ಮಗಳು ಜಾನಕಿ ಧಾರಾವಾಹಿ ನಟಿ ಶೋಭಾ ದುರ್ಮರಣ

ಚಿತ್ರದುರ್ಗ, ಜು. ೧೮- ಸೀತಾರಾಮ್ ನಿರ್ದೇಶನದ `ಮಗಳು ಜಾನಕಿ’ ಧಾರಾವಾಹಿ ನಟಿ ಶೋಭಾ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ಚಿತ್ರದುರ್ಗ ಹೊರ ವಲದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4 ಕುಂಚನಾಳ ಗ್ರಾಮದ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ನಟಿ ಶೋಭಾ ಮೃತಪಟ್ಟಿದ್ದಾರೆ.
ಕಾರಿನಲ್ಲಿ ಒಟ್ಟು 8 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿಸಿರುವ ಪೊಲೀಸರು ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನೋವಾ ಕಾರು ಸಂಪೂರ್ಣ ಜಖಂಗೊಂಡಿರುವುದು ಅಪಘಾತದ ತೀವ್ರತೆಯನ್ನು ಬಿಂಬಿಸಿದೆ.
ಧಾರಾವಾಹಿ ನಿರ್ದೇಶಕ ಸೀತಾರಾಮ್ ಅವರು ಶೋಭಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಗಳು ಜಾನಕಿಯಲ್ಲಿ ಮಂಗಳಕ್ಕನ ಪಾತ್ರ ಮಾಡುತ್ತಿದ್ದ ಶೋಭಾ, ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಗು ಮುಖದ ಉತ್ತಮ ಪ್ರತಿಭೆ ಹಾಗೂ ಸೌಜನ್ಯದಿಂದ ವರ್ತಿಸುತ್ತಿದ್ದ ಮಂಗಳಕ್ಕ ಅವರ ಅನಿರೀಕ್ಷಿತ ಸಾವು ದಿಗ್ಭ್ರಮೆ ತಂದಿದೆ. ಮಗಳು ಜಾನಕಿ ತಂಡದ ಪರವಾಗಿ ಅವರ ನಿಧನಕ್ಕೆ ತೀವ್ರ ಸಂತಾಪ ಎಂದು ಫೇಸ್‌ಬುಕ್ ಮೂಲಕ ಸೀತಾರಾಮ್ ನಮನ ಸಲ್ಲಿಸಿದ್ದಾರೆ.

Leave a Comment