ಮಗುವಿನ ಚಿಕಿತ್ಸೆಗಾಗಿ ವೇಷ ಧರಿಸಿದ ಯುವಕರು

ಮಂಗಳೂರು, ಫೆ.೪- ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮೂಡಬಿದ್ರೆಯ ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ಕಾರ್ಯಕರ್ತರು ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ೫ ವರ್ಷದ ಮಗುವಿಗೆ ನೆರವಾಗಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಸಂಘಟನೆಯ ಸದಸ್ಯ ವಿಕ್ಕಿ ಶೆಟ್ಟಿ ಬೆದ್ರ ಅವರು ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ವಿವಿಧ ಭಂಗಿಯ ವೇಷಗಳನ್ನು ಧರಿಸಿ ಹಲವು ಮಂದಿಗೆ ನೆರವಾಗಿದ್ದಾರೆ. ಕಟೀಲಿನಲ್ಲಿ ಈ ಬಾರಿ ಬ್ರಹ್ಮಕಲಶೋತ್ಸವ ಸಂದರ್ಭ ವಿಭಿನ್ನ ವೇಷ ಧರಿಸಿ ನಿಹಾರಿಕ ಎಂಬ ಪುಟ್ಟ ಮಗುವಿಗೆ ನೆರವಾಗಿದ್ದಾರೆ.

ಭಕ್ತಾದಿಗಳಿಂದ ಒಟ್ಟು ೩ ಲಕ್ಷದ ೧೩೬ ರೂ. ಸಂಗ್ರಹಿಸಿದ್ದಾರೆ. ಹಣವನ್ನು ಚೆಕ್ ಮೂಲಕ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕಟೀಲು ದೇಗುಲದ ಪ್ರಧಾನ ಅರ್ಚಕರಾದ ಹರಿನಾರಾಯಣ ಅಸ್ರಣ್ಣರವರು ನಿಹಾರಿಕಾಳ ತಾಯಿ ಸೌಮ್ಯ ಅವರಿಗೆ ಕ್ಷೇತ್ರದಲ್ಲಿ ಹಸ್ತಾಂತರಿಸಿದ್ದಾರೆ.

Leave a Comment