ಮಗಳ ಚಿಕಿತ್ಸೆಗೆ ಪರದಾಡುತ್ತಿರುವ ಅಪ್ಪ

ನೆರವು ನೀಡುವ ಕೈಗಳ ಬೇಡುತ್ತಿದೆ ಬಡಕುಟುಂಬ
ಮಂಗಳೂರು, ಸೆ.೧೪- ಎಲ್ಲರಂತೆ ಆಕೆಯ ಆರೋಗ್ಯ ಚೆನ್ನಾಗಿದ್ದರೆ ಇಷ್ಟರಲ್ಲಿ ಆಕೆ ಎದ್ದು ನಡೆಯಬೇಕಿತ್ತು, ಅಸ್ಪಷ್ಟ ಮಾತುಗಳಿಂದ ಮನೆಯವರಿಗೆ ಮುದ ನೀಡಬೇಕಿತ್ತು. ಆದರೆ ಆಕೆ ಹುಟ್ಟುತ್ತಲೇ ವಿಧಿಯ ಎಣಿಕೆ ಬೇರೆಯೇ ಆಗಿತ್ತು. ಮಲಹೋಗುವ ದ್ವಾರವನ್ನೇ ಹೊಂದಿರದ ತಂಝೀಮ್ ಚಿಕಿತ್ಸೆಗಾಗಿ ಬಡಕುಟುಂಬ ಈಗಾಗಲೇ ಲಕ್ಷಾಂತರ ರೂ. ವ್ಯಯಿಸಿದೆ. ಹೊಟ್ಟೆಯ ಎಡಭಾಗದಲ್ಲಿ ಮಲ ಹೊರಹೋಗಲು ತಾತ್ಕಾಲಿಕ ದ್ವಾರವನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಮಾಡಿದ್ದಾರೆ. ಆದರೆ ಇದೀಗ ೩ ವರ್ಷ ತುಂಬಿದ ಬಳಿಕ ಮತ್ತೆ ಮಲಹೋಗುವ ದ್ವಾರವನ್ನು ಅದು ಇರಬೇಕಾದ ಜಾಗದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಇರಿಸಬೇಕಾಗಿದೆ.
ಈಗಾಗಲೇ ಸಾಲ ಮಾಡಿ ಲಕ್ಷಾಂತರ ರೂ. ಖರ್ಚು ಮಾಡಿರುವ ಬಡಕುಟುಂಬ ಇನ್ನೂ ೩ ಲಕ್ಷ ರೂ. ಖರ್ಚಾಬಹುದು ಎನ್ನುವ ವೈದ್ಯರ ಮಾತು ಕೇಳಿ ತಲೆಯ ಮೇಲೆ ಕೈಹೊತ್ತು ಕೂತಿದೆ. ತಂಝೀಮ್ ಎಡಭಾಗದ ಕಿಡ್ನಿ ಮತ್ತು ಅನ್ನನಾಳದಲ್ಲೂ ಸಮಸ್ಯೆಯಿದ್ದು ಅದರ ಚಿಕಿತ್ಸೆಯನ್ನೂ ತುರ್ತಾಗಿ ನಡೆಸಬೇಕಿದೆ. ತಂಝೀಮ್ ಎಲ್ಲ ಮಕ್ಕಳಂತಾಗಬೇಕು ಎಂದು ಪಣತೊಟ್ಟಿರುವ ಅಪ್ಪ ಮುಹಮ್ಮದ್ ರಫೀಕ್ ಮುಲ್ಲಾ ಸಹೃದಯಿ ದಾನಿಗಳ ನೆರವಿಗೆ ಕೈಚಾಚಿದ್ದಾರೆ. ದಾನಿಗಳು ನೆರವನ್ನು ನೀಡಲು ಶಿರಸಿಯ ಇಂದಿರಾನಗರ ಹುಬ್ಬಳ್ಳಿ ರಸ್ತೆಯಲ್ಲಿರುವ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್‌ನ ಮುಹಮ್ಮದ್ ರಫೀಕ್ ಶರೀಫ್ ಸಾಬ್ ಮುಲ್ಲಾ ಅವರ ಖಾತೆಯನ್ನು ಬಳಸಬಹುದಾಗಿದೆ. ಖಾತೆ ಸಂಖ್ಯೆ ೩೪೩೬೭೮೬೨೧೩೬ ಐಎಫ್‌ಎಸ್‌ಸಿ ಎಸ್‌ಬಿಐಎನ್ ೦೦೦೦೯೧೭, ಮೊಬೈಲ್ ಸಂಖ್ಯೆ ೮೮೬೧೮೮೧೯೦೬ ಮೂಲಕ ಮುಹಮ್ಮದ್ ಶರೀಫ್‌ರನ್ನು ಸಂಪರ್ಕಿಸಬಹುದಾಗಿದೆ.

Leave a Comment