್ ವೃತ್ತದಿಂದ ಎಂ.ಈರಣ್ಣ ವೃತ್ತ ವಯಾ ಅಶೋಕ ಡಿಪೋ ಹಾಗೂ ಟಿಪ್ಪು ಸುಲ್ತಾನ್ ರಸ್ತೆ ಅಗಲೀಕರಣದಲ್ಲಿ ವಿಫಲಗೊಂಡ ಶಾಸಕ ಡಾ.ಶಿವರಾಜ ಪಾಟೀಲ್ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿ, ನಗರದ ಉಸ್ಮಾನಿಯ ತರಕಾರಿ ಮಾರುಕಟ್ಟೆ ಕ್ಷೇಮಾಭಿವೃದ್ಧಿ ಸಂಘ ಮತ್ತು ಜೈ ಕರ್ನಾಟಕ ರಕ್ಷಣಾ ವೇದಿಕೆ ಜಂಟಿ ಧರಣಿ ನಡೆಸಿದರು.
ನಾಲ್ಕು ವರ್ಷಗಳಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿದೆ. 16.40 ಕೋಟಿ ರೂ. ನಗರೋತ್ಥಾನ ಯೋಜನೆಯಡಿ ಅನುದಾನ ಮುಂಜೂರಾಗಿ ರಸ್ತೆ ಅಗಲೀಕರಣಕ್ಕೆ ಟೆಂಡರ್ ಸಹ ಕರೆಯಲಾಗಿದೆ. ಜನನಿಬಿಡ ಈ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಅತ್ಯಗತ್ಯವಾಗಿದೆ. ಇದೇ ರೀತಿ ನಗರಸಭೆ ಕಾರ್ಯಾಲಯದ ಪಕ್ಕದಲ್ಲಿರುವ ಟಿಪ್ಪು ಸುಲ್ತಾನ್ ರಸ್ತೆಯ ಅಗಲೀಕರಣ ಪ್ರಸ್ತಾವನೆಯೂ ನೆನೆಗುದಿಗೆ ಬಿದ್ದಿದೆ.
ಈ ಹಿನ್ನೆಲೆ, ತಕ್ಷಣವೇ ಈ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಲ್ಲದಿದ್ದರೇ, ನಗರ ಬಂದ್ ಕರೆ ನೀಡಬೇಕಾಗುತ್ತದೆಂದು ಎಚ್ಚರಿಸಿದ್ದಾರೆ. ಜಿಲ್ಲಾ ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷ ಎನ್.ಮಹಾವೀರ ಹಾಗೂ ಜಿಲ್ಲಾ ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಶೋಕ ಶೆಟ್ಟಿ ಸೇರಿದಂತೆ ಪ್ರಭು ನಾಯಕ, ಬಸವರಾಜ, ಕೆ.ಬಿ.ಖಾಜಪ್ಪ, ಖಾನ್, ರಮೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment