ಮಕ್ಕಳ ಹಕ್ಕು ರಕ್ಷಿಸಿ – ತಾಯಪ್ಪ

ರಾಯಚೂರು.ಡಿ.05- ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ, ಹಾಗೂ ಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ಹೋಗುವ ಅನಿಷ್ಟ ಪದ್ಧತಿ ಜೀವಂತವಾಗಿದೆಂದು ಹೈದ್ರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ ತಾಲೂಕು ಸಮಿತಿಯ ಸಂಯೋಜಕರಾದ ತಾಯಪ್ಪ ಹೆಗ್ಗಸನಹಳ್ಳಿ ಹೇಳಿದರು.

ಅವರು ಶಾಖವಾದಿ ಹೊನ್ನಯ್ಯ ತಾತ ದೇವಸ್ಥಾನದ ಆವರಣದಲ್ಲಿ ಶಾಖವಾದಿ ಗ್ರಾಮ ಪಂಚಾಯತಿ ಹಾಗೂ ಶೃತಿ ಸಂಸ್ಕೃತಿ ಸಂಸ್ಥೆ, ಹೈದ್ರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯೋಗದಡಿಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನ್ಯಾಯವಾದಿ ಜೆ.ಎಸ್.ವೀರಭದ್ರಪ್ಪ ಮಾತನಾಡಿ, ಮಕ್ಕಳು ಶಾಲೆಯನ್ನು ಬಿಟ್ಟು ಕೆಲಸಕ್ಕೆ ಹೋಗಿ ಮಕ್ಕಳ ಬಾಲ್ಯ ವಿವಾಹವಾಗುತ್ತಾರೆ. ಅದಕ್ಕಾಗಿ 6 ರಿಂದ 18 ವರ್ಷದ ಮಕ್ಕಳು ಶಾಲೆಯಲ್ಲಿರಬೇಕು, ಯಾವುದೇ ಪರಿಣಾಮದಿಂದ ಶಾಲೆ ಬಿಡುವುದು ಬಾಲ್ಯ ವಿವಾಹಗಳಾಗಬಾರದೆಂದರು.

ಶಾಖವಾದಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನ್ನರಾವ್ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲಾಗುವುದು ಪಂಚಾಯತಿ ವ್ಯಾಪ್ತಿಗೆ ಮೀರಿದ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆಂದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅಯ್ಯಣ್ಣ ಮತ್ತು ಹುಸೇನ್ ಬಿ. ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಮೆಹಬೂಬ್, ಉಪಾಧ್ಯಕ್ಷ ಸರೋಜಾ, ಗ್ರಾ.ಪಂ. ಸದಸ್ಯ ಹುಸೇನಿ ಪಲಕಂದೊಡ್ಡಿ, ಶಾಖವಾದಿ ಪ್ರೌಢಶಾಲೆ ಮುಖ್ಯಗುರು ಅನುರಾಧ, ಆರೋಗ್ಯ ಸಹಾಯಕ ತಿರುಪತಿ ಇನ್ನಿತರರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment