ಮಕ್ಕಳ ಹಕ್ಕು ರಕ್ಷಣೆ ನಮ್ಮೆಲ್ಲರ ಕರ್ತವ್ಯ

ರಾಯಚೂರು.ಡಿ.05- ಮಕ್ಕಳ ಹಕ್ಕು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ಹೋಗುವ ಅನಿಷ್ಟ ಪದ್ಧತಿ ಜೀವಂತವಾಗಿದೆಂದು ಹೈದ್ರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ ತಾಲೂಕು ಸಮಿತಿಯ ಸಂಯೋಜಕರಾದ ತಾಯಪ್ಪ ಹೆಗ್ಗಸನಹಳ್ಳಿ ಹೇಳಿದರು.

ಅವರು ಯಾಪಲದಿನ್ನಿ ಪ್ರೌಢಶಾಲಾವರಣದಲ್ಲಿ ಯಾಪಲದಿನ್ನಿ ಗ್ರಾಮ ಪಂಚಾಯತಿ ಹಾಗೂ ಶೃತಿ ಸಂಸ್ಕೃತಿ ಸಂಸ್ಥೆ, ಹೈದ್ರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಾಯಚೂರು ಇವರ ಸಂಯೋಗದಡಿಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳು ಶಾಲೆಯನ್ನು ಬಿಟ್ಟು ಕೆಲಸಕ್ಕೆ ಹೋಗಿ ಮಕ್ಕಳ ಬಾಲ್ಯ ವಿವಾಹವಾಗುತ್ತಾರೆ. ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕಾರಣ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನ್ಯಾಯವಾದಿ ಜೆ.ಎಸ್.ವೀರಭದ್ರಪ್ಪ ಮಾತನಾಡಿ, ಮಕ್ಕಳು ಬಾಲ್ಯವಿವಾಹವಾಗುತ್ತಾರೆ. ಅದಕ್ಕಾಗಿ 6 ರಿಂದ 18 ವರ್ಷದ ಮಕ್ಕಳು ಶಾಲೆಯಲ್ಲಿರಬೇಕು, ಯಾವುದೇ ಪರಿಣಾಮದಿಂದ ಶಾಲೆ ಬಿಡಬಾರದೆಂದರು. ಮಕ್ಕಳು ಸೂಕ್ತ ಪರಿಹಾರ ಕಂಡುಕೊಳ್ಳಲು ಇಂತಹ ವೇದಿಕೆ ಅವಶ್ಯಕವೆಂದರು.

ಯಾಪಲದಿನ್ನಿ ಗ್ರಾ.ಪಂ. ಕಾರ್ಯದರ್ಶಿಗಳಾದ ಗೋಪಾಲ, ಗ್ರಾ.ಪಂ. ಅಧ್ಯಕ್ಷ ಸೂಗೂರಪ್ಪ ನಾಯ್ಕ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಗೆ ಬರುವ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲಾಗುವುದು ಪಂಚಾಯತಿ ವ್ಯಾಪ್ತಿಗೆ ಮೀರಿದ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದೆಂದರು. ವಿದ್ಯಾರ್ಥಿಗಳಾದ ಮಂಜುಳಾ ಮತ್ತು ಶ್ರೀನಿವಾಸ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಸೂಗೂರಪ್ಪ ನಾಯ್ಕ, ಎಎಸ್‌ಐ ಜಿಲಾನಿ ಪಾಷಾ, ಗ್ರಾ.ಪಂ. ಸದಸ್ಯರಾದ ತಿಮ್ಮಪ್ಪ ಅಪ್ಪನದೊಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶ್ರೀದೇವಿ, ಯಾಪಲದಿನ್ನಿ ಪ್ರೌಢ ಶಾಲೆ ಮುಖ್ಯಗುರು ನಬೀಚಾಂದ್, ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿಗಳಾದ ರಸೀದ್ ಹಸ್ಮೀ ಉಪಸ್ಥಿತರಿದ್ದರು.

ತಾಲೂಕು ಸಂಯೋಜಕರು ಮಲ್ಲೇಶ ಅಸ್ಕಿಹಾಳ ಸೇರಿದಂತೆ ಶಾಲಾ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment